
ಮಾಜಿ ಸಚಿವ ಪ್ರಗತಿಪರ ರೈತ ಹೆಚ್ ಏಕಾಂತಯ್ಯ ಮತ್ತು ಕೆ ಎಮ್ ಇಂದಿರೇಶ್ ,ಕುಲಪತಿ ತೋಟಗಾರಿಕೆ ವಿವಿ ಬಾಗಲಕೋಟೆ
ತೋಟಗಾರಿಕೆ ವಿವಿಯ ಹನ್ನೊಂದನೇ ಘಟಿಕೋತ್ಸವದ ಸಂಭ್ರಮದಲ್ಲಿ ಈ ಬಾರಿ ಪ್ರಗತಿಪರ ರೈತ, ತೋಟಗಾರಿಕೆ ಬೆಳೆಗಾರ ಹೆಚ್ ಏಕಾಂತಯ್ಯ ಅವರಿಗೆ ಗೌರವ ಡಾಕ್ಟರೇಟ್ ನೀಡಲು ತೋಟಗಾರಿಕೆ ವಿವಿ ಆಡಳಿತ ಮಂಡಳಿ ತೀರ್ಮಾನಿಸಿದೆ.
ಬಾಗಲಕೋಟೆ: ತೋಟಗಾರಿಕೆ ವಿವಿ ಪ್ರತಿ ವರ್ಷ ತೋಟಗಾರಿಕೆ ಮೇಳ, ಆಯೋಜಿಸುತ್ತಿದ್ದು ಕಳೆದ ಒಂದು ದಶಕದ ಹಿಂದೆ ಆರಂಭವಾದ ವಿವಿ ವತಿಯಿಂದ ಸಂಶೋಧನೆ, ಪ್ರಯೋಗ ನಡೆಯುತ್ತಲಿದೆ. ಇನ್ನು ಕೃಷಿ ಮೇಳದಂತ ಜನೋಪಯೋಗಿ ಕಾರ್ಯಕ್ರಮಗಳು ನಡೆಯುತ್ತಲೇ ಬಂದಿವೆ. ಇನ್ನು ಪ್ರತಿ ವರ್ಷವೂ ತೋಟಗಾರಿಕೆ ವಿವಿ ಪ್ರಗತಿ ಪರ ರೈತರನ್ನು ಹುಡುಕುತ್ತಾ ಸನ್ಮಾನಿಸುತ್ತಿದೆ. ಪ್ರತಿ ವರ್ಷ ವಿವಿಯಲ್ಲಿ ಪದವಿ ಪಡೆದ ವಿದ್ಯಾರ್ಥಿಗಳು ಉತ್ತಮ ಹುದ್ದೆ ಸಾಧನೆ, ಸಂಶೋಧನೆ, ಪಿಹೆಚ್ ಡಿ, ಕೃಷಿ ಮಾಡುವಲ್ಲಿ ನಿರತರಾಗಿರುತ್ತಾರೆ. ಇದೆಲ್ಲ ತೋಟಗಾರಿಕೆ ವಿವಿಯ ಒಂದು ಭಾಗ .ಇನ್ನು ಬಾಗಲಕೋಟೆ ತೋಟಗಾರಿಕೆ ಈ ಬಾರಿ ಮತ್ತೊಂದು ಹೆಜ್ಜೆ ಇಟ್ಟಿದೆ. ಅದು ಕೃಷಿ ಸಾಧಕರನ್ನು ಗುರುತಿಸಿ ಗೌರವ ಡಾಕ್ಟರೇಟ್ ಪದವಿ ಪ್ರಧಾನ ಮಾಡುವ ಮಹತ್ತರ ಹೆಜ್ಜೆ.
ಮಾಜಿ ಸಚಿವ ಪ್ರಗತಿಪರ ರೈತ ತೋಟಗಾರಿಕೆ ಬೆಳೆಗಾರ ಹೆಚ್ ಏಕಾಂತಯ್ಯಗೆ ಗೌರವ ಡಾಕ್ಟರೇಟ್
ತೋಟಗಾರಿಕೆ ವಿವಿಯ ಹನ್ನೊಂದನೇ ಘಟಿಕೋತ್ಸವದ ಸಂಭ್ರಮದಲ್ಲಿ ಈ ಬಾರಿ ಪ್ರಗತಿಪರ ರೈತ, ತೋಟಗಾರಿಕೆ ಬೆಳೆಗಾರ ಹೆಚ್ ಏಕಾಂತಯ್ಯ ಅವರಿಗೆ ಗೌರವ ಡಾಕ್ಟರೇಟ್ ನೀಡಲು ತೋಟಗಾರಿಕೆ ವಿವಿ ಆಡಳಿತ ಮಂಡಳಿ ತೀರ್ಮಾನಿಸಿದೆ. ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿಯನ್ನು ಹೆಚ್ ಏಕಾಂತಯ್ಯ ಅವರಿಗೆ ನೀಡುತ್ತಿದೆ.