ರೆಬೆಲ್​ಸ್ಟಾರ್​ ಅಂಬರೀಶ್​ 3ನೇ ವರ್ಷದ ಪುಣ್ಯಸ್ಮರಣೆ: ನಮನ ಸಲ್ಲಿಸಿ ಭಾವುಕರಾದ ಸುಮಲತಾ

ಬೆಂಗಳೂರು:ಮಂಡ್ಯದ ಗಂಡು, ಮಾಜಿ ಸಚಿವ ದಿವಂಗತ ಅಂಬರೀಶ್ ಅವರ ಮೂರನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಇಂದು ಗಣ್ಯಾತಿಗಣ್ಯರು ರೆಬೆಲ್​ ಸ್ಟಾರ್​ ಸ್ಮರಣೆ ಮಾಡುತ್ತಿದ್ದಾರೆ.

ಅಭಿಮಾನಿಗಳ ಪ್ರೀತಿಯ ಅಂಬರೀಶ್ ಬಾರದ ಲೋಕಕ್ಕೆ ಪಯಣ ಬೆಳೆಸಿ ಇಂದಿನ ಮೂರು ವರ್ಷಗಳಾಗಿವೆ. ದೈಹಿಕವಾಗಿ ಅಂಬರೀಶ್ ನಮ್ಮೊಂದಿಗೆ ಇಲ್ಲದಿದ್ದರೂ, ಅಭಿಮಾನಿಗಳ ಹೃದಯದಲ್ಲಿ ‘ಕಲಿಯುಗದ ಕರ್ಣ’ನಾಗಿ ಉಳಿದುಕೊಂಡಿದ್ದಾರೆ. ಕಂಠೀರವ ಸ್ಟುಡಿಯೋದಲ್ಲಿನ ಅವರ ಸಮಾಧಿಗೆ ಇಂದು ಪತ್ನಿ, ಸಂಸದೆ ಸುಮಲತಾ ಮತ್ತು ಪುತ್ರ ಅಭಿಷೇಕ್​ ಪೂಜೆ ಸಲ್ಲಿಸಿ ನಮನ ಸಲ್ಲಿಸಿದ್ದಾರೆ. ಈ ವೇಳೆ ಸುಮಲತಾ ಭಾವುಕರಾಗಿದ್ದಾರೆ.

ಇನ್ನು ಅಬಕಾರಿ ಸಚಿವ ಕೆ.ಗೋಪಾಲಯ್ಯ ಕೂಡ ಅಂಬರೀಶ್​ ಸಮಾಧಿಗೆ ಭೇಟಿ ನೀಡಿ ಪುಷ್ಪಾರ್ಚನೆ ಸಲ್ಲಿಸಿ ಗೌರವ ಸಲ್ಲಿಸಿದ್ದಾರೆ. ಪುಣ್ಯಸ್ಮರಣೆ ಹಿನ್ನೆಲೆ ನಾಡಿನಾದ್ಯಂತ ಅಂಬರೀಶ್​ ಅಭಿಮಾನಿಗಳು ಕೂಡ ಸಾಗರೋಪಾದಿಯಲ್ಲಿ ಸ್ಟುಡಿಯೋಗೆ ಆಗಮಿಸಿ ಸಮಾಧಿ ದರ್ಶನ ಪಡೆಯುತ್ತಿದ್ದಾರೆ. ಜೊತೆಗೆ ಚಿತ್ರರಂಗದ ಗಣ್ಯರಾದ ರಾಕ್​ಲೈನ್​ ವೆಂಕಟೇಶ್​, ನಟ ದೊಡ್ಡಣ್ಣ, ಹಲವರು ಸಮಾಧಿಯತ್ತ ಆಗಮಿಸುತ್ತಿದ್ದಾರೆ. ಇನ್ನು ಇಂದು ಆಗಮಿಸುವ ಅಭಿಮಾನಿಗಳಿಗೆ ಅನ್ನಸಂತರ್ಪಣೆ ಕಾರ್ಯಕ್ರಮವನ್ನು ಕೂಡ ಹಮ್ಮಿಕೊಳ್ಳಲಾಗಿದೆ.

News First Live Kannada

Leave a comment

Your email address will not be published. Required fields are marked *