ದಿವಂಗತ ನಟ ರೆಬೆಲ್​ ಸ್ಟಾರ್​​ ಅಂಬರೀಶ್​ ನೆಚ್ಚಿನ ಶ್ವಾನ ಕನ್ವರ್​ ಇಂದು ಕೊನೆಯುಸಿರೆಳೆದಿದೆ. ಕನ್ವರ್​ ಅಂಬರೀಶ್​ ಅವರ ಮುದ್ದಿನ ಶ್ವಾನ. ‘ಅಂತ’ ಸಿನಿಮಾದ ತಮ್ಮ ಪಾತ್ರದ ಹೆಸರನ್ನೇ ಶ್ವಾನಕ್ಕೂ ಇಟ್ಟಿದ್ದರು ರೆಬೆಲ್ ಸ್ಟಾರ್. ಆಗಾಗ ಕನ್ವರ್​ ಜೊತೆ ರೌಂಡ್ಸ್​​ ಹಾಕೋದು ಅಂಬಿಗೆ ಬಹಳ ಖುಷಿ ಕೊಡ್ತಿತ್ತಂತೆ.

ಜೆ.ಪಿ ನಗರದ ನಿವಾಸಕ್ಕೆ ಬಂದ ಅಂಬರೀಶ್​​, ಸ್ವಲ್ಪ ವರ್ಷಗಳಲ್ಲಿ ಕನ್ವರ್​​ನ ಕರೆದುಕೊಂಡು ಬಂದಿದ್ರು ಎನ್ನಲಾಗ್ತಿದೆ. ಅಂಬರೀಶ್​ ಜೊತೆ ಸಾಕಷ್ಟು ಒಡನಾಟ ಹೊಂದಿದ್ದ ಕನ್ವರ್​, ಅಂಬರೀಶ್​ ಎಲ್ಲಿ ಹೋಗ್ತಿದ್ರೂ ಕೂಡ ಕನ್ವರ್​​ ಹಿಂಬಾಲಿಸ್ತಿತ್ತು. ಅಂಬರೀಶ್​ ನಿಧನದ ನಂತರ ಕನ್ವರ್​ ಊಟ-ತಿಂಡಿಯನ್ನೂ ಸರಿಯಾಗಿ ಸೇವಿಸ್ತಿರಲಿಲ್ಲ. ಅಂಬರೀಶ್​ ನಂತರ ಒಬ್ಬಂಟಿಯಾಗಿತ್ತು ಕನ್ವರ್​. ಇಂದಿಗೆ ಅಂಬರೀಶ್​ ಅಗಲಿ ಸರಿಯಾಗಿ ಎರಡೂವರೆ ವರ್ಷ. ಒಡೆಯನನ್ನ ಕಳೆದುಕೊಂಡ ಎರಡೂವರೆ ವರ್ಷಕ್ಕೆ ಕನ್ವರ್​​ ಪ್ರಾಣ ತ್ಯಜಿಸಿದ್ದಾನೆ.

ಸೈಂಟ್ ಬರ್ನಾಡ್ ತಳಿಯ ಶ್ವಾನವಾಗಿದ್ದ ಕನ್ವರ್​, ಅಂಬರೀಶ್​ ಪುತ್ರ ಅಭಿಷೇಕ್​ ಅಂಬರೀಶ್​​ಗೂ ಸಿಕ್ಕಾಪಟ್ಟೆ ಇಷ್ಟವಂತೆ. ಇನ್ನು ಅಂಬಿ ಇದ್ದಾಗ, ಯಾವಾಗಲೂ ಏ..ಕನ್ವರ್​ ಲಾಲ್​ ಬರೋ ಇಲ್ಲಿ ಅಂದ್ರೆ ಸಾಕು ಎಲ್ಲಿದ್ದರೂ ಅಂಬರೀಶ್​ ಮುಂದೆ ಪ್ರತ್ಯಕ್ಷವಾಗಿ ಬಿಡ್ತಿತ್ತು ಅನ್ನೋ ಮಾತಿದೆ. ಕನ್ವರ್​ ಹೊರತುಪಡಿಸಿ ಅಂಬರೀಶ್​ ಮನೆಯಲ್ಲಿ ‘ಬುಲ್​ಬುಲ್’​ ಅನ್ನೋ ಹೆಸರಿನ ಶ್ವಾನವೂ ಇದೆ. ಎರಡು ಶ್ವಾನಗಳಿಗೂ ತಮ್ಮ ಸಿನಿಮಾಗೆ ಸಂಬಂಧಪಟ್ಟ ಹೆಸರನ್ನೇ ಇಟ್ಟಿದ್ದರು ನಟ ಅಂಬರೀಶ್​.

The post ರೆಬೆಲ್​ ಸ್ಟಾರ್​ ಅಂಬರೀಶ್​ ನೆಚ್ಚಿನ ಶ್ವಾನ ‘ಕನ್ವರ್’ ನಿಧನ appeared first on News First Kannada.

Source: newsfirstlive.com

Source link