ಬೆಂಗಳೂರು: ಕೊರೊನಾ ಸೋಂಕಿನ ಮಧ್ಯೆ ರೆಮ್ಡಿಸಿವಿರ್ ಔಷಧಿಗೆ ದೇಶದಾದ್ಯಂತ ಬೇಡಿಕೆ ಹೆಚ್ಚಾಗಿದೆ. ಇದನ್ನೇ ಬಂಡವಾಳವಾಗಿಟ್ಟುಕೊಂಡ ಕೆಲವು ಕಳ್ಳ ವೈದ್ಯರು ಬ್ಲ್ಯಾಕ್ ಮಾರ್ಕೆಟ್​​ನಲ್ಲಿ ಈ ಔಷಧಿಯನ್ನು ಮೂರ್ನಾಲ್ಕು ಪಟ್ಟು ಹೆಚ್ಚು ಬೆಲೆಗೆ ಮಾರಾಟ ಮಾಡುತ್ತಿರುವ ಕುರಿತು ವರದಿಗಳಾಗಿವೆ.

ಈ ಮಧ್ಯೆ ಮತ್ತೊಂದು ಹೆಜ್ಜೆ ಮುಂದೆ ಹೋಗಿರೋ ಸೈಬರ್ ಖದೀಮರು ಸೋಷಿಯಲ್ ಮೀಡಿಯಾಗಳಲ್ಲಿ ರೆಮ್ಡಿಸಿವಿರ್ ಹೆಸರಿನಲ್ಲಿ ಜನರನ್ನ ವಂಚಿಸಲು ಮುಂದಾಗಿವೆ. ವಾಟ್ಸ್​ಆ್ಯಪ್ ಮೂಲಕ ಜನರಿಗೆ ತಮ್ಮ ಬಳಿ ರೆಮ್ಡಿಸಿವಿರ್ ಇಂಜೆಕ್ಷನ್ ಇದೆ ಎಂದು ಸೈಬರ್ ಖದೀಮರು ಮೆಸೇಜ್ ಕಳುಹಿಸುತ್ತಿದ್ದಾರಂತೆ.

ಈ ಮೆಸೇಜ್ ನೋಡಿ ಯಾರಾದ್ರೂ ಔಷಧಿಗೆ ಬೇಡಿಕೆ ಇಟ್ರೆ ಅವರಿಂದ ಅಡ್ವಾನ್ಸ್ ಕಣ ಕೊಡಿ ಇಂಜೆಕ್ಷನ್ ಕೊಡ್ತೇವೆ ಎಂದು ಹೇಳುವ ಮೂಲಕ ಹಣ ದೋಚಲು ಮುಂದಾಗಿದ್ದಾರಂತೆ. ಒಂದು ವೇಳೆ ಸೈಬರ್ ಖದೀಮರ ಮಾತು ನಂಬಿ ಅಡ್ವಾನ್ಸ್ ಹಣ ನೀಡಿದ್ರೆ ಹಣವೂ ಹೋಯ್ತು ಔಷಧಿಯೂ ಹೋಯ್ತು ಎನ್ನುವಂತಾಗೋದು ಪಕ್ಕಾ ಎಂದು ಪೊಲೀಸರು ಜನರಿಗೆ ಅರಿವು ಮೂಡಿಸುತ್ತಿದ್ದಾರೆ.

ಈಗಾಗ್ಲೇ ಬೆಂಗಳೂರು ಪೋಲಿಸ್ ಟ್ವಿಟರ್​ನಲ್ಲಿ ಹಣ ಕಳೆದುಕೊಂಡ ಹಲವರು ತಮಗಾದ ಅನ್ಯಾಯವನ್ನು ತೋಡಿಕೊಂಡಿದ್ದಾರೆ. ಈ ಹಿನ್ನೆಲೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಮೇಸೆಜ್ ಗಳ ಬಗ್ಗೆ ಎಚ್ಚರವಹಿಸುವಂತೆ ಪೊಲೀಸರು ಮನವಿ ಮಾಡಿಕೊಂಡಿದ್ದಾರೆ.

ಅಲ್ಲದೇ ಇಂಥ ಪ್ರಕರಣಗಳಿಗೆ ಸಂಬಂಧಿಸಿದಂತೆ ಇಬ್ಬರ ವಿರುದ್ಧ ಎಫ್​ಐಆರ್ ದಾಖಲಿಸಿದ್ದು 6 ಬ್ಯಾಂಕ್​​ ಅಕೌಂಟ್​ಗಳನ್ನ ನಿಷ್ಕ್ರಿಯಗೊಳಿಸಿದ್ದಾರೆ. ಆರೋಪಿಗಳ ಮೊಬೈಲ್ ಫೋನ್, ಎಟಿಎಂ ಕಾರ್ಡ್​ಗಳನ್ನ ವಶಕ್ಕೆ ಪಡೆದುಕೊಂಡಿದ್ದಾರೆ.

The post ರೆಮ್ಡೆಸಿವಿರ್ ಔಷಧಿ ಮೇಲೆ ಸೈಬರ್ ಖದೀಮರ ಕಣ್ಣು.. ಮೋಸ ಹೋಗದಿರಿ ಎಚ್ಚರ appeared first on News First Kannada.

Source: newsfirstlive.com

Source link