ತಮಿಳುನಾಡು: ದೇಶದಲ್ಲಿ ಕೊರೊನಾ ಎಷ್ಟರ ಮಟ್ಟಿಗೆ ತನ್ನ ಪ್ರಭಾವ ಬೀರಿದೆ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಷಯ. ಕೊರೊನಾದಿಂದ ದೂರವಿರಲು, ಎಲ್ಲಾ ರಾಜ್ಯ ಸರ್ಕಾರ ಸಕಲ ಸಿದ್ದತೆಗಳನ್ನ ಮಾಡಿಕೊಳ್ತಿದೆ. ಸಾಮಾಜಿಕ ಅಂತರ, ಮಾಸ್ಕ್​ನ್ನ ಕಡ್ಡಾಯ ಮಾಡಿ ಇದನ್ನ ಪಾಲಿಸುವಂತೆ ಹೇಳುತ್ತಿದೆ. ಇದನ್ನ ಜನ ಪಾಲೀಸಲೇ ಬೇಕು. ಆದ್ರೆ, ತಮಿಳುನಾಡಲ್ಲಿ ಸಾಮಾಜಿಕ ಅಂತರವನ್ನೇ ಜನ ಮರೆತಂತಿದೆ.

ಚೆನೈನ ಸರ್ಕಾರಿ ಕೈಲ್​ಪಾಕ್​ ವೈದ್ಯಕೀಯ​ ಕಾಲೇಜಿನಲ್ಲಿ ರೆಮ್​ಡಿಸಿವರ್​ ಲಸಿಕೆಯನ್ನ ಉಚಿತವಾಗಿ ನೀಡಲಾಗ್ತಾಯಿದ್ದು, ಅದನ್ನ ನಮ್ಮ ಮನೆಯವರಿಗೂ ತೆಗೆದುಕೊಳ್ಳೋಣ ಅನ್ನೋ ಭರದಲ್ಲಿ ಸಾವಿರಾರು ಜನ ಕಾಲೇಜಜಿನ ಲಸಿಕೆ ವಿತರಣೆ ಜಾಗಕ್ಕೆ ಗುಂಪುಗುಂಪಾಗಿ ಬಂದು ಪಡೆದು ಹೋಗಿದ್ದಾರೆ. ಕೊರೊನಾ ಅನ್ನೋ ಭಯವಿಲ್ಲದೇ, ಸಾಮಾಜಿಕ ಅಂತರ ಕಾಪಾಡದೇ ಇದ್ದಿದ್ದು ಜನರಲ್ಲಿ ಆತಂಕ ಮೂಡಿಸಿತ್ತು.

ರೆಮ್​ಡಿಸಿವರ್​ ಲಸಿಕೆಗೆ ಸಾಕಷ್ಟು ಡಿಮ್ಯಾಂಡ್​ ಇದ್ದು,ಈ ಔಷಧವನ್ನ ಜನ ಬ್ಲಾಕ್​ನಲ್ಲಿ ಡಬ್ಬಲ್​ ರೇಟ್​ಗೆ ಮಾರಾಟ ಮಾಡ್ತಿದ್ದರು. ಹೀಗಾಗಿ, ತಮಿಳುನಾಡು ವೈದ್ಯಕೀಯ ನಿಗಮ, ಈ ಬ್ಲಾಕ್​ನಲ್ಲಿ ಮಾರಾಮಾಡೋದನ್ನ ತಡೆಯಬೇಕು ಅನ್ನೋ ನಿಟ್ಟಿನಲ್ಲಿ ನೇರವಾಗಿ ಕೋವಿಡ್​ ಸೋಂಕಿತ ರೋಗಿಗಳ ಮನೆಯವರಿಗೇ, ನೀಡಲು ನಿರ್ಧರಿಸಿತ್ತು. ಅಲ್ಲದೇ, ಬರೀ ಕೆಎಂಸಿ ವೈದ್ಯಕೀಯ ಸರ್ಕಾರಿ ಕಾಲೇಜಿನಲ್ಲಿ ಕೊಡೋದಕ್ಕೆ ನಿರ್ಧರಿಸಿತ್ತು.

ಈ ರೆಮ್​ಡಿಸಿವರ್​ ಡ್ರಗ್​ನ್ನ ಬ್ಲಾಕ್​ನಲ್ಲಿ ಎಂಟು ಪಟ್ಟು ಜಾಸ್ತಿ ಮಾರಾಟ ಮಾಡಲಾಗ್ತಿತ್ತು. ಈ ರೀತಿ ಅದನ್ನ ₹20,000ಕ್ಕೆ ಮಾರಾಟ ಮಾಡ್ತಿದ್ದ 4 ಮಂದಿಯನ್ನ ಅರೆಸ್ಟ್​ ಮಾಡಲಾಗಿತ್ತು.

 

The post ರೆಮ್​ಡಿಸಿವರ್​ ಲಸಿಕೆಯನ್ನ ಮನೆಯವರಿಗೆ ಪಡೆಯೋದಕ್ಕೆ ಮುಗಿ ಬಿದ್ದ ಜನ appeared first on News First Kannada.

Source: newsfirstlive.com

Source link