ಬೆಂಗಳೂರು: ಕಾಳಸಂತೆಯಲ್ಲಿ ರೆಮ್‌ಡಿಸಿವಿರ್‌ ಮಾರಾಟ ಮಾಡುತ್ತಿದ್ದ ಐವರು ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ.

ಮಹಾಲಕ್ಷ್ಮಿ ಲೇಔಟ್‌ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು ಸಂಜೀವಿನಿ ಆಸ್ಪತ್ರೆಯ ಬಳಿ ರೆಮ್‌ಡಿಸಿವಿರ್‌ನ್ನು ಆರೋಪಿಗಳು ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ.

ವೈದ್ಯರ ಪ್ರಿಸ್ಕ್ರಿಪ್ಷನ್‌ ಇಲ್ಲದೇ ರೆಮ್‌ಡಿಸಿವಿರ್‌ ಮಾರಾಟ ಮಾಡಲಾಗ್ತಿತ್ತು..ನಿಗದಿತ ಬೆಲೆಗಿಂತ 8 ರಿಂದ 10 ಪಟ್ಟು ಬೆಲೆಗೆ ಕಾಳಸಂತೆಯಲ್ಲಿ ಆರೋಪಿಗಳು ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ. ಈ ಸಂಬಂಧ  ಮಹಾಲಕ್ಷ್ಮೀ ಲೇಔಟ್‌ ಪೊಲೀಸರು ನಾಲ್ವರನ್ನ ಬಂಧಿಸಿದ್ದರೆ ಶ್ರೀರಾಮ ಪುರ ಪೊಲೀಸ್ರು ಓರ್ವನನ್ನ ಬಂಧಿಸಿದ್ದಾರೆ. ಶಿವಕುಮಾರ್‌, ದರ್ಶನ್, ಗಿರೀಶ್, ನಾಗೇಶ್, ನಯಾಜ್‌ ಅಹ್ಮದ್ ಬಂಧಿತರು.

ಬಂಧಿತರಿಂದ 1 ದ್ವಿಚಕ್ರ ವಾಹನ, 2 ಮೊಬೈಲ್‌ ಫೋನ್‌ಗಳು, 6 ಸಾವಿರ ರೂ ನಗದು ಹಾಗೂ ಒಟ್ಟು ಐದು ರೆಮ್‌ಡಿಸಿವಿರ್‌ ಔಷಧಿ ಬಾಟಲಿಗಳನ್ನು ವಶಕ್ಕೆ ಪಡೆಯಲಾಗಿದೆ.

The post ರೆಮ್​ಡಿಸಿವಿರ್​ನ್ನು 8-10 ಪಟ್ಟು ಹೆಚ್ಚು ಬೆಲೆಗೆ ಮಾರ್ತಿದ್ದ ಐವರು ಅಂದರ್ appeared first on News First Kannada.

Source: newsfirstlive.com

Source link