ಬೆಂಗಳೂರು: ಬಿಬಿಎಂಪಿ ಮಾಜಿ ಕಾರ್ಪೊರೇಟರ್​​ ರೇಖಾ ಕದಿರೇಶ್ ಹತ್ಯೆ ಪ್ರಕರಣದ ತನಿಖೆಯನ್ನು ಪೊಲೀಸರು ತೀವ್ರಗೊಳಿಸಿದ್ದಾರೆ. ಹಾಡಹಗಲೇ ಚಾಕುವಿನಿಂದ ಕೊಚ್ಚಿ ರೇಖಾ ಕದಿರೇಶ್​​ ಅವರನ್ನು ಕೊಲೆ ಮಾಡಿದ ಈ ಪ್ರಕರಣದಲ್ಲಿ ಈಗಾಗಲೇ ಏಳು ಮಂದಿಯನ್ನು ಬಂಧಿಸಲಾಗಿದೆ. ಹೀಗಿರುವಾಗಲೇ ಪ್ರಕರಣ ತನಿಖೆಯಲ್ಲಿ ಪೊಲೀಸರಿಗೆ ರೋಚಕ ಸಂಗತಿಗಳು ಹೊರಬೀಳುತ್ತಿವೆ.

ಹೌದು, ಎಷ್ಟೋ ವರ್ಷಗಳ ಹಿಂದೆಯೇ ತನ್ನ ಹೆಂಡತಿ ರೇಖಾರ ಭದ್ರತೆಗಾಗಿ ಕದಿರೇಶ್​​​ ಹೊಸ ರಿವಾಲ್ವರ್​​​ ಖರೀದಿಸಿದ್ದರು. ಹಾಗೆಯೇ ರೇಖಾಗೆ ರಿವಾಲ್ವರ್​​​ ತರಬೇತಿಯೂ ಕೊಡಿಸಿದ್ದರು ಎಂಬ ಮಹತ್ವದ ವಿಚಾರ ಬಯಲಿಗೆ ಬಂದಿದೆ. ರೇಖಾ ಕದಿರೇಶ್ ಲೈಸನ್ಸ್ ಇರುವ​ ಲೋಡೆಡ್ ರಿವಾಲ್ವರ್ ಹೊಂದಿದ್ದರು ಎನ್ನಲಾಗಿದೆ.

ಇನ್ನು, ಕದಿರೇಶ್​​ ರೇಖಾರ ಸುರಕ್ಷತೆಗಾಗಿ 20 ಜನರ ತಂಡ ಆಯೋಜಿಸಿದ್ದರಂತೆ. ಯಾವಾಗಲೂ ಈ 20 ಜನರ ತಂಡ ರೇಖಾರಿಗೆ ಭದ್ರತೆ ಒದಗಿಸುತ್ತಿತ್ತಂತೆ. ಆದರೆ, ಅದೊಂದು ದಿನ 2018ರಲ್ಲಿ ಕದಿರೇಶ್ ಹತ್ಯೆ ನಡೆದೇ ಹೋಯ್ತು. ಆಗ ರೇಖಾ ಕದಿರೇಶ್​​ ಕಾಯುತ್ತಿದ್ದ 20 ಜನರ ತಂಡ ಹಂತ ಹಂತವಾಗಿ ಛಿದ್ರವಾಯ್ತು ಎನ್ನಲಾಗಿದೆ.

ಅದಾದ ಮೇಲೂ ರೇಖಾ ತನ್ನ ಸೇಫ್ಟಿಗಾಗಿ ಈ ರಿವಾಲ್ವರ್​​ ಬಳಸುತ್ತಿದ್ದರಂತೆ. ಆಕೆ ಹತ್ಯೆ ನಡೆದ ದಿನ ರಿವಾಲ್ವರ್ ಮನೆಯಲ್ಲೇ ಇತ್ತು ಎನ್ನಲಾಗಿದೆ. ಒಂದು ವೇಳೆ ರೇಖಾ ತನ್ನ ಬಳಿಯೇ ರಿವಲ್ವಾರ್ ಇಟ್ಟುಕೊಂಡಿದ್ದರೆ ಆರೋಪಿಗಳ ಕೊಲೆಯಂತೂ ಆಗುತ್ತಿತ್ತು.. ಆದರೆ, ಇದನ್ನು ಗಮನದಲ್ಲಿ ಇಟ್ಟುಕೊಂಡೇ ಆರೋಪಿಗಳು ಆಕೆ ಹತ್ಯೆಗೆ ಸಂಚು ರೂಪಿಸಿ ಸರಿಯಾದ ಟೈಮಿಗೆ ಕೊಂದು ಹಾಕಿದರು ಎಂದು ಹೇಳಲಾಗಿದೆ.

The post ರೇಖಾಳ ಸುರಕ್ಷತೆಗಾಗಿ ಲೈಸನ್ಸ್​ ರಿವಾಲ್ವರ್​​​​ ಖರೀದಿಸಿದ್ದ ಕದಿರೇಶ್; ತನಿಖೆ ವೇಳೆ ಹೊರಬಿತ್ತು ರೋಚಕ ಮಾಹಿತಿ appeared first on News First Kannada.

Source: newsfirstlive.com

Source link