ರೇಖಾ‌ ಕದಿರೇಶ್ ಕೊಲೆ: ಆರೋಪಿಗಳ ಪತ್ತೆಗೆ 4 ಪೊಲೀಸ್ ತಂಡ ರಚನೆ

ರೇಖಾ‌ ಕದಿರೇಶ್ ಕೊಲೆ: ಆರೋಪಿಗಳ ಪತ್ತೆಗೆ 4 ಪೊಲೀಸ್ ತಂಡ ರಚನೆ

ಬೆಂಗಳೂರು: ರೇಖಾ ಕದಿರೇಶ್​ ಕೊಲೆ ಪ್ರಕರಣದ ಆರೋಪಿಗಳನ್ನ ಪತ್ತೆಹಚ್ಚಲು ನಾಲ್ಕು ಪೊಲೀಸ್​ ತಂಡಗಳನ್ನ ರಚನೆ ಮಾಡಲಾಗಿದೆ.

ಆರೋಪಿಗಳು ಕೊಲೆಯ ಬಳಿಕ ಆಟೋ ಒಂದರಲ್ಲಿ ಎಸ್ಕೇಪ್ ಆಗಿದ್ದಾರೆ. ಪ್ರಮುಖ ಆರೋಪಿ ಪೀಟರ್ ತನ್ನ ಸಂಬಂಧಿಯ ಆಟೋ ಹಿಡಿದು ಪರಾರಿಯಾಗಿದ್ದಾನೆ. ಆತನ ಜೊತೆ ಉಳಿದ ಆರೋಪಿಗಳಾದ ಸೂರ್ಯ ಮತ್ತಿ ಸ್ಟೀಫನ್ ಕೂಡ ತೆರಳಿದ್ದಾರೆ ಎನ್ನಲಾಗಿದೆ

24 ಗಂಟೆಯ ಒಳಗಾಗಿ ಆರೋಪಿಗಳನ್ನ ಹಿಡಿಯಬೇಕು ಅಂತ ಸಿಎಂ ಯಡಿಯೂರಪ್ಪ ಗಡುವು ನೀಡಿದ್ದಾರೆ. ಹೀಗಾಗಿ ಪೊಲೀಸರು ಆರೋಪಿಗಳನ್ನ ಇವತ್ತೆ ಹಿಡಿಯಬೇಕೆಂಬ ಹಠಕ್ಕೆ ಬಿದ್ದಿದ್ದು, ಒಂದು ತಂಡ ಆರೋಪಿಗಳ ಮೇಲೆ ನಿಗಾ ಇಟ್ಟಿದೆ.

The post ರೇಖಾ‌ ಕದಿರೇಶ್ ಕೊಲೆ: ಆರೋಪಿಗಳ ಪತ್ತೆಗೆ 4 ಪೊಲೀಸ್ ತಂಡ ರಚನೆ appeared first on News First Kannada.

Source: newsfirstlive.com

Source link