ರೇಖಾ ಕದಿರೇಶ್​ ಕಗ್ಗೊಲೆಗೆ ಕಾರಣವಾಯ್ತಾ ಬಿಬಿಎಂಪಿ ಎಲೆಕ್ಷನ್ ಸ್ಪರ್ಧೆ ಮ್ಯಾಟರ್?

ರೇಖಾ ಕದಿರೇಶ್​ ಕಗ್ಗೊಲೆಗೆ ಕಾರಣವಾಯ್ತಾ ಬಿಬಿಎಂಪಿ ಎಲೆಕ್ಷನ್ ಸ್ಪರ್ಧೆ ಮ್ಯಾಟರ್?

ಬೆಂಗಳೂರು: ಮಾಜಿ ಕಾರ್ಪೊರೇಟರ್ ರೇಖಾ ಕದಿರೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ತನಿಖೆ ಮುಂದುವರಿದಿದೆ.

ಕೊಲೆ ಹಿಂದೆ ಪಾಲಿಕೆ ಸದಸ್ಯತ್ವದ ಮೇಲೆ ಕಣ್ಣು ಇತ್ತಾ? ಬಿಬಿಎಂಪಿ ಕಾರ್ಪೊರೇಟರ್ ಚುನಾವಣೆ ಸ್ಪರ್ಧೆ ವಿಚಾರದ ಒಳ ಜಗಳ ಇತ್ತೇ ಅನ್ನೋ ಆಯಾಮಾದ ಮೇಲೆ ತನಿಖೆಯನ್ನ ಮುಂದುವರಿಸಿರುವ ಅಧಿಕಾರಿಗಳು, ಮೂವತ್ತು ಮಂದಿ ಕುಟುಂಬಸ್ಥರನ್ನೂ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

ಕದಿರೇಶ್ ಅಕ್ಕ ಮಾಲಾ ಹಾಗೂ ರೇಖಾ ಕದಿರೇಶ್ ವೈಮನಸ್ಸಿನ ಬಗ್ಗೆ ಮಾಹಿತಿ ಸಿಕ್ಕಿದೆ ಎನ್ನಲಾಗಿದೆ. ರೇಖಾ ಕದಿರೇಶ್ ಬಿಟ್ಟು ಪಾಲಿಕೆ ಚುನಾವಣೆಯ ಸ್ಪರ್ಧೆ ಬಗ್ಗೆ ಚರ್ಚೆಯಾಗಿದೆ. ಮೃತ ಕದಿರೇಶ್ ಕುಟುಂಬದ ನಾಲ್ಕು ಜನರಿಂದ ಚುನಾವಣೆಗೆ ಪೈಪೋಟಿ ಇತ್ತು. ತನ್ನ ಕುಟುಂಬದಿಂದ ಯಾರಾದ್ರೂ ಒಬ್ಬರು ಚುನಾವಣೆಗೆ ನಿಲ್ಲಲಿ ಎಂದು ಕದಿರೇಶ್ ಅಕ್ಕ ಮಾಲ ಚರ್ಚೆ ನಡೆಸಿದ್ದಳಂತೆ.

ಅದರಂತೆ ಪೊಲೀಸರ ತನಿಖೆಯಲ್ಲಿ ಯಾಱರು ಈ ರೇಸ್​ನಲ್ಲಿದ್ದರು ಅನ್ನೋದು ಕೂಡ ಬಹಿರಂಗವಾಗಿದೆ. ರೇಖಾ ಕದಿರೇಶ್ ಜಿದ್ದಿಗೆ ಪಾಲಿಕೆ ಚುನಾವಣೆಗೆ ನಾಲ್ವರಿಂದ ತಯಾರಿ ನಡೆದಿತ್ತು. ಮೃತ ಕದಿರೇಶ್ ತಮ್ಮ ಸುರೇಶ್​​ನ ಮಗಳು, ಕದಿರೇಶ್ ಅವರ ಮೊದಲ ಹೆಂಡತಿಯ ಮಗಳು, ಕದಿರೇಶ್ ಅವರ ಅಕ್ಕ ಮಾಲರ ಸೊಸೆ ಹಾಗೂ ತಮಿಳುನಾಡಿನಲ್ಲಿರೋ ಮಗಳು ಪೈಪೋಟಿ ನಡೆಸಿದ್ದರು ಅಂತಾ ಹೇಳಲಾಗುತ್ತಿದೆ.

ಸೊಸೆ ಇಲ್ಲ ಮಗಳು ಚುನಾವಣೆಗೆ ಸ್ಫರ್ಧಿಸಲು ಅನ್ನೋದ್ರ ಬಗ್ಗೆ ಮಾಲಾ ಚರ್ಚೆ ಮಾಡಿದ್ದಳಂತೆ. ಯಾಕಂದ್ರೆ ಕದಿರೇಶ್ ಹತ್ಯೆ ಬಳಿಕ ಕುಟುಂಬಸ್ಥರನ್ನ ರೇಖಾ ಸಂಪೂರ್ಣವಾಗಿ ಅವೈಡ್ ಮಾಡಿದ್ದರಂತೆ. ಯಾರಿಗೂ ಹಣ ಕೊಡದೆ ಹತ್ತಿರಕ್ಕೂ ಅವರನ್ನ ಬಿಟ್ಟುಕೊಳ್ಳದೆ ದೂರ ಮಾಡಿದ್ದರು. ಇದೇ ವಿಚಾರಕ್ಕೆ ರೇಖಾ ಜೊತೆ ಜಿದ್ದಿಗೆ ಕುಟುಂಬಸ್ಥರು ಜಿದ್ದಿಗೆ ಬಿದ್ದಿದ್ದರು ಎನ್ನಲಾಗಿದೆ.

The post ರೇಖಾ ಕದಿರೇಶ್​ ಕಗ್ಗೊಲೆಗೆ ಕಾರಣವಾಯ್ತಾ ಬಿಬಿಎಂಪಿ ಎಲೆಕ್ಷನ್ ಸ್ಪರ್ಧೆ ಮ್ಯಾಟರ್? appeared first on News First Kannada.

Source: newsfirstlive.com

Source link