ಪತಿಯನ್ನ ಕಳೆದು ಕೊಂಡ ಮೇಲೆ ಸಮಾಜ ಮುಖಿ ಕೆಲಸದಲ್ಲಿ ಭಾಗಿ ಆಗಿದ್ದರು ರೇಖಾ ಖದಿರೇಶ್​​. ಎರಡು ವರ್ಷಗಳಿಂದ ನಿರಂತರವಾಗಿ ಅದರಲ್ಲೆ ನಿರತರಾಗಿದ್ದರು. ಅದೇ ಸಮಾಜ ಮುಖಿ ಸೇವೆ ಮಾಡಬೇಕು ಅಂತಾ ಬಂದಾಗಲೇ ಪ್ರಾಣವನ್ನ ಕಳೆದುಕೊಂಡಿದ್ದರು ರೇಖಾ ಕದಿರೇಶ್​​. ಹಾಗಾದ್ರೆ ಅವರ ಕೊನೆ ಕ್ಷಣ ಹೇಗಿತ್ತು? ಆ ಕೊನೆ ಗಳಿಗೆಯ 53 ನಿಮಿಷ ಏನೆಲ್ಲಾ ನಡೆಯಿತು? ನಿಜಕ್ಕು ಇದು ಪಕ್ಕಾ ಪ್ಲಾನಿಂಗ್ ನಲ್ಲೇ ನಡೆಯಿತಾ? ಈ ಕುರಿತ ಸಂಪೂರ್ಣ ಮಾಹಿತಿ ಈ ವರದಿಯಲ್ಲಿದೆ.

ರೇಖಾ ಕದಿರೇಶ್​​​. ಅವರು ಎರಡು ಬಾರಿ ಬಿಬಿಎಂಪಿ ಕಾರ್ಪೋರೇಟರ್ ಆಗಿದ್ದವರು. ಆದ್ರು ಕೂಡ ಅವರು ತಾನೊಬ್ಬ ಮಾಜಿ ಪಾಲಿಕೆ ಸದಸ್ಯೆ ಅಂದುಕೊಂಡು ಕೂತವರಲ್ಲ. ಅಲ್ಲದೇ 2018 ರಲ್ಲಿ ಪತಿಯನ್ನ ಕಳೆದುಕೊಂಡ ಮೇಲೆ ಕುಗ್ಗದೇ ಅವರೇ ಹಾಕಿಕೊಟ್ಟ ಹಾದಿಯಲ್ಲಿ ನಿರಂತರವಾಗಿ ಸಮಾಜ ಸೇವೆಯನ್ನ ಮಾಡಿಕೊಂಡು ಬರುತ್ತಿದ್ದರು. ನಿನ್ನೆ ಕೂಡ ಅವರು ಸಮಾಜ ಸೇವೆಗೆಂದು ಮನೆಯಿಂದ ಹೊರ ಬಂದಿದ್ದರು. ಫುಡ್​ ಕಿಟ್ ವಿತರಣೆಗೆ ಎಂದು ಬಂದವರು ಮತ್ತೆ ಮನೆಗೆ ಮರಳಿದ್ದು ಮಾತ್ರ ಹೆಣವಾಗಿ. ಅದಕ್ಕೆಲ್ಲಾ ಕಾರಣವಾಗಿದ್ದು ಆ 53 ನಿಮಿಷ.. ಹಾಗಾದ್ರೆ ಅವರು ಮನೆಯಿಂದ ಹೊರಟು ಅವರ ಮೇಲೆ ಹಲ್ಲೆ ಆಗೋವರೆಗೂ ಏನೆಲ್ಲಾ ಆಯ್ತು ಅನ್ನೋದ್ರ ವಿವರ ಇಲ್ಲಿದೆ.

ಆ ಕ್ಷಣ..
ನಿನ್ನೆ ಬೆಳಗ್ಗೆ ಸುಮಾರು 10.30 ರ ವೇಳೆಗೆ ರೇಖಾ ಕದಿರೇಶ್ ಮೇಲೆ ಹಲ್ಲೆ ನಡೆದಿತ್ತು. ಅದಕ್ಕು ಮುನ್ನ ನಡೆದಿದ್ದು ಒಂದು ರೋಚಕ ರೀತಿಯ ಸನ್ನಿವೇಷಗಳು ಆ ಎಲ್ಲಾ ಸನ್ನಿವೇಶಗಳು ಕೇವಲ 53 ನಿಮಿಷದಲ್ಲಿ ಅಂದುಕೊಂಡಿದ್ದ ಸಾಧಿಸಿಬಿಟ್ಟಿದ್ದರು ಹಂತಕರು. ಅಂದ್ರೆ ರೇಖಾ ಕದಿರೇಶ್ ಅವರು ಒಂದು ಫೋನ್ ಕಾಲ್​ನಿಂದ ಶುರು ಆಗುವ ಕೊನೆ ಕ್ಷಣ ಅವರು ರಕ್ತ ಮಡುವಿನಲ್ಲಿ ರಸ್ತೆಯಲ್ಲಿ ಬಿಳೋವರೆಗೂ ತೆಗೆದುಕೊಂಡ ಸಮಯವೇ 53 ನಿಮಿಷ. ಈ 53 ನಿಮಿಷದಲ್ಲಿ ರೇಖಾ ನೋಡ ನೋಡುತ್ತಿದ್ದಂಗೆ ಹಂತಕರು ಮನ ಬಂದಂತೆ ಹಲ್ಲೆ ನಡೆಸಿ ಎಸ್ಕೇಪ್ ಆಗಿದ್ದರು. ಹಲ್ಲೆ ನಡೆಸೋದಕ್ಕೆ ಆರಂಭ ಆಗುತ್ತಿದ್ದಂತೆ ರೇಖಾ ತಪ್ಪಿಸಿಕೊಳ್ಳೋದಕ್ಕೆ ಪಟ್ಟ ಪ್ರಯತ್ನವೆಲ್ಲವೂ ವ್ಯರ್ಥ ಆಗಿತ್ತು.

ಯೆಸ್​.​. ರಸ್ತೆಯಲ್ಲಿ ರೇಖಾ ಕದಿರೇಶ್​ ರನ್ನ ಅಟ್ಟಾಡಿಸಿಕೊಂಡು ಡ್ಯಾಗರ್​ಗಳಿಂದ ಹಲ್ಲೆ ಮಾಡಿದ್ದರು. ಹಾಗಾದ್ರೆ ಹಲ್ಲೆ ಮಾಡೋಕು ಮುನ್ನ ರೇಖಾ ಅವರ ಆ ಕೊನೆ ಗಳಿಗೆಯಲ್ಲಿ ಏನಾಗಿತ್ತು, ಸಾವಿನ ಆ ಕ್ಷಣ ಹೇಗಿತ್ತು?

ಸಮಯ : ಬೆಳಗ್ಗೆ 9.30
ನಿನ್ನೆ ಬೆಳಗ್ಗೆ 9.30 ರ ಸಮಯ. ಆ ವೇಳೆಯಲ್ಲಿ ಮನೆಯಲ್ಲಿಯೇ ಇದ್ದ ರೇಖಾ ಕದಿರೇಶ್​​​​ ರೆಡಿಯಾಗಿ ಒಂದು ಫೋನ್​​ ಕಾಲ್ ಮಾಡ್ತಾರೆ. ಅವರು ಕಾಲ್ ಮಾಡೋದು ಬೇರೆ ಯಾರಿಗೂ ಅಲ್ಲ, ಅದು ಅಪ್ಪು ಕುಟ್ಟಿಗೆ. ರೇಖಾ ಕದಿರೇಶ್ ಎಲ್ಲೇ ಹೋಗಲು ರೆಡಿ ಆದ್ರು ಮೊದಲು ಕಾಲ್ ಮಾಡುತ್ತಿದ್ದದ್ದೇ ಅಪ್ಪು ಕುಟ್ಟಿಗೆ

ಸಮಯ : ಬೆಳಗ್ಗೆ 9.31
ಯಾವಾಗ ಅಪ್ಪು ಕುಟ್ಟಿಗೆ ಫೋನ್ ಮಾಡಿ ರೇಖಾ ಕದಿರೇಶ್ ಮಾತನಾಡುತ್ತಾರೋ ಅದಾದ ಬಳಿಕ ಅಪ್ಪು ಕುಟ್ಟಿ ಮರು ಉತ್ತರವನ್ನ ಕೊಡುತ್ತಾನೆ. ಅದು ಮೇಡಮ್ ಎಲ್ಲವೂ ರೆಡಿ ಇದೆ ಅನ್ನುತ್ತಾನೆ. ಯಾಕಂದ್ರೆ ನಿನ್ನೆ ಅವರು ಫುಡ್ ಕಿಟ್ ಅನ್ನ ವಿತರಣೆ ಮಾಡೋದಕ್ಕಾಗಿ ಎಲ್ಲಾ ರೀತಿಯ ತಯಾರಿಯನ್ನ ಮಾಡಿಕೊಳ್ಳಲಾಗಿತ್ತು, ಅದೇ ವಿಚಾರವನ್ನ ಅಪ್ಪು ಕುಟ್ಟಿ ರೆಡಿ ಆಗಿದೆ ಅಂತಾ ರೇಖಾ ಬಳಿ ಹೇಳ್ತಾನೆ.

ಸಮಯ : ಬೆಳಗ್ಗೆ 9.32
ಇನ್ನು ಅಪ್ಪು ಕುಟ್ಟಿ ಎಲ್ಲವೂ ರೆಡಿ ಆಗಿದೆ ಅಂತಾ ಹೇಳುತ್ತಿದ್ದಂತೆ, ರೇಖಾ ಕದಿರೇಶ್ ಅವರು ಇಸ್ಕಾನ್ ನಿಂದ ಬರಬೇಕಿದ್ದ ಊಟ ಬಂದಿದ್ಯಾ ಎಂದು ಪ್ರಶ್ನೆಯನ್ನ ಮಾಡ್ತಾರೆ. ಯಾಕಂದ್ರೆ ಇಸ್ಕಾನ್ ನಿಂದ ಬರುವ ಊಟವನ್ನ ಅವರು ವಿತರಣೆ ಮಾಡೋದಕ್ಕೆ ನಿನ್ನೆ ಪ್ಲಾನಿಂಗ್ ಮಾಡಲಾಗಿತ್ತು.


ಸಮಯ : ಬೆಳಗ್ಗೆ 9.33
ಇಸ್ಕಾನ್ ಊಟ ಬಂದಿರೋದು ಕನ್ಫರ್ಮ್​ ಮಾಡಿಕೊಂಡಿದ್ದ ಅಪ್ಪು ಕುಟ್ಟಿ, ರೇಖಾ ಗಣೇಶ್ ಅವರು ಊಟ ರೆಡಿ ಇದ್ಯಾ ಅಂತಾ ಹೇಳಿದ ಮರುಕ್ಷಣವೇ, ಹಾ ಮೇಡಮ್ ಎಲ್ಲವೂ ರೆಡಿ ಇದೆ, ಆಲ್​ ರೆಡಿ ಬಂದಿದೆ. ಜಸ್ಟ್​ ನಿಮಗಾಗಿ ವೇಯ್ಟಿಂಗ್ ಅಂತಾ ಹೇಳ್ತಾದ್ದಾಗೆ, ಸರಿ ಆಯ್ತು ನಾನು ಹೊರಟಿದ್ದೀನಿ ಅಂತಾ ರೇಖಾ ಕದಿರೇಶ್ ಹೇಳಿ ಫೋನ್ ಅನ್ನ ಕಟ್ ಮಾಡಿರುತ್ತಾರೆ.

ಸಮಯ : ಬೆಳಗ್ಗೆ 9.40
ಯಾವಾಗ ರೇಖಾ ಕದಿರೇಶ್​ ಹೊರಡೋದಕ್ಕೆ ಎಲ್ಲಾ ರೀತಿಯ ಸಿದ್ದತೆಗಳನ್ನ ಮಾಡಿಕೊಳ್ಳೋದನ್ನ ಇಂಚಿಂಚೂ ಗಮನಿಸುತ್ತಿದ್ದರು ಕೆಲವರು. ರೇಖಾಳ ಮನೆ ಸಮೀದಲ್ಲೇ ಇದ್ದ ಪೀಟರ್​ ನಿವಾಸದ ಎದುರುಗಡೆ ಪೀಟರ್​ ತನ್ನ ಮನೆಯ ಹೊರಗಡೆ ನಿಂತುಕೊಂಡೇ ಎಲ್ಲವನ್ನು ವಾಚ್ ಮಾಡುತ್ತಿರುತ್ತಾನೆ. ಇನ್ನು ಸೂರ್ಯ ರೇಖಾಳ ಕಚೇರಿ ಪಕ್ಕದ ಎರಡನೇ ಮನೆಯ ಮುಂದೆ ನಿಂತುಕೊಂಡು ರೇಖಾಳ ಮೂವ್​​ಮೆಂಟ್ ಅನ್ನ ನೋಡುತ್ತಿರುತ್ತಾನೆ.

ಸಮಯ : ಬೆಳಗ್ಗೆ 9.45
ರೇಖಾ ಫುಡ್​ ಕಿಟ್ ವಿತರಣೆ ಜಾಗಕ್ಕೆ ಹೊರಡಲು ಸಿದ್ದವಾಗುತ್ತಿರುವಾಗಲೇ ಅವರಿಗೆ 9.45 ರ ಸುಮಾರಿಗೆ ಅಪ್ಪು ಕುಟ್ಟಿ ಮತ್ತೆ ಕರೆ ಮಾಡುತ್ತಾನೆ. ಫೋನ್ ಮಾಡಿ ಮೇಡಮ್​ ಊಟವನ್ನ ಪಾತ್ರಗೆ ಹಾಕಲು ತಿಳಿಸಿದ್ದಾರೆ. ಏನ್ ಮಾಡಲಿ ಅಂತಾ ಕೇಳುತ್ತಾನೆ. ಆಗ ರೇಖಾ ಕೂಡ ನೀನು ಸ್ಟಾರ್ಟ್​ ಮಾಡು ನಾನು ಬಂದು ಜಾಯಿನ್ ಆಗ್ತಿನಿ ಅಂತಾ ಹೇಳಿದ್ದರಂತೆ.

ಸಮಯ : ಬೆಳಗ್ಗೆ 9.50
ಇಷ್ಟೆಲ್ಲಾ ಆದಮೇಲೆ ರೇಖಾ ಕದಿರೇಶ್​​, ನೇರವಾಗಿ ನಡೆದುಕೊಂಡೇ ಮನೆಯಿಂದ ಕಚೇರಿಗೆ ಹೊರಟಿದ್ರು. ಹೀಗೆ ನಡೆದುಕೊಂಡು ಹೋಗುತ್ತಿರೋದನ್ನ ಪೀಟರ್ ಮತ್ತು ಸೂರ್ಯ ಎರಡು ದಿಕ್ಕಿನಲ್ಲಿ ನಿಂತುಕೊಂಡು ನೋಡಿಕೊಂಡಿರುತ್ತಾರೆ.

ಸಮಯ : ಬೆಳಗ್ಗೆ 9.53
ಇನ್ನು ಮನೆಯಿಂದ ರೇಖಾ ಕದಿರೇಶ್ ಹೊರಗಡೆ ಬರುತ್ತಿದ್ದಂತೆ, ಅದನ್ನ ಗಮನಿಸಿದ್ದ ಪೀಟರ್​​. ರೇಖಾ ಕದಿರೇಶ್ ಕಚೇರಿ ರೀಚ್ ಆಗೋಕು ಮುನ್ನವೇ ಪೀಟರ್ ಅಲ್ಲಿಗೆ ಬಂದು ಬಿಡುತ್ತಾನೆ. ಹೀಗೆ ಬಂದ ಪೀಟರ್​​ ಕಚೇರಿ ಬಳಿಯಿದ್ದ ಅಪ್ಪು ಕುಟ್ಟಿಯನ್ನ ನೋಡಿ ಅವನಿಗೆ ಕಾಣದಂತೆ ಸಿಸಿಕ್ಯಾಮೆರಾವನ್ನ ತಿರುಗಿಸುವ ಪ್ರಯತ್ನವನ್ನ ಮಾಡ್ತಾನೆ. ಇದನ್ನ ಅಪ್ಪು ಕುಟ್ಟಿ ಅಚಾನಕ್ ಆಗಿ ಗಮನಿಸಿರುತ್ತಾನೆ.

ಸಮಯ : ಬೆಳಗ್ಗೆ 9.57
ಕಚೇರಿ ಬಳಿ ಸುಮಾರು 500 ಜನರಿಗೆ ಊಟ ವಿತರಣೆ ಮಾಡೋದಕ್ಕಾಗಿ ತಯಾರಿ ನಡೆದಿರುತ್ತೇ. ಅಪ್ಪು ಕುಟ್ಟಿ ಅಲ್ಲೇ ಪಕ್ಕದಲ್ಲೇ ನಿಂತು ಪಾತ್ರೆಯನ್ನ ತೊಳೆಯುತ್ತಿರುತ್ತಾನೆ. ಆಗ ಅಲ್ಲಿಗೆ ಬಂದಿದ್ದ ಪೀಟರ್​​​​​ ಅಲ್ಲೇ ದೂರದಲ್ಲಿ ನಿಂತಿದ್ದ ಸೂರ್ಯನಿಗೆ ಕಣ್ಣಿನಲ್ಲೇ ಏನೋ ಸಿಗ್ನಲ್ ಕೊಡುತ್ತಿದ್ದನಂತೆ.

ಸಮಯ : ಬೆಳಗ್ಗೆ 10.00
ಅಷ್ಟೋತ್ತಿಗೆ ಕಚೇರಿ ಬಂದಿದ್ದ ರೇಖಾ ಕದಿರೇಶ್​​​, ಊಟ ಹಂಚಲು ಮುಂದಾಗ್ತಾರೆ. ಆಮೇಲೆ ಅವರು ತನ್ನ ಫೋನ್ ಅನ್ನ ಅಪ್ಪು ಕುಟ್ಟಿ ಕೈಗೆ ಕೊಟ್ಟು ಒಂದು ಫೋಟೋ ತೆಗೆಯುವಂತೆ ಹೇಳಿ ಫೋಟೋ ಪೋಸ್​ ಕೊಡೋದಕ್ಕೆ ರೆಡಿ ಆಗಿದ್ದರು. ಹೀಗೆ ಸುಮಾರು 10 ಗಂಟೆ 5 ನಿಮಿಷದ ವರೆಗೂ ಊಟವನ್ನ ಹಂಚುತ್ತಲೇ ಫೋಟೋ ತೆಗೆಸಿಕೊಳ್ಳುತ್ತಿದ್ದರಂತೆ ರೇಖಾ. ನಂತರ ಅಪ್ಪು ಕುಟ್ಟಿಯನ್ನ ಕರೆದು, ನೀನು ಉಟ ಬಡಿಸು ನಾನು ಮನೆಗೆ ಹೋಗಿ ಬರುವೇ, ಮನೆಗೆ ಯಾರೋ ಬಂದಿದ್ದಾರೆ ಎಂದು ಹೇಳಿ ಕಚೇರಿಯಿಂದ ನಗುತ್ತಲೇ ಹೊರಟಿದ್ದರಂತೆ ರೇಖಾ. ಹೀಗೆ ನಗುತ್ತಲೇ ಅಲ್ಲೇ ನಿಂತಿದ್ದ ಮಕ್ಕಳನ್ನ ಮಾತಾಡಿಸಿ ಹೊರಟಿದ್ದರಂತೆ

ಸಮಯ : ಬೆಳಗ್ಗೆ 10.15
ಹೀಗೆ ರೇಖಾ ತೆರಳುತ್ತಿದ್ದಂತೆ ಅಲ್ಲೇ ಇದ್ದ ಪೀಟರ್​​, ದೂರದಲ್ಲಿ ನಿಂತಿದ್ದ ಸೂರ್ಯನ ಕಡೆ ತಿರುಗಿ ಏನೋ ಒಂದು ಸನ್ನೆಯನ್ನ ಕೊಡುತ್ತಾನಂತೆ. ಅದನ್ನ ಕುದ್ದು ಅಪ್ಪು ಕುಟ್ಟಿಯೇ ನೋಡಿರುತ್ತಾನೆ. ಆಗ ಬೇರೆ ಏನೋ ಇರಬೋದು ಅಂದುಕೊಂಡು ಅಪ್ಪು ಕುಟ್ಟಿ ಸುಮ್ಮನೆ ಆಗಿಬಿಟ್ಟಿದ್ದನಂತೆ.

ಸಮಯ : ಬೆಳಗ್ಗೆ 10.17
ಇನ್ನು ಸಿಗ್ನಲ್ ಕೊಟ್ಟು ಪೀಟರ್ ಓಡಿ ಬಂದು ಮನೆಯ ಹತ್ತಿರ ಹೋಗುತ್ತಿದ್ದ ರೇಖಾಳ ಕೂದಲನ್ನ ಹಿಡಿದುಕೊಂಡು ​​ ಓಣಿಯಿಂದ ಎಳೆದು ಕೊಂಡು ಬಂದು ಡ್ಯಾಗರ್​ನಿಂದ ಹಲ್ಲೆ ಮಾಡೋದಕ್ಕೆ ಶುರು ಮಾಡ್ತಾನೆ. ಯಾವಾಗ ಪೀಟರ್​​ ಹಲ್ಲೆ ಮಾಡುತ್ತಾನೋ ಆಗಲೇ ಅಲ್ಲೇ ದೂರದಲ್ಲಿ ನಿಂತಿದ್ದ ಸೂರ್ಯ ಕೂಡ ತನ್ನ ಬಳಿಯಿದ್ದ ಮಾರಾಕಾಸ್ತ್ರವನ್ನ ಕೈಯಲ್ಲಿ ಹಿಡಿದುಕೊಂಡು ಬಂದು ರೇಖಾಳ ಮೇಲೆ ಹಲ್ಲೆ ಮಾಡೋದಕ್ಕೆ ಶುರು ಮಾಡ್ತಾರೆ. ಮನ ಬಂದಂತೆ ಹಲ್ಲೆ ಮಾಡುತ್ತಾರೆ.

ಸಮಯ : ಬೆಳಗ್ಗೆ 10.20
ಸುಮಾರು ಐದು ನಿಮಿಷಗಳ ಕಾಲ ರೇಖಾ ಕದಿರೇಶ್ ಮೇಲೆ ಹಲ್ಲೆ ಮಾಡಿ ಅಲ್ಲಿಂದ ಪೀಟರ್​​, ಸ್ಟೀಫನ್​​​​​, ಹಾಗು ಸೂರ್ಯ ಮೂರು ಮಂದಿಯೂ ಆಟೋದಲ್ಲಿ ಎಸ್ಕೇಪ್ ಆಗುತ್ತಾರೆ.

ಸಮುಯ : ಬೆಳಗ್ಗೆ 10.23
ಹೀಗೆ ಒಂದು ಕಡೆ ಹಲ್ಲೆ ಮಾಡಿ ಎಲ್ಲರು ಎಸ್ಕೇಪ್ ಆಗುತ್ತಿದ್ದಂತೆ ರೇಖಾ ಕದಿರೇಶ್​​ ಹಲ್ಲೆಗೊಳಗಾಗಿ ರಕ್ತದ ಮಡುವಿನಿಲ್ಲಿ ರಸ್ತೆ ಮೇಲೆ ಬಿದ್ದು ಒದ್ದಾಡುತ್ತಿರುತ್ತಾರೆ. ಹೀಗೆ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ ರೇಖಾ ಕದಿರೇಶ್​ ರನ್ನ ತಕ್ಷಣ ಆಸ್ಪತ್ರೆಗೆ ಶೀಫ್ಟ್ ಮಾಡಿಸುತ್ತಾರೆ ಅಲ್ಲಿದ್ದವರು. ಆದ್ರೆ ಆಸ್ಪತ್ರೆಗೆ ದಾಖಲಿಸಿದ ಬಳಿಕ ಚಿಕಿತ್ಸೆ ಫಲಿಸಿದೆ, ತೀರ್ವವಾಗಿ ರಕ್ತ ಸ್ರಾವ ವಾಗಿ ಅವರು ಕೊನೆಯುಸಿರನ್ನ ಎಳೆಯುತ್ತಾರೆ.

The post ರೇಖಾ ಕದಿರೇಶ್​ ಕೊನೇ ಕ್ಷಣದ ‘ಆ’ 53 ನಿಮಿಷಗಳು appeared first on News First Kannada.

Source: newsfirstlive.com

Source link