ಬೆಂಗಳೂರು: ಮಾಜಿ ಕಾರ್ಪೊರೇಟರ್ ರೇಖಾ ಕದಿರೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ವಿಭಾಗ ಪೊಲೀಸರು ಕಾಟನ್ ಪೇಟೆ ಠಾಣಾ ವ್ಯಾಪ್ತಿಯ ಕೆಲವು ಮನೆಗಳ ಮೇಲೆ ದಾಳಿ ಮಾಡಿದ್ದಾರೆ.

ರೌಡಿಶೀಟರ್​ಗಳು, ಎಂಓಬಿಗಳ ಮನೆಗಳ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ. ಪಶ್ಚಿಮ ವಿಭಾಗ ಡಿಸಿಪಿ ಸಂಜೀವ್ ಪಾಟೀಲ್ ನೇತೃತ್ವದಲ್ಲಿ ಶೋಧಕಾರ್ಯ ನಡೆದಿದೆ. ಕಾಟನ್ ಪೇಟೆ ಗಲ್ಲಿ-ಗಲ್ಲಿಗೂ ಎಂಟ್ರಿ ಕೊಟ್ಟು ಪೊಲೀಸರ ರೌಂಡ್ಸ್ ಹಾಕಿದ್ದಾರೆ.

ಇನ್ನುರೇಖಾ ಕದಿರೇಶ್ ಹತ್ಯೆಯಾದ ಏರಿಯಾದಲ್ಲಿ ಪೊಲೀಸರು ಭದ್ರತೆಯನ್ನು ಹೆಚ್ಚಿಸಿದ್ದಾರೆ. ಫುಲ್ ಬಂದೋಬಸ್ತ್ ನಡುವೆ ಪೊಲೀಸರು ಚೆಕ್ಕಿಂಗ್ ನಡೆಸಿದ್ದಾರೆ. ಸುಮಾರು 100ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಇಡೀ ಏರಿಯಾವನ್ನ ಕೂಂಬಿಂಗ್ ಮಾಡಿದ್ದಾರೆ.

The post ರೇಖಾ ಕದಿರೇಶ್ ಕೊಲೆ ಕೇಸ್​.. ಕಾಟನ್​ ಪೇಟೆಯ ಗಲ್ಲಿ ಗಲ್ಲಿಯಲ್ಲೂ ಪೊಲೀಸರಿಂದ ಕೂಂಬಿಂಗ್ appeared first on News First Kannada.

Source: newsfirstlive.com

Source link