ಬೆಂಗಳೂರು: ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಮೂವರು ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ. ಅರುಳ್, ಅಜಯ್, ಪುರುಷೋತ್ತಮ್ ಬಂಧಿತ ಆರೋಪಿಗಳು.

ಅರುಳ್ ಮೃತ ಕದಿರೇಶ್ ಸಹೋದರಿ ಮಾಲಾರ ಮಗ ಎನ್ನಲಾಗಿದೆ. ಇನ್ನು ಪುರುಷೋತ್ತಮ ಕೊಲೆಗೂ ಮುಂಚೆ ಸಿಸಿಟಿವಿಯನ್ನ ತಿರುಗಿಸಿದ್ದ ಆರೋಪಿ ಎನ್ನಲಾಗಿದೆ. ಇನ್ನು ಇಂದು ಮಧ್ಯಾಹ್ನ ಪೀಟರ್ ಮತ್ತು ಸೂರಿ ಕಾಲುಗೆ ಗುಂಡು ಹೊಡೆದು ವಶಕ್ಕೆ ಪಡೆದುಕೊಂಡಿದ್ದರು. ಇದೀಗ ಮೂವರನ್ನ ಬಂಧಿಸಿದ್ದಾರೆ.

ಪ್ರಕರಣ ಭೇದಿಸುವ ಸಂಬಂಧ 6 ಪ್ರತ್ಯೇಕ ತಂಡಗಳ ರಚನೆಯಾಗಿದೆ. ಇನ್ನು, ಇಂದು ಹತ್ಯೆ ಮಾಡಿರುವ ಮೊಬೈಲ್ ಫೋಟೇಜ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ

The post ರೇಖಾ ಕದಿರೇಶ್ ಕೊಲೆ ಕೇಸ್: ಮತ್ತೆ ಮೂವರು ಆರೋಪಿಗಳು ಅಂದರ್ appeared first on News First Kannada.

Source: newsfirstlive.com

Source link