ಬೆಂಗಳೂರು: ಮಾಜಿ ಕಾರ್ಪೊರೇಟರ್ ರೇಖಾ ಕದಿರೇಶ್ ಕೊಲೆ ಪ್ರಕರಣದ ಮತ್ತೋರ್ವ ಪ್ರಮುಖ ಅರೋಪಿಯನ್ನ ಅರೆಸ್ಟ್ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಸೆಲ್ವರಾಜ್ ಅಲಿಯಾಸ್ ಪೂಬಾಳನ್ ಅಲಿಯಾಸ್ ಕ್ಯಾಪ್ಟನ್ ಬಂಧಿತ ಅರೋಪಿ.

ನಾಲ್ಕು ತಿಂಗಳ ಹಿಂದೆ ಗಾರ್ಡನ್ ಶಿವ ಎಂಬಾತನ ಕೊಲೆಗೆ ಸಂಚು ಮಾಡಿದ್ದು, ಈ ಮೀಟಿಂಗ್​ನಲ್ಲಿ ಸೆಲ್ವರಾಜ್ ಭಾಗಿ ಅಗಿದ್ದ ಎನ್ನಲಾಗಿದೆ. ಮೀಟಿಂಗ್ ನಂತರ ರೇಖಾ ಕೊಲೆ ಮಾಡುವುದು ಎಂದು ನಿರ್ಧಾರ ಅಗಿತ್ತು. ರೇಖಾ ಕೊಲೆಗೆ ಪರೋಕ್ಷವಾಗಿ ಸಹಾಯ ಮಾಡಿದ್ದ ಸೆಲ್ವರಾಜ್, ಕೊಲೆ ಮಾಡಿದ ಬಳಿಕ ಅರೋಪಿಗಳಿಗೆ ಆಶ್ರಯ ನೀಡಿ, ಬಿರಿಯಾನಿ ಊಟ ಕೊಡಿಸಿದ್ದನಂತೆ.

ಈ ಹಿಂದೆ ಪೀಟರ್ ಜೊತೆ ಸೇರಿ ಶ್ರೀರಾಮಪುರದಲ್ಲಿ ಒಂದು ಕೊಲೆ ಮಾಡಿದ್ದ ಕ್ಯಾಪ್ಟನ್ ಅಲಿಯಾಸ್ ಸೆಲ್ವರಾಜ್ ಈಗ ರೇಖಾ ಕೊಲೆ ಪ್ರಕರಣದಲ್ಲಿ ಪೊಲೀಸರ ಅತಿಥಿಯಾಗಿದ್ದಾನೆ.

The post ರೇಖಾ ಕದಿರೇಶ್ ಕೊಲೆ ಪ್ರಕರಣದ ಮತ್ತೋರ್ವ ಪ್ರಮುಖ ಅರೋಪಿ ಅರೆಸ್ಟ್ appeared first on News First Kannada.

Source: newsfirstlive.com

Source link