ಅಂದು ಕದಿರೇಶ್​​ ಕೊಲೆಯಾದ ಮೇಲೆ ಆ ಒಂದು ಕೂಗು ಕೇಳಿಸಿತ್ತು. ಇಂದು ರೇಖಾ ಕದಿರೇಶ್​​ ಕೊಲೆ ಆದಾಗಲೂ ಅದೇ ತರಹದ ಕೂಗು ಮತ್ತೆ ಮರುಕಳಿಸಿತ್ತು. ಅದು ಬೇರೇನು ಅಲ್ಲಾ ರಾಜಕೀಯ ಅನ್ನೋದು. ಎರಡೂ ಕೂಲೆಯಲ್ಲಿ ಯಾಕೆ ರಾಜಕೀಯ ಪಿತೂರಿ ಅನ್ನೋ ಕೂಗು ಕೇಳಿ ಬಂದಿತ್ತು, ಕೇಳಿ ಬರುತ್ತಿದೆ. ಅದಕ್ಕೆ ಒಂದು ಪ್ರಮುಖವಾದ ಕಾರಣ ಇದೆ.

ಅಂದು ಕೊಲೆ ಆದಾಗಲೂ, ಇಂದು ಕೊಲೆ ಆದಾಗಲೂ ಪ್ರಕರಣ ರಾಜಕೀಯ ತಿರುವನ್ನ ಪಡೆದುಕೊಂಡಿತ್ತು. ಅಂದಿಗೂ ಇಂದಿಗೂ ಯಾವುದೇ ವ್ಯತ್ಯಾಸಗಳು ಕಂಡು ಬರಲಿಲ್ಲ. ಕೇವಲ ಎರಡು ಕೊಲೆಯಲ್ಲಿ ಕೇಳಿ ಬಂದಿದ್ದು ರಾಜಕೀಯ ಪಿತೂರಿ ಅನ್ನೋ ಕೂಗು. ಯಾಕೆ ಇಬ್ಬರ ಕೊಲೆಯಲ್ಲೂ ಈ ರಾಜಕೀಯ ತಳಕು ಹಾಕಿಕೊಂಡಿದ್ದು ಅಂದ್ರೆ ಕೇವಲ ಹೇಳಿಕೆಗಳಿಂದಾಗಿಯೇ.

ಅಂದು ಕದಿರೇಶ್ ಕೊಲೆ ನಡೆದಾಗ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿತ್ತು. ಒಂದು ಕಡೆ ಬಿಜೆಪಿ ಕಾರ್ಯಕರ್ತ ಆಗಿದ್ದ ಕದಿರೇಶ್​​ ಕೊಲೆ ಆಗುತ್ತಿದ್ದಂತೆ, ಇದೊಂದು ರಾಜಕೀಯದ ಪಿತೂರಿಯ ಕೊಲೆ ಎಂದು ಬಿಜೆಪಿ ಮುಖಂಡರು ಸಾಲು ಸಾಲಾಗಿ ಹೇಳಿಕೆಗಳನ್ನ ಕೊಡೋದಕ್ಕೆ ಶುರು ಮಾಡಿದ್ದರು. ಅವರ ಹೇಳಿಕೆಯನ್ನ ಸಹಿಸಲಾಗದೇ ಕೆಲವರು ಹೀಗೆ ಸುಪಾರಿ ಕೊಟ್ಟು ಕೊಲೆ ಮಾಡಿಸಿದ್ದಾರೆ ಅನ್ನೋ ಆರೋಪಗಳಾಗಿತ್ತು. ಆಗ ಕೊಟ್ಟ ಹೇಳಿಕೆಗಳೇನು.

ಎಸ್​​. ಅಂದು ಮೊದಲು ಹೇಳಿಕೆಯನ್ನ ಕೊಟ್ಟಿದ್ದು ಕೂಡ ಸಂಸದ ಪಿಸಿ ಮೋಹನ್ ಅವರೇ. ರೌಡಿಸಮ್ ಬಿಟ್ಟು ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದ ಕದಿರೇಶ್​​ ಎರಡು ಬಾರಿ ಕಾರ್ಪೋರೇಟರ್​ ಆಗಿದ್ದರು. ಅಲ್ಲದೇ ಪಿಸಿ ಮೋಹನ್ ಜೊತೆಯಲ್ಲಿ ಹೆಚ್ಚು ಗುರುತಿಸಿಕೊಂಡಿದ್ದರು. ಯಾವಾಗ ಕದಿರೇಶ್ ಕೊಲೆ ಆಗಿದೆ ಅನ್ನೋ ವಿಚಾರ ತಿಳಿದಿತ್ತೋ ಆಗ ಪಿಸಿ ಮೋಹನ್​ ಅವರು ಒಂದು ಹೇಳಿಕೆ ನೀಡಿದ್ದರು.

ರಾಜಕೀಯ ದ್ವೇಷದಿಂದಲೇ ಕೊಲೆ ನಡೆದಿತ್ತು ಅನ್ನೋದು ಬಿಜೆಪಿ ಮುಖಂಡರ ವಾದ ಆಗಿತ್ತು. ಅದೇ ಸಂದರ್ಭದಲ್ಲಿ ವಿಧಾನ ಸಭಾ ಅಧಿವೇಶನ ಕೂಡ ನಡೆಯುತ್ತಿದ್ದರಿಂದ, ಅದಿವೇಶನದಲ್ಲೂ ಕೂಡ ಕದಿರೇಶ್ ಕೊಲೆ ವಿಚಾರ ಮಾರ್ಧನಿಸಿತ್ತು. ಒಬ್ಬರಲ್ಲ ಇಬ್ಬರಲ್ಲ ಜಗದೀಶ್ ಶೆಟ್ಟರ್​ ಹಾದಿಯಾಗಿ ಎಲ್ಲಾ ನಾಯಕರು ಮಾತಿ ಬಾಣವನ್ನ ಹಾರಿಸಿದ್ದರು.

ಇಷ್ಟೆಲ್ಲಾ ಆರೋಪಗಳನ್ನ ಮಾಡೋದಕ್ಕೆ ಶುರು ಮಾಡಿದಾಗ ಆಡಳಿತ ಸರ್ಕಾರ ನಾಯಕರು ಕೂಡ ಅಧಿವೇಶನದಲ್ಲಿ ಹೇಳಿಕೆಗಳನ್ನ ಕೊಡೋದಕ್ಕೆ ಶುರು ಮಾಡಿದ್ದರು. ಅಲ್ಲದೇ ಅಂದು ಸಚಿವರಾಗಿದ್ದ ರಾಮಲಿಂಗಾ ರೆಡ್ಡಿಯವರು ಕದಿರೇಶ್ ವಿಚಾರವಾಗಿ ತನಿಖೆ ನಡೆಯುತ್ತಿದೆ ಆತುರ ಪಟ್ಟು ಏನೇನೋ ಹೇಳಿಕೆ ಕೊಡೋದು ಬೇಡಾ ಅನ್ನೋ ಮಾತನ್ನ ಹೇಳಿದ್ದರು. ಅದಾದ ಮೇಲೆ ಅಂದಿನ ಕೆಪಿಸಿಸಿ ಕಾರ್ಯಧ್ಯಕ್ಷರಾಗಿದ್ದ ದಿನೇಶ್ ಗುಂಡುರಾವ್ ಕೂಡ ಒಂದು ಹೇಳಿಕೆ ನೀಡಿದ್ದರು.

ಹೀಗೆ ರಾಜಕೀಯ ಕೆಸೆರೆರಚಾಟಕ್ಕೆ ಕದಿರೇಶ್​ ಕೊಲೆ ಕಾರಣ ಆಗಿತ್ತು. ಆದ್ರೆ ಅದು ಕೊನೆಯಲ್ಲಿ ವೈಯಕ್ತಿಕ ದ್ವೇಷಕ್ಕೆ ಕೊಲೆ ಆಗಿತ್ತು ಅನ್ನೋದು ತನಿಖೆ ಮುಕ್ತಾಯ ಗೊಂಡ ಬಳಿಕ ತಿಳಿದು ಬಂದಿತ್ತು.

ಇನ್ನು ಇತ್ತೀಚೆಗೆ ನಡೆದ ರೇಖಾ ಕದಿರೇಶ್ ಕೊಲೆ ಆದ ಬಳಿಕವೂ ಕೂಡ ರಾಜಕೀಯ ಕೆಸೆರೆರಚಾಟಕ್ಕೆ ಸಾಕ್ಷಿಯಾಗಿದ್ದು ಅದೇ ಮಾದರಿಯ ಹೇಳಿಕೆಗಳು. ಮೊದಲಿಗೆ ಎನ್​ ಆರ್​ ರಮೇಶ್​​ ಕೊಟ್ಟ ಹೇಳಿಕೆ ರಾಜ್ಯ ರಾಜಕೀಯವನ್ನ ತಲ್ಲಣ ಗೊಳಿಸಿತ್ತು.
ನೇರವಾಗಿ ಜಮೀರ್ ಅಹಮ್ಮದ್​ ಮೇಲೆ ಆರೋಪ ಕೇಳಿ ಬಂದ ಮೇಲೆ, ಅಷ್ಟೇ ನಯವಾಗಿ ಕಾಂಗ್ರೆಸ್ ಶಾಸಕ ಜಮೀರ್ ಅಹಮ್ಮದ್​ ತಳ್ಳಿಹಾಕಿದರು.

ನನ್ನ ತಂಗಿ ಇದ್ದಂಗೆ ಎಂದು ಹೇಳೋ ಮೂಲಕವೇ ಜಮೀರ್ ಆರೋಪಗಳನ್ನ ತಳ್ಳಿ ಹಾಕೋ ಪ್ರಯತ್ನ ಮಾಡಿದ್ದರು. ಇನ್ನು ಇಂದು ಮರಣೋತ್ತರ ಪರಿಕ್ಷೆ ನಡೆಯುತ್ತಿದ್ದ ಸ್ಥಳಕ್ಕೆ ಬಂದ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಸಹ ಒಂದು ಹೇಳಿಕೆ ನೀಡಿದ್ದಾರೆ.

ಇವರೆಲ್ಲರ ಹೇಳಿಕೆಯನ್ನ ಗಮನಿಸುತ್ತಾ ಬಂದರೆ ಈ ಎರಡು ಕೊಲೆಗಳು ರಾಜಕೀಯ ಪಿತೂರಿಯಿಂದಲೇ ನಡೆದು ಹೋಗಿದೆ ಅನ್ನೋದು ತಿಳಿದು ಬರುತ್ತೆ. ಆದ್ರೆ ಅಂದು ಕದಿರೇಶ್ ಕೊಲೆ ಆದಾಗ ರಾಜಕೀಯ ಹೆಸರು ತಳಕು ಹಾಕಿಕೊಂಡರು ಅದು ತನಿಖೆ ಮುಕ್ತಾಯದ ಬಳಿಕ ತಣ್ಣಗಾಗಿತ್ತು. ಆದ್ರೆ ಈಗ ರೇಖಾ ಕದಿರೇಶ್ ಕೊಲೆ ಪ್ರಕರಣದಲ್ಲೂ ಅದೇ ತಳಕು ಹಾಕ್ಕೊಂಡಿದ್ದು ಇನ್ಯಾವ ತಿರುವನ್ನ ಪಡೆದುಕೊಳ್ಳುತ್ತೋ ಕಾದು ನೋಡಬೇಕು.

The post ರೇಖಾ ಕದಿರೇಶ್ ಕೊಲೆ ಹಿಂದೆ ರಾಜಕೀಯ ಹುನ್ನಾರ..? ಪತಿಯ ಕೊಲೆಗೂ ಈ ಕೊಲೆಗೂ ಇದ್ಯಾ ಲಿಂಕ್..? appeared first on News First Kannada.

Source: newsfirstlive.com

Source link