ರೇಖಾ ಕದಿರೇಶ್ ಕೊಲೆ ಆಗುತ್ತಿದ್ದ ಬೆನ್ನಲ್ಲೇ ಒಂದಲ್ಲ ಎರಡಲ್ಲ ಐದಾರು ಆಯಾಮಗಳಲ್ಲಿ ಪೊಲೀಸರು ತನಿಖೆಯನ್ನ ನಡೆಸುತ್ತಿದ್ದಾರೆ. ಆ ಸಂದರ್ಭದಲ್ಲಿಯೇ ಕೇಳಿ ಬಂದಿದ್ದು ಅವರಿಬ್ಬರ ಹೆಸರು. ಆ ಇಬ್ಬರ ಹೆಸರು ಕೂಡ ಸದ್ಯ ಪ್ರಕರಣದಲ್ಲಿ ತಳಕು ಹಾಕಿಕೊಳ್ಳುತ್ತಿದೆ. ಪೊಲೀಸರ ಮುಂದೆ ಅವರಿಬ್ಬರ ಹೆಸರು ಪ್ರಸ್ತಾಪ ಆಗುತ್ತಿದ್ದಂತೆ, ಅವರು ಯಾರು? ಅವರಿಗೂ ಈ ಕೊಲೆಗೂ ಏನ್ ಸಂಬಂಧ? ಎಲ್ಲಿಂದ ಬಂದಿದ್ದರು? ಎಲ್ಲಿಗೆ ಹೋಗಿದ್ದಾರೆ? ಯಾಕೆ? ಏನು? ಅನ್ನೋದರ ಮಾಹಿತಿಯನ್ನ ಕಲೆ ಹಾಕೋದಕ್ಕೆ ಮುಂದಾಗಿದ್ದಾರೆ. ಅವರೇ ಶೋಭನ್​​ ಮತ್ತು ರವಿ.. ಹಾಗಾದ್ರೆ ಇವರಿಬ್ಬರು ಯಾರು?

 

ಮೊದಲಿಗೆ ರವಿ ಬಗ್ಗೆ ಇಲ್ಲಿ ಪ್ರಸ್ತಾಪ ಮಾಡಲೇಬೇಕು. ಯಾಕಂದ್ರೆ ಇವತ್ತು ಕೊಲೆ ಆಗಬೇಕಾಗಿದ್ದಿದ್ದೇ ರವಿ ಅಂತಾ ಹೇಳಲಾಗ್ತಾಯಿದೆ. ಅದೆ ಆಯಾಮದಲ್ಲಿಯೇ ಪೊಲೀಸರು ತನಿಖೆ ನಡೆಸೋದಕ್ಕೆ ಆರಂಭಿಸಿದ್ದಾರೆ.  ಮುಖ್ಯವಾಗಿ ಕೊಲೆ ಆಗಬೇಕಿದ್ದಿದ್ದು ರವಿ ಅಂತಾ ಎಲ್ಲರೂ ಅಂದುಕೊಳ್ಳುತ್ತಿದ್ದಾರೆ. ರವಿಯನ್ನ ಕೊಲೆ ಮಾಡಲು ನಿನ್ನೆ ಮೂಹರ್ತ ಫಿಕ್ಸ್ ಆಗಿತ್ತು ಅನ್ನೋದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ. ಈಗ ಎಲ್ಲರ ತಲೆಯಲ್ಲಿ ಓಡುತ್ತಿರೋದು ಒಂದೆ. ಅದ್ಯಾಕೆ ರೇಖಾಳನ್ನ ಕೊಲೆ ಮಾಡೋಕು ಮುನ್ನ ರವಿಯನ್ನ ಕೊಲೆ ಮಾಡಬೇಕು ಅಂತಾ ಅಂದುಕೊಂಡಿದ್ದು. ಆತನಿಗೂ, ಕೊಲೆ ಮಾಡಲು ಬಂದಿದ್ದವರಿಗೂ ಏನ್ ಸಂಬಂಧ? ಇದೆಲ್ಲವನ್ನ ಪೊಲೀಸರು ಕೆದಕುತ್ತಾ ಹೋದಾಗ ಒಂದಷ್ಟು ವಿಚಾರಗಳು ತಿಳಿದು ಬಂದಿತ್ತು.

ಯಾರು ಈ ರವಿ?

  • ಕೊಲೆಯಾದ ಕದಿರೇಶ್ ಜೊತೆಯಲ್ಲಿದ್ದ ಈ ರವಿ
  • ಕದಿರೇಶ್ ಶಿಷ್ಯಂದಿರಲ್ಲಿ ರವಿ ಕೂಡ ಒಬ್ಬನಾಗಿದ್ದ
  • ರವಿ ಮೇಲೆ ಕದಿರೇಶ್ ಒಮ್ಮೆ ಹಲ್ಲೆ ಮಾಡಿದ್ದನಂತೆ
  • ಕೈ ಕಾಲು ಮುರಿಯೋದಾಗಿ ವಾರ್ನಿಂಗ್ ಕೊಟ್ಟಿದ್ದರಂತೆ
  • ಅಣ್ಣಾ ಅಣ್ಣಾ ಅಂದುಕೊಂಡೇ ಕದಿರೇಶ್ ಜೊತೆಗಿದ್ದ
  • ಮೃತಪಟ್ಟ ಬಳಿಕ ರೇಖಾಳ ವ್ಯವಹಾರ ನೋಡಿಕೊಳ್ತಿದ್ದ
  • ಏನೇ ಕೆಲಸ ಬೇಕಾದ್ರು ರೇಖಾಳ ಬಳಿ ಮಾಡಿಸಿಕೊಳ್ತಿದ್ದ

ಮಾಜಿ ಕಾರ್ಪೋರೇಟರ್ ಕದಿರೇಶ್​​ ಅನೇಕ ಮಂದಿ ಶಷ್ಯಂದಿರನ್ನ ಮೆಂಟೇನ್ ಮಾಡುತ್ತಿದ್ದ. ಅವರೆಲ್ಲರ ಪೈಕಿ ಮುಂದಿನ ಸಾಲಿನಲ್ಲಿ ಕಾಣಿಸಿಕೊಳ್ಳುತ್ತಿದ್ದಿದ್ದು ಇದೇ ರವಿ. ಅಲ್ಲದೇ ಒಂದು ವಿಚಾರವಾಗಿ ಗಲಾಟೆ ಆಗಿ ರವಿ ಮೇಲೆ ಕದಿರೇಶ್ ಹಲ್ಲೆ ಮಾಡಿ ಬಂದಿದ್ದನಂತೆ. ಅಲ್ಲದೆ ಮತ್ತೆ ಎಂದೂ ಮುಖ ತೋರಿಸದಂತೆ ರವಿಗೆ ಕದಿರೇಶ್ ವಾರ್ನಿಂಗ್ ಕೊಟ್ಟು ಕಳುಹಿಸಿದ್ದನಂತೆ. ಅಷ್ಟಾದ್ರೂ ಕೂಡ ರವಿ ಪದೇ ಪದೇ ಮನೆ ಬಳಿ ಹೋಗಿ ಕಾಲಿಗೆ ಬಿದ್ದು ಅಣ್ಣ ನಿನ್ನನ್ನ ಬಿಟ್ಟು ಹೋಗೋದಿಲ್ಲಾ ಎಂದು ಕಾಡಿ ಬೇಡಿ ಮತ್ತೆ ಗ್ಯಾಂಗ್ ಜೊತೆ ಸೇರಿಕೊಂಡಿದ್ದನಂತೆ. ಹೀಗೆ ಜೊತೆಯಲ್ಲಿದ್ದಾಗ ಆ ಒಂದು ದಿನ ಕದಿರೇಶ್ ಕೊಲೆ ಆಗಿಬಿಡುತ್ತೆ. ಅದಾದ ಮೇಲೆ ರವಿ ಕದಿರೇಶ್ ಎರಡನೇ ಪತ್ನಿ ರೇಖಾ ಕದಿರೇಶ್ ಜೊತೆ ಸೇರಿಕೊಂಡು ಆಕೆಯ ವ್ಯವಹಾರಗಳನ್ನ ನೋಡಿಕೊಳ್ಳುತ್ತಿದ್ದ ಎನ್ನಲಾಗಿದೆ. ಅಲ್ಲದೇ ರೇಖಾ ಕದಿರೇಶ್ , ಆತ ಏನೇ ಕೆಲಸಗಳನ್ನ ಹೇಳಿದ್ರು ಕೂಡ ಮಾಡಿಕೊಟ್ಟು ಬಿಡುತ್ತಿದ್ದರಂತೆ.

ಇದೇ ಕಾರಣಕ್ಕಾಗಿ ರವಿ ವಿರುದ್ದ ಹಲವರು ಕತ್ತಿ ಮಸಿಯೋಕೆ ಶುರುಮಾಡಿದ್ದರು. ಅಲ್ಲದೇ ಸ್ಟೀಫನ್ ಮತ್ತು ಲಂಬೂ ಪೀಟರ್​ ಇಬ್ಬರೂ ರವಿಯನ್ನ ಟಾರ್ಗಟ್ ಮಾಡಿಕೊಂಡಿದ್ದರಂತೆ.

ಕದಿರೇಶ್ ಸತ್ತ ಮೇಲೆ ರವಿ ರೇಖಾಳ ಜೊತೆಯಲ್ಲಿಯೇ ಇದ್ದುಕೊಂಡು ಆಕೆಯ ಎಲ್ಲಾ ರೀತಿಯ ವ್ಯವಹಾರಗಳನ್ನ ನೋಡಿಕೊಳ್ಳುತ್ತಿದ್ದ. ಏನೇ ಆದ್ರೂ ಕೂಡ ರವಿ, ರೇಖಾಳ ಜೊತೆಯಲ್ಲಿಯೆ ಇರುತ್ತಿದ್ದನಂತೆ. ಆಕೆ ಹಿಂದೆ ಮುಂದೆ ಸುತ್ತಾಡಿಕೊಂಡಿದ್ದನಂತೆ. ಇದನ್ನ ನೋಡಿದ್ದವರಿಗೆ ಸಹಿಸಲು ಆಗಿರಲಿಲ್ಲ. ಅದೇ ಸಮಯದಲ್ಲಿ ಸ್ಟೀಫನ್ನನ್ನ ಪೊಲೀಸರು ಬಂಧಿಸಿ, ಆತ ಜೈಲಿಗೆ ಹೋಗಿದ್ದ. ಆ ಸಂದರ್ಭಲ್ಲಿ ಸ್ಟೀಫನ್ ಹೆಂಡತಿ ರೇಖಾಳ ಬಳಿ ಹೋಗಿ ಜೈಲಿನಿಂದ ಬಿಡಿಸಿಕೊಳ್ಳಲು ಸಹಾಯ ಮಾಡಿ ಎಂದು ಕೇಳಿಕೊಂಡಾಗ ರೇಖಾ ಬೈದು ಕಳುಹಿಸಿದ್ದಾರೆ. ಹೀಗೆ ಬೈಯುವಾಗ ಮನೆಯಲ್ಲಿಯೇ ರವಿ ಕೂಡ ಕೂತಿದ್ದನಂತೆ. ಸ್ಟೀಫನ್ ಜೈಲಿನಿಂದ ಹೊರಗಡೆ ಬಂದಾಗ ಹೆಂಡತಿ ಎಲ್ಲಾ ವಿಚಾರವನ್ನ ಹೇಳಿದ್ದಳಂತೆ. ಆಗಲೇ ರವಿಗೆ ಏನಾದ್ರು ಮಾಡಲೇಬೇಕು ಎಂದು ಸ್ಕೆಚ್ ಹಾಕಿದ್ದರು ಎನ್ನಲಾಗಿದೆ. ಅದರ ಜೊತೆಗೆ ಲೋಕಲ್​ನಂತಿದ್ದ ರವಿ ಹೈ ಫೈ ಜೀವನವನ್ನ ನಡೆಸುತ್ತಿದ್ದನ್ನ ನೋಡಿ ಕೋಪ ಮತ್ತಷ್ಟು ಕೆರಳಿಸಿತ್ತು ಅಂತ ಹೇಳಲಾಗಿದೆ.

ಹೀಗೆ ರವಿ ಮೇಲೆ ಕತ್ತಿ ಮಸಿಯೋಕೆ ಶುರು ಮಾಡಿದ್ದ ಸ್ಟೀಫನ್ ಮತ್ತು ಪೀಟರ್​ ರೇಖಾ ನಾವು ಏನೇ ಹೇಳಿದ್ರು ಕೂಡ ಕೇಳುತ್ತಿಲ್ಲ. ಹೀಗಾಗಿ ರವಿಗೆ ಏನಾದ್ರು ಮಾಡಿದ್ರೆ ಆಗ ರೇಖ ನಮ್ಮ ಮಾತನ್ನ ಕೇಳ್ತಾಳೆ ಎಂದುಕೊಂಡು ಸ್ಕೆಚ್ ಹಾಕಿದ್ದರು. ಅದೇ ರೀತಿ ಮೊನ್ನೆ ರವಿಯನ್ನ ಎತ್ತಲು ರೆಡಿ ಮಾಡಿಕೊಂಡಿದ್ದರಂತೆ. ಆದ್ರೆ ಅದು ಫೇಲ್ಯೂರ್ ಆಗಿತ್ತು. ನಿನ್ನೆ ರೇಖಾ ಜೊತೆ ಫುಡ್ ಕಿಟ್ ವಿತರಣೆಗೆ ರವಿ ಬರುತ್ತಾನೆ ಎಂದು ತಿಳಿದುಕೊಂಡು ಏರಿಯಾದಲ್ಲಿದ್ದ ಸಿಸಿ ಕ್ಯಾಮೆರಾಗಳ ದಿಕ್ಕನ್ನ ಆಕಾಶಕ್ಕೆ ತಿರುಗಿಸಿ ರೆಡಿಯಾಗಿದ್ದರು. ಅದೇ ರೀತಿ ರವಿ ಫುಡ್ ಕಿಟ್ ವಿತರಣೆ ಮಾಡೋ ಜಾಗಕ್ಕೆ ಬಂದಿದ್ದ. ಇದನ್ನ ಗಮನಿಸಿ ರೆಡಿ ಆಗಿ ಬರೋಷ್ಟರಲ್ಲಿ ರೇಖಾ ಕೂಡ ಬಂದುಬಿಟ್ಟಿದ್ದರು. ಇದನ್ನ ಗಮನಿಸಿದ್ದ ಹಂತಕರು ರವಿ ಮೇಲೆ ಅಟ್ಯಾಕ್ ಮಾಡಲು ಹೋದಾಗ ರವಿ ಅಲ್ಲಿಂದ ಎಸ್ಕೇಪ್ ಆಗಿಬಿಟ್ಟಿದ್ದ. ಆದ್ರೆ ರೇಖಾ ತನಗೇನೂ ಮಾಡೋದಿಲ್ಲಾ ಅಂದುಕೊಂಡು ಅವರಿಗೆ ಗದರೋಕೆ ಹೋದಾಗ ಡ್ಯಾಗರ್​ನಿಂದ ಚುಚ್ಚಿ ಅಲ್ಲಿಂದ ಪರಾರಿ ಆದ್ರು ಅಂತ ಹೇಳಲಾಗ್ತಿದೆ.

ಸದ್ಯ ಈ ಆಯಾಮದಲ್ಲೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದರ ಜೊತೆಯಲ್ಲಿ ಶೋಭನ್ ಅನ್ನೋ ರೌಡಿಯ ಹೆಸರು ಕೂಡ ಕೇಳಿ ಬಂದಿದೆ. ಹಾಗಾದ್ರೆ ಈ ಶೋಭನ್ ಯಾರು? ಎಲ್ಲಿದ್ದಾನೆ? ಈತನಿಗೂ ಕದಿರೇಶ್ ಪತ್ನಿ ಕೊಲೆಗೂ ಏನ್ ಸಂಬಂಧ?

ಯಾರು ಈ ಶೋಭನ್..?
ಕದಿರೇಶ್​ನನ್ನು 2018ರಲ್ಲಿ ಕೊಲೆ ಮಾಡಿದಾಗ ಶೋಭನ್ ಹೆಸರು ಕೇಳಿ ಬಂದಿತ್ತು. ಯಾಕಂದ್ರೆ ಶೋಭನ್ ಗಾಂಜಾ ಮಾರೋದಕ್ಕೆ ಪ್ರಯತ್ನ ಪಟ್ಟಿದ್ದನಂತೆ. ಈ ವಿಚಾರ ಗೊತ್ತಾಗಿ ಕದಿರೇಶ್ ಬೈದು ಏರಿಯಾದಿಂದ ಓಡಿಸಿದ್ದನಂತೆ. ಅದೇ ಒಂದು ವೈಮನಸ್ಸು ಶೋಭನ್ ನಲ್ಲಿ ಕಾಡೋದಕ್ಕೆ ಶರು ಆಗಿತ್ತು. ಅದಾದ ಬಳಿಕ ಆತನ ವಿರುದ್ದ ಶೋಭನ್ ಹುಡುಗರು ಮಚ್ಚು ಮಸಿಯೋಕೆ ಶುರು ಮಾಡಿಕೊಂಡಿದ್ದರು. ಬಳಿಕ ಶೋಭನ್ ವಿನಯ್ ಮತ್ತು ನವೀನ್ ಜೊತೆ ಸೇರಿಕೊಂಡು ಕದಿರೇಶ್​​ನನ್ನು ಕೊಲೆ ಮಾಡಿದ್ದರು ಎನ್ನಲಾಗಿದೆ.

ಯಾವಾಗ ಶೋಭನ್ ಹೆಸರು ತಳಕು ಹಾಕಿಕೊಂಡಿತ್ತೋ ಒಂದು ತಿಂಗಳ ಬಳಿಕ ಶೋಭನ್ ಮೇಲೆ ಕದಿರೇಶ್​ ಹುಡುಗರು ಅಟ್ಯಾಕ್ ಮಾಡಿ ಕೊಲೆ ಮಾಡ್ತಾರೆ. ಶೋಭನ್ ಅಲಿಯಾಸ್ ಕೊತ್ತಂಬರಿ ಶೋಭನ್ ಕೃಷ್ಣಗಿರಿ ಹಾಗೂ ಇನ್ನಿತರೆ ಕಡೆಯಿಂದ ಗಾಂಜಾ ತರಿಸುತ್ತಿದ್ದ. ಈ ವಿಚಾರ ಕದಿರೇಶ್​ಗೆ ಗೊತ್ತಾಗಿ ವಾರ್ನ್ ಮಾಡಿರುತ್ತಾನೆ. ಅಲ್ಲದೇ ಕಪಾಳಕ್ಕೆ ಹೊಡೆದಿರುತ್ತಾನೆ. ಆ ಕೋಪ ಕೂಡ ಇದ್ದ ಕಾರಣದಿಂದ ಶೋಭನ್ ಹುಡುಗರು ಅಣ್ಣನನ್ನ ಎತ್ತಿದ್ರು ಅಂತಾ ಗೊತ್ತಾಗಿ ಕದಿರೇಶ್ ಹುಡುಗರು ಶೋಭನ್​ನನ್ನ ಕೊಲೆ ಮಾಡುತ್ತಾರೆ. ಆ ಒಂದು ವೈಷಮ್ಯದಿಂದ ಶೋಭನ್ ಹುಡುಗರು ಈಗ ರೇಖಾಳ ಮೇಲೆ ಅಟ್ಯಾಕ್ ಮಾಡಿದ್ದಾರೆ ಅನ್ನೋ ಮಾತು ಕೇಳಿ ಬರುತ್ತಿದೆ.

ಆದ್ರೆ ರೇಖಾ ಕೊಲೆಗೆ ನಿಖರ ಕಾರಣ ಏನು ಅನ್ನೋದು ತನಿಖೆಯಿಂದ ಮಾತ್ರ ಗೊತ್ತಾಗಬೇಕಿದೆ.

 

The post ರೇಖಾ ಕೊಲೆಗೂ ಮುನ್ನ ರವಿ ಕೊಲೆಗೆ ಫಿಕ್ಸ್ ಆಗಿತ್ತಾ ಮುಹೂರ್ತ? ಯಾರು ಈ ರವಿ? appeared first on News First Kannada.

Source: newsfirstlive.com

Source link