ರೇಖಾ ಕೊಲೆ ಕೇಸ್​​​; ಅವರು ನನ್ನ ತಂಗಿ ಇದ್ದಂತೆ, ಆಕೆ ಮಕ್ಕಳಿಗೆ ಆಸರೆಯಾಗುವೆ ಎಂದ ಜಮೀರ್​

ರೇಖಾ ಕೊಲೆ ಕೇಸ್​​​; ಅವರು ನನ್ನ ತಂಗಿ ಇದ್ದಂತೆ, ಆಕೆ ಮಕ್ಕಳಿಗೆ ಆಸರೆಯಾಗುವೆ ಎಂದ ಜಮೀರ್​

ಬೆಂಗಳೂರು: ಮಾಜಿ ಕಾರ್ಪೊರೇಟರ್ ರೇಖಾ ಕದಿರೇಶ್​​ ನನ್ನ ತಂಗಿಯ ರೀತಿ ಇದ್ದಂತೆ. ಈಗ ಆಕೆಯ ಮಕ್ಕಳು ಅನಾಥರಾಗಿದ್ದಾರೆ. ಮಕ್ಕಳನ್ನು ಕಾಪಾಡುವ ಕೆಲಸ ನಾನು ಮಾಡುತ್ತೇನೆ. ಯಾರದ್ದೋ ದ್ವೇಷಕ್ಕೆ ಇನ್ಯಾರನ್ನೋ ಬಲಿ ತೆಗೆದುಕೊಳ್ಳೋದು ಎಷ್ಟು ಸರಿ ಎಂದು ಚಾಮರಾಜ ಪೇಟೆ ಶಾಸಕ ಜಮೀರ್​ ಅಹ್ಮದ್​ ಹೇಳಿದ್ದಾರೆ.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಜಮೀರ್ ಅವರು, ರೇಖಾ ಕದಿರೇಶ್ ಸಾವಿನ ಹಿಂದೆ ರಾಜಕೀಯ ಇದೆ ಎಂಬ ಎನ್.ಆರ್.ರಮೇಶ್ ಆರೋಪಕ್ಕೆ ತಿರುಗೇಟು ನೀಡಿದರು. ರಮೇಶ್​ಗೆ ಕನಸಲ್ಲೂ ನಾನು ಕಾಡುತ್ತಿದ್ದೀನಿ ಅಂತಾ ಅನ್ಸುತ್ತೆ. ವಿನಾಕಾರಣ ಆರೋಪ ಮಾಡುತ್ತಿರುವುದು ಸರಿಯಲ್ಲ. ರೇಖಾ ಬಿಜೆಪಿಯಲ್ಲಿ ಇದ್ದವರು, ನಾನು ಜೆಡಿಎಸ್ ನಿಂದ ಗೆದ್ದವನು. ನಾನು ಚುನಾವಣೆ ವೇಳೆ ಮಾತ್ರ ರಾಜಕೀಯ ಮಾಡೋದು, ಉಳಿದಂತೆ ಕ್ಷೇತ್ರದ ಅಭಿವೃದ್ದಿ ಕಡೆಗಮನ ಹರಿಸುತ್ತೇನೆ ಅಷ್ಟೇ ಎಂದರು.

The post ರೇಖಾ ಕೊಲೆ ಕೇಸ್​​​; ಅವರು ನನ್ನ ತಂಗಿ ಇದ್ದಂತೆ, ಆಕೆ ಮಕ್ಕಳಿಗೆ ಆಸರೆಯಾಗುವೆ ಎಂದ ಜಮೀರ್​ appeared first on News First Kannada.

Source: newsfirstlive.com

Source link