ಬೆಂಗಳೂರು: ರೇಖಾ ಕದಿರೇಶ್ ಕೊಲೆ ಆದಮೇಲೆ ನಾಲ್ಕು ತಂಡಗಳನ್ನ ರಚನೆ ಮಾಡಿಕೊಂಡು ಫೀಲ್ಡ್​​ಗೆ ಎಂಟ್ರಿ ಕೊಟ್ಟಿದ್ದರು ಪೊಲೀಸ್ ಟೀಮ್​. ಅತ್ತ ಸಿಎಂ ಬಿಎಸ್​ ಯಡಿಯೂರಪ್ಪ 24 ಗಂಟೆಗಳಲ್ಲಿ ಆರೋಪಿಗಳನ್ನ ಹೆಡೆಮುರಿ ಕಟ್ಟಬೇಕು ಅನ್ನೋ ಆದೇಶವನ್ನ ಹೊರಡಿಸಿದ್ದರು. ಯಾವಾಗ ಈ ಹೇಳಿಕೆ ಕೊಟ್ಟರೋ ಆಗ ತನಿಖೆ ಮತ್ತಷ್ಟು ಚುರುಕುಗೊಂಡಿತ್ತು. ಹಾಗಾದ್ರೆ ತನಿಖೆಯ ಹಾದಿ ಹೇಗಿತ್ತು, ಯಾವ ಹಂತದಲ್ಲಿದೆ..?

ಮೊನ್ನೆ ಬೆಳಗ್ಗೆ 10.30ರ ಸುಮಾರಿಗೆ ಮಾಜಿ ಕಾರ್ಪೋರೇಟರ್​ ರೇಖಾ ಕದಿರೇಶ್​ ಕೊಲೆ ಆಗಿತ್ತು. ಯಾವಾಗ ಈ ವಿಚಾರ ಗೊತ್ತಾಗಿತ್ತೋ ಆಗಲೇ ಪೊಲೀಸರು ಸ್ಥಳಕ್ಕೆ ಭೇಟಿ ಕೊಟ್ಟು ತನಿಖೆಯನ್ನ ಆರಂಭಿಸಿದ್ದರು.

ಕೆಲವು ಮಾಹಿತಿಗಳನ್ನ ಕಲೆ ಹಾಕಿದ್ದ ಪೊಲೀಸ್ ಟೀಮ್​​, ಸಿಕ್ಕ ಕ್ಲೂಗಳ ಬೆನ್ನತ್ತಿ ಹೊರಟಿದ್ದರು. ನಾಲ್ಕು ಪ್ರತ್ಯೇಕ ತಂಡಗಳನ್ನ ರಚನೆ ಮಾಡಿಕೊಂಡು ಹೊರಟಿದ್ದರು. ಆದ್ರೆ ರಾಜಕೀಯ ದಿಕ್ಕಿನಲ್ಲಿ ತನಿಖೆ ಮಾಡದೇ, ರೇಖಾ ವೈಯಕ್ತಿಕ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಮಾಹಿತಿಯನ್ನ ಕಲೆ ಹಾಕೋದಕ್ಕೆ ಶುರು ಮಾಡಿದ್ದರು. ಆಗಲೇ ನೋಡಿ ಪೊಲೀಸರಿಗೆ ಆ ಒಂದು ಮಾಹಿತಿ ಸಿಕ್ಕಿದ್ದು.

ಈ ಒಂದು ಮಾಹಿತಿ ಸಾಕಾಗಿತ್ತು ಪೊಲೀಸರಿಗೆ ಆರೋಪಿಗಳ ಸುಳಿವು ಸಿಕ್ಕೆ ಬಿಟ್ಟಿತ್ತು. ಸುಳಿವು ಸಿಕ್ಕಿದ್ದೇ ತಡ ಕಾಟನ್​ಪೇಟೆ ಇನ್​ಸ್ಪೆಕ್ಟರ್​​ ಚಿದಾನಂದ್ ಹಾಗು, ಉಪ್ಪಾರಪೇಟೆ ಠಾಣೆಯ ಇನ್​ಸ್ಪೆಕ್ಟರ್​​ ಶಿವಸ್ವಾಮಿ ಟೀಮ್ ಕಟ್ಟಿಕೊಂಡು ಆರೋಪಿಗಳ ಹೆಡೆಮುರಿ ಕಟ್ಟೋದಕ್ಕೆ ಹೊರಟೆ ಬಿಟ್ಟರು.

ಕೊನೆಗೂ ಹಂತಕರ ಬಂಧನ ಆಗಿದೆ. ಅವರ ಕಾಲಿಗೆ ಗುಂಡು ಹೊಕ್ಕಿದ್ದು ಆಗಿದೆ. ಇನ್ನೇನಿದ್ರು ಪೊಲೀಸ್ ಡ್ರಿಲ್ ಆಗಬೇಕಿರೋದು ಒಂದೆ ಬಾಕಿ. ಆದ್ರೆ ಆರೋಪಿಗಳ ಬಂಧನ ಆಗಿದ್ರು ಕೊಲೆಗೆ ಪ್ರಮುಖವಾದ ಕಾರಣ ಏನು ಅನ್ನೊದು ಮಾತ್ರ ಇನ್ನು ತಿಳಿದು ಬಂದಿಲ್ಲ. ಅದು ಗೊತ್ತಾಗಬೇಕು ಅಂದ್ರೆ ಪೊಲೀಸ್ ತನಿಖೆಯ ಬಳಿಕವಷ್ಟೇ.

ಒಂದು ಕೊಲೆಯ ಸುತ್ತ ಹತ್ತಾರು ವಿಚಾರಗಳು ತಳಕು ಹಾಕಿಕೊಂಡಿರೋದು, ರಾಜಕೀಯ ಪ್ರೇರಿತ ಅಂತಾ ಕರೆಸಿಕೊಂಡಿದೆ. ಆದ್ರೆ ಕೊಲೆಯ ಹಿಂದಿರೋದು ರಾಜಕೀಯದ ನೆರಳಾ ಅಥವಾ ಬೇರೆಯದ್ದಾ ಅನ್ನೋದು ತಿಳಿದುಬರೋದು ಇನ್ವೇಷ್ಟಿಗೇಷನ್ ಮುಗಿದ ಮೇಲೆ.

The post ರೇಖಾ ಕೊಲೆ ಕೇಸ್: ಆರೋಪಿಗಳ ಬೆನ್ನು ಹತ್ತಿದ್ದ ಪೊಲೀಸರ ಕಾರ್ಯಾಚರಣೆ ಹೇಗಿತ್ತು..? appeared first on News First Kannada.

Source: newsfirstlive.com

Source link