ಬೆಂಗಳೂರು: ಮಾಜಿ ಬಿಜೆಪಿ ಕಾರ್ಪೊರೇಟರ್​​ ರೇಖಾ ಕದಿರೇಶ್ ಅವರನ್ನ ಇಂದು ಹಾಡಹಗಲೇ ಕೊಲೆ ಮಾಡಿರುವ ಬಗ್ಗೆ ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ಪ್ರತಿಕ್ರಿಯಿಸಿದ್ದಾರೆ. ನಗರದಲ್ಲಿ ಮಾತನಾಡಿದ ಯಡಿಯೂರಪ್ಪ, ಈ ಹಿಂದೆ ರೇಖಾ ಅವರ ಪತಿಯನ್ನು ಕೊಲೆ ಮಾಡಲಾಗಿತ್ತು. ಪೊಲೀಸ್ ಆಯುಕ್ತರ ಬಳಿ ಈಗಾಗಲೇ ಮಾತನಾಡಿದ್ದೇನೆ. 24 ಗಂಟೆಯಲ್ಲಿ ಆರೋಪಿಗಳನ್ನು ಬಂಧಿಸಲು ಎಲ್ಲಾ ಕ್ರಮ ಕೈಗೊಳ್ಳಬೇಕೆಂದಿದ್ದೇನೆ ಎಂದರು

ಇಂದು ಬೆಳಗ್ಗೆ ಸಿಎಂ ದ್ವಿಪಥ ರೈಲ್ವೆ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿದ್ರು. ರೈಲಿನಲ್ಲಿ ಪ್ರಯಾಣ ಮಾಡುವ ಮೂಲಕ ಕಂಟೋನ್ಮೆಂಟ್ ರೈಲ್ವೆ ನಿಲ್ದಾಣದಿಂದ ಕಾಮಗಾರಿಗಳ ಪರಿಶೀಲನೆ ಆರಂಭಿಸಿದ್ರು. ಇದೇ ವೇಳೆ ಡಿಯೂರಪ್ಪಗೆ ಕಂದಾಯ ಸಚಿವ ಆರ್‌.ಅಶೋಕ್ ಸಾಥ್ ನೀಡಿದ್ರು. ರೈಲಿನ ಬೋಗಿಯ ಮೊದಲ ಸೀಟ್ ನಲ್ಲಿ ಕುಳಿತು ಯಶವಂತಪುರ-ಚನ್ನಸಂದ್ರ ಹಾಗೂ ಬೈಯ್ಯಪ್ಪನಹಳ್ಳಿ – ಹೊಸೂರು‌ ದ್ವಿಪಥ ರೈಲ್ವೆ ಕಾಮಗಾರಿಗಳನ್ನ ಪರಿಶೀಲಿಸಿದ್ರು.

ಈ ಬಗ್ಗೆ ಮಾತನಾಡಿದ ಯಡಿಯೂರಪ್ಪ, ರೈಲ್ವೆ ಡಬ್ಲಿಂಗ್ ಮಾರ್ಗದ ಪರಿಶೀಲನೆ ಮಾಡಿದ್ದೇನೆ. ಸಬ್ ಅರ್ಬನ್ ಯೋಜನೆಯಿಂದ ಬೆಂಗಳೂರು ಹೊರವಲಯದ ಪ್ರದೇಶಗಳು ಹಾಗೂ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಸುಲಭ ಆಗಲಿದೆ. ಸಬ್ ಅರ್ಬನ್ ಯೋಜನೆ 15,500 ಕೋಟಿ‌ ರೂಪಾಯಿ ವೆಚ್ಚದಲ್ಲಿ ಜಾರಿಯಾಗುತ್ತಿದೆ. ಕೇಂದ್ರ ಹಾಗೂ ರಾಜ್ಯಗಳಿಂದ ವೆಚ್ಚ ಭರಿಸಲಾಗುತ್ತದೆ ಎಂದು ತಿಳಿಸಿದ್ರು.

ಸಬ್ ಅರ್ಬನ್ ರೈಲು ಶಂಕು ಸ್ಥಾಪನೆ ಮೂರು ತಿಂಗಳಲ್ಲಿ ನಡೆಯಲಿದೆ. ಮೂರು ತಿಂಗಳಲ್ಲಿ ಕಾಮಗಾರಿಗಳು ಆರಂಭವಾಗಲಿದೆ. ಪ್ರಧಾನಿ ನರೇಂದ್ರ ಮೋದಿಯವರಿಗೆ ಶಂಕುಸ್ಥಾಪನೆ ಮಾಡಲು ಮನವಿ ಮಾಡಲಾಗಿದೆ. ಪ್ರಧಾನಿಯವರೇ ಶಂಕು ಸ್ಥಾಪನೆ ಮಾಡುವ ಭರವಸೆ ಇದೆ ಎಂದು ಸಿಎಂ ವಿಶ್ವಾಸ ವ್ಯಕ್ತಪಡಿಸಿದರು. ಇನ್ನು ಸಬ್ ಅರ್ಬನ್ ರೈಲು ಯೋಜನೆ ಬಗ್ಗೆ ಕಾಂಗ್ರೆಸ್ ಟೀಕೆ ಟಿಪ್ಪಣಿ ಮಾಡುವುದನ್ನು ಬಿಡಲಿ ಎಂದು ಇದೇ ವೇಳೆ ಗುಡುಗಿದ್ರು.

 

 

 

The post ರೇಖಾ ಕೊಲೆ: 24 ಗಂಟೆಯಲ್ಲಿ ಆರೋಪಿಗಳನ್ನು ಬಂಧಿಸಲು ಕ್ರಮ -ಸಿಎಂ appeared first on News First Kannada.

Source: newsfirstlive.com

Source link