ಬೆಂಗಳೂರು: ಮಾಜಿ‌ ಕಾರ್ಪೋರೇಟರ್ ರೇಖಾ ಕದಿರೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಲಾ ಪುತ್ರ ಅರುಳ್ ಪಾತ್ರ ಖಚಿತವಾಗಿದೆ ಎನ್ನಲಾಗಿದ್ದು ಈ ಹಿನ್ನೆಲೆ ಕಾಟನ್ ಪೇಟೆ ಪೊಲೀಸರು ಮಾಲಾ ಹಾಗೂ ಆಕೆಯ ಪುತ್ರ ಅರುಳ್​ನನ್ನ ಬಂಧಿಸಿದ್ದಾರೆ.

ಕೊಲೆಯ ಒಳಸಂಚಿನಲ್ಲಿ ಅರುಳ್ ಭಾಗಿಯಾಗಿದ್ದಾನೆ ಎನ್ನಲಾಗಿದ್ದು ಕಳೆದ ಮೂರು ದಿನಗಳಿಂದ ಅರುಳ್​ನನ್ನ ಪೊಲೀಸರು ವಿಚಾರಣೆ ನಡೆಸುತ್ತಿದ್ದರು. ಆರೋಪಿಗಳಿಗೆ ಹಣಕಾಸಿನ ನೆರವು ಮತ್ತು ಬೇಲ್ ಗೆ ಸಹಾಯ ಮಾಡುವ ಭರವಸೆಯನ್ನ ಇವರು ನೀಡಿದ್ದರು ಎನ್ನಲಾಗಿದೆ. ಪೀಟರ್ ಮತ್ತು ಸೂರ್ಯ ಜೊತೆ ಸೇರಿ ಅರುಳ್​ ಕೊಲೆಗೆ ಒಳಸಂಚು ರೂಪಿಸಿದ್ದ ಎಂದು ಹೇಳಲಾಗಿದ್ದು ಅರುಳ್ ಪಾತ್ರದ ಬಗ್ಗೆ ಪೊಲೀಸರು ಖಚಿತ ಸಾಕ್ಷ್ಯ ಸಂಗ್ರಹಿಸಿದ್ದಾರೆ ಎಂದು ವರದಿಯಾಗಿದೆ.

ರೇಖಾ ಪತಿ ಕದಿರೇಶ್​​ನ ಸಹೋದರಿ ಮಾಲಾ ಹೆಸರು ಕೂಡ ಈ ಕೊಲೆ ಪ್ರಕರಣದಲ್ಲಿ ಕೇಳಿಬಂದಿತ್ತು. ಕದಿರೇಶ್ ಹತ್ಯೆಯ ಬಳಿಕ ಎಲ್ಲಾ ಆಸ್ತಿ ರೇಖಾಗೆ ಹೋಗಿತ್ತು. ಇದೇ ಕಾರಣಕ್ಕೆ ಮಾಲಾ ರೇಖಾ ವಿರುದ್ಧ ಸಂಚು ಹೂಡಿದ್ದಳು ಎನ್ನಲಾಗಿದೆ.

The post ರೇಖಾ ಮರ್ಡರ್ ಕೇಸ್: ಕದಿರೇಶ್ ಸಹೋದರಿ ಮಾಲಾ, ಪುತ್ರ ಅರುಳ್ ಅರೆಸ್ಟ್ appeared first on News First Kannada.

Source: newsfirstlive.com

Source link