ಬೆಂಗಳೂರು: ನಿನ್ನೆ ಹತ್ಯೆಗೀಡಾದ ಮಾಜಿ ಕಾರ್ಪೊರೇಟರ್​​ ರೇಖಾ ಅವರ ಮೃತದೇಹವನ್ನ ಇಂದು ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗಿದೆ.

ಕಿಮ್ಸ್​ ಆಸ್ಪತ್ರೆಯ ಸಿಬ್ಬಂದಿ ಮರಣೋತ್ತರ ಪರೀಕ್ಷೆ ಮುಗಿಸಿ ಇಂದು ಶವವನ್ನ ಹಸ್ತಾಂತರ ಮಾಡಿದರು. ಈ ವೇಳೆ ಬಿಜೆಪಿ ಸಂಸದ ಪಿ.ಸಿ ಮೋಹನ್ ಹಾಜರಿದ್ದರು. ಅವರ ಮುಂದೆ ರೇಖಾ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

ಕೆಲವೇ ಹೊತ್ತಲ್ಲಿ ಛಲವಾದಿಪಾಳ್ಯಕ್ಕೆ ಮೃತದೇಹ ರವಾನೆಯಾಗಲಿದೆ. ಛಲವಾದಿಪಾಳ್ಯದ ಮನೆ ಬಳಿ ರೇಖಾ ಕದಿರೇಶ್ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ. ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಸೇರಿದಂತೆ ಹಲವು ಬಿಜೆಪಿ ಮುಖಂಡರು ಅಂತಿಮ ದರ್ಶನ ಪಡೆಯಲಿದ್ದಾರೆ. ಬಳಿಕ ಮಧ್ಯಾಹ್ನ ಮೈಸೂರು ರಸ್ತೆಯ ಚಿತಾಗಾರದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಪಿ.ಸಿ ಮೋಹನ್, ನಾನು ಕಮಿಟಿ ಮೀಟಿಂಗ್​ಗೆ ಅಂತಾ ದೆಹಲಿಗೆ ಹೋಗಿದ್ದೆ. ರೇಖಾ ಕದಿರೇಶ್ ಅವರ ಕೊಲೆ ವಿಚಾರ ಕೇಳಿ ಬಹಳ ಬೇಸರವಾಯ್ತು. ರೇಖಾ ಜನರ ಜೊತೆ ನಿರಂತರ ಸಂಪರ್ಕ ಇಟ್ಟುಕೊಂಡವರು. ಕಳೆದ ಎರಡು ವರ್ಷದ ಹಿಂದಷ್ಟೇ ಗಂಡನನ್ನ ಕಳೆದುಕೊಂಡಿದ್ದರು. ಒಳ್ಳೆ ಕೆಲಸ ಕಾರ್ಯದಲ್ಲಿ ರೇಖಾ ತೊಡಗಿಕೊಂಡಿದ್ದರು ಎಂದು ಸ್ಮರಿಸಿದ್ರು.

ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು. ಪೊಲೀಸರ ಬಳಿ ನಾನೂ ಮಾತನಾಡಿದ್ದೇನೆ. ಈ ರೀತಿಯ ಘಟನೆ ಮರುಕಳಿಸದಂತೆ ನೋಡಿಕೊಳ್ಳುವಂತೆ ಪೊಲೀಸರಿಗೆ ತಿಳಿಸಿದ್ದೇನೆ. ಆರೋಪಿ ಪೀಟರ್ ಕದಿರೇಶ್ ಜೊತೇನೇ ಇದ್ದಂತಹ ವ್ಯಕ್ತಿ‌. ನಾನು ಅವರಿವರ ಮೇಲೆ ಕಮೆಂಟ್ಸ್ ಮಾಡಲ್ಲ. ಯಾರು ತಪ್ಪು‌ ಮಾಡಿದ್ದಾರೋ ಅಂತವರಿಗೆ ಶಿಕ್ಷೆಯಾಗಲಿ ಎಂದು ಹೇಳಿದ್ರು.

The post ರೇಖಾ ಮೃತದೇಹ ಹಸ್ತಾಂತರ.. ಪಿ.ಸಿ ಮೋಹನ್ ಎದುರು ಕುಟುಂಬಸ್ಥರ ಆಕ್ರಂದನ appeared first on News First Kannada.

Source: newsfirstlive.com

Source link