ರೇಖಾ ಮೇಲೆ ಇದೆಂಥಾ ಆರೋಪ? -ಪೊಲೀಸರ ಮುಂದೆ ಆರೋಪಿಗಳ ಸ್ಫೋಟಕ ಹೇಳಿಕೆ

ರೇಖಾ ಮೇಲೆ ಇದೆಂಥಾ ಆರೋಪ? -ಪೊಲೀಸರ ಮುಂದೆ ಆರೋಪಿಗಳ ಸ್ಫೋಟಕ ಹೇಳಿಕೆ

ಬೆಂಗಳೂರು: ಛಲವಾದಿಪಾಳ್ಯದ ಮಾಜಿ ಕಾರ್ಪೊರೇಟರ್ ರೇಖಾ ಕದಿರೇಶ್​ ಭೀಕರ ಕೊಲೆ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್​​ ಸಿಕ್ಕಿದೆ. ರೇಖಾ ಅವರನ್ನ ಕೊಲೆ ಮಾಡಿದ್ದೇಕೆ ಎಂಬ ಕಾರಣವನ್ನು ಆರೋಪಿಗಳು ಬಾಯ್ಬಿಟ್ಟಿದ್ದಾರೆ ಎನ್ನಲಾಗಿದೆ.

2018ರ ಫೆಬ್ರವರಿ 8ರಂದು ರೇಖಾ ಪತಿ ಕದಿರೇಶ್​ ಕೊಲೆ ಪ್ರಕರಣವೇ ಸದ್ಯ ರೇಖಾ ಹತ್ಯೆಗೆ ಕಾರಣ ಎಂದು ಆರೋಪಿಗಳು ಹೇಳಿದ್ದಾರೆ ಎನ್ನಲಾಗಿದೆ. ಅಂದು ಕದಿರೇಶ್​​ನನ್ನು ಶೋಭನ್ ಮತ್ತು ಗ್ಯಾಂಗ್ ಕೊಲೆ ಮಾಡಿತ್ತು.

ರೇಖಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ಪೊಲೀಸರು 6 ಆರೋಪಿಗಳನ್ನು ಅರೆಸ್ಟ್​ ಮಾಡಿದ್ದಾರೆ. ಪುರುಷೋತ್ತಮ್​, ಪೀಟರ್​​, ಸೂರ್ಯ, ಸ್ಟೀಫನ್​ ಬಂಧಿತ ಆರೋಪಿಗಳು. ಜೊತೆಗೆ ಅರುಳ್ ಎಂಬಾತನ ಬಂಧನವಾಗಿದ್ದರೂ ಇದುವರೆಗೂ ಪೊಲೀಸರು ಆತನ ಹೆಸರನ್ನು ರಿವೀಲ್ ಮಾಡಿಲ್ಲ.

ಸದ್ಯ ಪೊಲೀಸರ ವಶದಲ್ಲಿರುವ ಪೀಟರ್​ ಕೊಲೆಯ ಹಿಂದಿನ ಕಾರಣವನ್ನ ಬಿಚ್ಚಿಟ್ಟಿದ್ದಾನೆ. 2018ರಲ್ಲಿ ಕದಿರೇಶ್​ ಕೊಲೆ ಮಾಡಿದ್ದ ಶೋಭನ್​ ಮತ್ತು ಗ್ಯಾಂಗ್​​ ಜೊತೆ ರೇಖಾ ಕದಿರೇಶ್​ ಕೂಡ ಸೇರಿಕೊಂಡು ನೆರವು ನೀಡಿದ್ದರು ಅಂತಾ ಆತ ರೇಖಾ ಮೇಲೆಯೇ ಆರೋಪ ಮಾಡಿ ಹೇಳಿಕೆ ಕೊಟ್ಟಿದ್ದಾನಂತೆ. 20 ವರ್ಷಗಳಿಂದ ನಾವು ಕದಿರೇಶ್​ ಜೊತೆ ಕೆಲಸ ಮಾಡುತ್ತಿದ್ದೆವು. ಆತ ನಮ್ಮನ್ನು ಮಕ್ಕಳಂತೆ ನೋಡಿಕೊಂಡು ಬರುತ್ತಿದ್ದರು. ಆದರೆ ಅವರ ಕೊಲೆ ಬಳಿಕ ನಮ್ಮನ್ನು ರೇಖಾ ​ ಸರಿಯಾಗಿ ನಡೆಸಿಕೊಳ್ಳಿಲ್ಲ. ಆಕೆ ಪತಿಯ ಕೊಲೆಗೆ ದೊಡ್ಡ ಗ್ಯಾಂಗ್​​ನೊಂದಿಗೆ ಕೈಜೋಡಿಸಿದ್ದಳು. ಇದನ್ನು ನಾನು ಕಣ್ಣರೇ ನೋಡಿದ್ದೇನೆ. ಕದಿರೇಶ್ ಕೊಲೆಗೆ ಸೇಡು ತೀರಿಸಿಕೊಳ್ಳಲು ಹತ್ಯೆ ಮಾಡಿದ್ವಿ ಎಂದು ಪೀಟರ್ ಪೊಲೀಸರ ಮುಂದೇ ಆರೋಪಿಸಿದ್ದಾನೆ ಎನ್ನಲಾಗಿದೆ.

ಇನ್ನು ಆರೋಪಿಗಳಾದ ಪೀಟರ್ ಮತ್ತು ಸೂರ್ಯ ಜೊತೆಗೆ ಮಾಲ ಹಾಗೂ ಆಕೆಯ ಪುತ್ರ ಅರುಳ್ ನಿಕಟ ಸಂಪರ್ಕ ಹೊಂದಿದ್ದರು ಎನ್ನಲಾಗಿದೆ. ಅವರಿಬ್ಬರೂ ಆರೋಪಿಗಳಿಗೆ ಬ್ರೇನ್ ವಾಶ್​ ಮಾಡಿ  ಕೊಲೆಗೆ ಸಾಥ್​ ನೀಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆ ಪೊಲೀಸರು ಉನ್ನತ ಮಟ್ಟದ ತನಿಖೆಯನ್ನು ಮುಂದುವರಿಸಿದ್ದಾರೆ.

The post ರೇಖಾ ಮೇಲೆ ಇದೆಂಥಾ ಆರೋಪ? -ಪೊಲೀಸರ ಮುಂದೆ ಆರೋಪಿಗಳ ಸ್ಫೋಟಕ ಹೇಳಿಕೆ appeared first on News First Kannada.

Source: newsfirstlive.com

Source link