ಹಾವೇರಿ: ಬೆಂಗಳೂರಿನಲ್ಲಿ ಮಾಜಿ ಕಾರ್ಪೊರೇಟರ್ ರೇಖಾ ಹತ್ಯೆ ಕೇಸ್​ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಈ ಪ್ರಕರಣದಲ್ಲಿ ಮಾಜಿ ಸಚಿವ ಜಮೀರ್ ಅಹ್ಮದ್ ಕೈವಾಡವಿದೆ ಅನ್ನೋದರ ಕುರಿತಂತೆ ಪ್ರತಿಕ್ರಿಯೆ ನೀಡಿದ ಬಸವರಾಜ್​ ಬೊಮ್ಮಾಯಿ.. ಅದು ನನಗೆ ಗೊತ್ತಿಲ್ಲ.. ಈ ರೀತಿ ಸುದ್ದಿ ಬಂದಿದೆ. ಇದರ ಬಗ್ಗೆ ಸಂಪೂರ್ಣ ತನಿಖೆ ಮಾಡಬೇಕು ಅಂತಾ ನಾನು ಈಗಾಗ್ಲೇ ಬೆಂಗಳೂರು ಕಮಿಷನರ್ಗೆ ಸೂಚನೆ ಕೊಟ್ಟಿದ್ದೇನೆ. ಈ ಕೇಸ್ನಲ್ಲಿ ಈಗಾಗಲೇ ಸಾಕ್ಷಿ ಸಂಗ್ರಹ ಮಾಡ್ತಾ ಇದಾರೆ. ನನಗೆ ನಂಬಿಕೆ ಇದೆ ಶೀಘ್ರವಾಗಿ ಇದರಲ್ಲಿ ಯಾರ ಕೈವಾಡವಿದೆ ಎಂದು ಪತ್ತೆ ಹಚ್ಚಿ ಅವರನ್ನು ಬಂಧಿಸುತ್ತೇವೆ ಅಂತ ಹೇಳಿದ್ರು.

ಜಿಲ್ಲೆಯ ನಾಗೇಂದ್ರನಮಟ್ಟಿಯಲ್ಲಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಮಾತನಾಡಿದ್ದು.. ರಾಜ್ಯದಲ್ಲಿಯೇ ಮೊದಲ ಬಾರಿಗೆ ಮಕ್ಕಳ ಆರೋಗ್ಯ ತಪಸಣಾ ಶಿಬಿರ ಉದ್ಘಾಟನೆಯಾಗಿದೆ. ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತಿರುವ ಮೆಸ್ಸಿ ವೈರಸ್ ಹಾಗೂ ಬೇರೆ ಬೇರೆ ವೇರಿಯಂಟ್ಸ್ ಆಗ್ತಾ ಇದ್ದಾವೆ. ಅವುಗಳ ಮೇಲೆ ನಿಗಾ ವಹಿಸಿದ್ದೇವೆ. ಈಗಾಗಲೇ ಜಿನೋಮ್ ಲ್ಯಾಬ್ನಲ್ಲಿ ನಿರಂತರ ಪರೀಕ್ಷೆ ಮಾಡ್ತಾ ಇದೀವಿ. ಅದರ ಕಾಂಬಿನೇಷನ್ ಒಟ್ಟು ಪರಿಣಾಮ ಏನಾಗುತ್ತೆ..? ಮನುಷ್ಯರ ಮೇಲೆ ಏನಾಗುತ್ತೆ..? ವ್ಯಾಕ್ಸಿನ್ ಮೇಲೆ ಏನಾಗುತ್ತೆ..? ಅಂತಾ ಎಲ್ಲಾ ರಿಪೋರ್ಟ್ ನೋಡ್ತಾ ಇದೀವಿ. ಏನೇನು ಬದಲಾವಣೆ ಆಗುತ್ತೆ ಅಂತಾ ನಿಗಾ ಇಟ್ಟಿದ್ದೇವೆ. ಇದರಲ್ಲಿ ಎರಡು ಥರದ ಎಫೆಕ್ಟ್ ಆಗ್ತಾ ಇದೆ ಅಂತ ಹೇಳಿದ್ದಾರೆ.

The post ರೇಖಾ ಹತ್ಯೆ ಕೇಸ್: ಕೈವಾಡ ಯಾರದ್ದೇ ಇದ್ರೂ ಪತ್ತೆಹಚ್ಚಿ ಬಂಧಿಸ್ತೇವೆ- ಬೊಮ್ಮಾಯಿ appeared first on News First Kannada.

Source: newsfirstlive.com

Source link