ರೇಣುಕಾಚಾರ್ಯರಿಗೆ ತಿಂಡಿ ತಯಾರಿಸಿಕೊಂಡು ಬಂದು ತಿನ್ನಿಸಿದ ಹೊನ್ನಾಳಿ ಸುತ್ತಮತ್ತಲಿನ ಗ್ರಾಮಗಳ ಮಹಿಳೆಯರು – Women of Honnali’ s neighbouring villages prepare breakfast and feed grieving Renukacharya video story in Kannadaಸುತ್ತಮುತ್ತಲಿನ ಗ್ರಾಮಗಳ ಮಹಿಳೆಯರು ಶನಿವಾರ ಬೆಳಗ್ಗೆ ಶೋಕಸಾಗರದಲ್ಲಿ ಮುಳುಗಿರುವ ರೇಣುಕಾಚಾರ್ಯ ಮತ್ತು ಕುಟುಂಬದ ಸದಸ್ಯರಿಗೆ ತಿಂಡಿ ಮತ್ತು ಊಟ ತೆಗೆದುಕೊಂಡು ಬಂದು ತಿನ್ನಿಸಿದರು.

TV9kannada Web Team


| Edited By: Arun Belly

Nov 05, 2022 | 1:33 PM
ದಾವಣಗೆರೆ: ಬಿಜೆಪಿ ನಾಯಕ ಎಮ್ ಪಿ ರೇಣುಕಾಚಾರ್ಯ (MP Renukacharya) ತಮ್ಮ ಕ್ಷೇತ್ರದಲ್ಲಿ ಜನಪ್ರಿಯರು, ಜನಾನುರಾಗಿ ಅನ್ನೋದು ನಿರ್ವಿವಾದಿತ. ಮಗ ಚಂದ್ರಶೇಖರ್ (Chandrashekar) ನಾಪತ್ತೆಯಾದ ದಿನದಿಂದ ಅವರು ಊಟ-ನಿದ್ದೆ ಮಾಡಿರಲಿಲ್ಲ. ಚಂದ್ರಶೇಖರನ ಅಂತಿಮ ಸಂಸ್ಕಾರ ಶುಕ್ರವಾರ ಸಾಯಂಕಾಲ ನಡೆದಿದ್ದು ರಾಜ್ಯದ ಜನತೆಯೆಲ್ಲ ನೋಡಿದೆ. ನ್ಯಾಮತಿ (Nyamati), ಮಾದನಬಾವಿ, ಆರುಂಡಿ, ಕೊಂಚಿಕೊಪ್ಪ ಮೊದಲಾದ ಗ್ರಾಮಗಳ ಮಹಿಳೆಯರು ಶನಿವಾರ ಬೆಳಗ್ಗೆ ಶೋಕಸಾಗರದಲ್ಲಿ ಮುಳುಗಿರುವ ರೇಣುಕಾಚಾರ್ಯ ಮತ್ತು ಅವರ ಕುಟುಂಬದ ಸದಸ್ಯರಿಗೆ ತಿಂಡಿ ಮತ್ತು ಊಟ ತೆಗೆದುಕೊಂಡು ಬಂದು ತಿನ್ನಿಸಿದರು.

TV9 Kannada


Leave a Reply

Your email address will not be published.