ರೇಣುಕಾಚಾರ್ಯರಿಗೆ ಸೇರಿದ 15 ಕಾರ್ ಸೇರಿ 18 ವಾಹನಗಳಿಗೆ ಆಯುಧ ಪೂಜೆ.. ಅಧಿಕಾರಿಗಳೂ ಭಾಗಿ

ದಾವಣಗೆರೆ: ಶಾಸಕ ರೇಣುಕಾಚಾರ್ಯ ಅವರಿಗೆ ಸೇರಿದ 18 ವಾಹನಗಳಿಗೆ ಇಂದು ಆಯುಧ ಪೂಜೆ ನೆರವೇರಿಸಲಾಗಿದೆ. ಶಾಸಕ ರೇಣುಕಾಚಾರ್ಯ ಅವರು ತಮಗೆ ಸೇರಿದ 15 ಕಾರ್, 2 ಲಾರಿ, 1 ಆ್ಯಂಬುಲೆನ್ಸ್ ಸೇರಿ 18 ವಾಹನಗಳಿಗೆ ಆಯುಧ ಪೂಜೆ ನಿಮಿತ್ತ ದಾವಣಗೆರೆಯ ಹೊನ್ನಾಳಿಯ ಹಿರೇಕಲ್ಮಟದಲ್ಲಿ ಪೂಜೆ ನೆರವೇರಿಸಿದ್ದಾರೆ.

ಪೂಜೆಯಲ್ಲಿ ಡಿಸಿ ಮಹಾಂತೇಶ್ ಬೀಳಗಿ, ಎಸ್​ಪಿ ರಿಷ್ಯಂತ, ಜಿಲ್ಲಾ ಪಂಚಾಯತ್ ಸಿಇಓ ವಿಜಯ್ ಮಹಾಂತೇಶ್ ಭಾಗಿಯಾಗಿದ್ದರು. ಇದೇ ವೇಳೆ ಎಸ್​ಪಿ, ಡಿಸಿ, ಸಿಇಓ, ಅವರ ವಾಹನಗಳಿಗೂ ರೇಣುಕಾಚಾರ್ಯ ಪೂಜೆ ನೇರವೇರಿಸಿದ್ದಾರೆ. ಇನ್ನು ರೇಣುಕಾಚಾರ್ಯ ಬಳಿ ಇದ್ದ ವಾಹನಗಳನ್ನ ಕಂಡು ಅಧಿಕಾರಿಗಳು ಮೂಕವಿಸ್ಮಿತರಾಗಿದ್ದಾರೆ ಎನ್ನಲಾಗಿದೆ.

News First Live Kannada

Leave a comment

Your email address will not be published. Required fields are marked *