ದಾವಣಗೆರೆ: ಕೊರೊನಾ ಸೋಂಕಿಗೆ ಒಳಗಾಗಿರುವ ಜನರಿಗೆ ನೆರವು ನೀಡುವುದರೊಂದಿಗೆ ಸರ್ಕಾರ ಸ್ಥಾಪಿಸಿರುವ ಕೊರೊನಾ ಕೇರ್ ಸೆಂಟರ್​ನಲ್ಲಿ ಯಾವುದೇ ರೀತಿಯ ಸಮಸ್ಯೆ ಎದುರಾಗದಂತೆ ಶಾಸಕ ರೇಣುಕಾಚಾರ್ಯ ನಿರಂತರವಾಗಿ ಸ್ಪಂದಿಸುತ್ತಿದ್ದಾರೆ. ಇದರ ನಡುವೆ ದಾವಣಗೆರೆಯಲ್ಲಿ ಕೋವಿಡ್ ಸೋಂಕಿತರ ಹೊಸ ವರಸೆ ಶುರು ಮಾಡಿದ್ದು, ಹೊನ್ನಾಳಿ ಕೋವಿಡ್ ಕೇರ್ ಸೆಂಟರ್​​ಗೆ ಹೋಗಲು ಕೋವಿಡ್ ಸೋಂಕಿತರ ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ.

ಹೊನ್ನಾಳಿಯಲ್ಲಿರುವ ಕೋವಿಡ್​ ಕೇರ್ ಸೆಂಟರ್​ನಲ್ಲಿ ಅತ್ಯುತ್ತಮ ಸೇವೆ ನೀಡಲಾಗುತ್ತಿದೆ. ಹೋಳಿಗೆ ಊಟ, ಹಾಡು ಡ್ಯಾನ್ಸ್ ಕೂಡ ಇದೆ. ಆದ್ದರಿಂದ ನಮ್ಮನ್ನ ಹೊನ್ನಾಳಿಯ ಕೋವಿಡ್ ಕೇರ್ ಸೆಂಟರ್ ಗೆ ಕಳುಹಿಸಿ ಕೊಡಿ ಅಂತ ಪಟ್ಟು ಹಿಡಿದ್ದಾರೆ. ಸೋಂಕಿತರ ಮನವಿಗೆ ಸ್ಪಂದಿಸಿರುವ ಜಗಳೂರು ಶಾಸಕ ಎಸ್.ವಿ.ರಾಮಚಂದ್ರಪ್ಪ ಸೋಂಕಿತರನ್ನ ಹೊನ್ನಾಳಿಗೆ ಕಳುಹಿಸಿಕೊಟ್ಟಿದ್ದಾರೆ. ಸದ್ಯ ಸೋಂಕಿತರು ಅರಬಗಟ್ಟೆ ಕೋವಿಡ್ ಕೇರ್ ಸೆಂಟರ್ ನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ಹೊನ್ನಾಳಿ ಮತ್ತು ಅರಬಗಟ್ಟೆ ಕೋವಿಡ್​ ಸೆಂಟರ್​ಗಳಲ್ಲಿ ನಿತ್ಯ ಸೋಂಕಿತರ ಸೇವೆ ಮಾಡುತ್ತಿರುವ ಶಾಸಕರು, ಸ್ಥಳೀಯರ ಮನಸ್ಸು ಗೆಲ್ಲಲು ಯಶಸ್ವಿಯಾಗಿದ್ದಾರೆ. ಮಸ್ತ್​​ ಮಸ್ತ್​ ಡಾನ್ಸ್​, ಯೋಗ, ಹಾಡುಗಾರಿಕೆ ಹಾಗೂ ಸಾಹಸ ಹಾಗೂ ಮನರಂಜನಾ ಕಾರ್ಯಕ್ರಮಗಳನ್ನು ಕೋವಿಡ್ ಕೇರ್ ಸೆಂಟರ್​ನಲ್ಲಿ ಆಯೋಜನೆ ಮಾಡಲಾಗಿದೆ. ಇದರಿಂದ ಪಾಸಿಟಿವ್​ಗೆ ಒಳಗಾಗಿದ್ದರು ನಾವು ಕೋವಿಡ್ ಕೇರ್ ಸೆಂಟರ್​​ಗನಲ್ಲಿದ್ದೇವೆ ಎಂಬುವುದನ್ನು ಮರೆತು ಜನರು ಸೋಂಕಿನ ವಿರುದ್ಧ ಹೋರಾಡಲು ಮಾನಸಿಕವಾಗಿ ದೃಢವಾಗುತ್ತಿದ್ದಾರೆ. ಈಗಾಗಲೇ ಹಲವು ಸೋಂಕಿತರು ಕೋವಿಡ್​ ಕೇರ್​ ಕೇಂದ್ರದಲ್ಲಿ ಚಿಕಿತ್ಸೆ ಪಡೆದು ವಾಪಸ್ ತೆರಳುವ ಸಂದರ್ಭದಲ್ಲಿ ಶಾಸಕರಿಗೆ ಧನ್ಯವಾದ ತಿಳಿಸಿದ್ದಾರೆ.

The post ರೇಣುಕಾಚಾರ್ಯ ಕಾರ್ಯಕ್ಕೆ ಫಿದಾ- ಹೊನ್ನಾಳಿ ಕೋವಿಡ್ ಕೇರ್ ಸೆಂಟರ್​​ಗೆ ಭಾರೀ ಡಿಮ್ಯಾಂಡ್ appeared first on News First Kannada.

Source: newsfirstlive.com

Source link