ದಾವಣಗೆರೆ: ಬಿಜೆಪಿ ಯುವ ಮುಖಂಡನೋರ್ವನ ಅದ್ಧೂರಿ ಮದುವೆಯಲ್ಲಿ ಹೊನ್ನಾಳಿ ಶಾಸಕ ರೇಣುಕಾಚಾರ್ಯ ಕಾಣಿಸಿಕೊಂಡಿದ್ದಾರೆ.

ದಾವಣಗೆರೆ ಜಿಲ್ಲೆ ಹೊನ್ನಾಳಿ ಪಟ್ಟಣದ ಹಿರೇಕಲ್ಮಠದಲ್ಲಿ ಮದುವೆ ನಡೆದಿದೆ. ಈ ಮದುವೆಯಲ್ಲಿ ಸಾಮಾಜಿಕ ಅಂತರವನ್ನಾಗಲೀ ಅಥವಾ ೪೦ ಜನರು ಮಾತ್ರವೇ ಮದುವೆಯಲ್ಲಿ ಪಾಲ್ಗೊಳ್ಳಬೇಕೆಂಬ ನಿಯಮವನ್ನಾಗಲೀ ಪಾಲಿಸಿಲ್ಲ. ಅಲ್ಲದೇ ಸರ್ಕಾರ ನಿನ್ನೆಯಷ್ಟೇ ಮದುವೆಗಳನ್ನು ಮನೆಯಲ್ಲೇ ನಡೆಸಬೇಕು ಎಂದಿದ್ದರೂ ಸಹ ಕಲ್ಯಾಣಮಂಟಪದಲ್ಲಿ‌ಮದುವೆ ಕಾರ್ಯ ನಡೆದಿದೆ. ಇನ್ನು ಮದುವೆಯಲ್ಲಿ ರೇಣುಕಾಚಾರ್ಯ ಮಾಸ್ಕ್‌ಹಂಚಿದ್ದಾರೆ.

The post ರೇಣುಕಾಚಾರ್ಯ ಭಾಗಿಯಾಗಿದ್ದ ಅದ್ಧೂರಿ ಮದುವೆಯಲ್ಲಿ ರೂಲ್ಸ್ ಬ್ರೇಕ್ appeared first on News First Kannada.

Source: newsfirstlive.com

Source link