ಬೆಂಗಳೂರು: ಇಂದು ರೇಣುಕಾಚಾರ್ಯ ಸೇರಿದಂತೆ ಹಲವು ಶಾಸಕರು ಸಿಎಂ ಬಿ.ಎಸ್​ ಯಡಿಯೂರಪ್ಪರನ್ನ ಭೇಟಿ‌ ಮಾಡಿ ಕ್ಷೇತ್ರದ ಕೋವಿಡ್ ಪರಿಸ್ಥಿತಿ ಬಗ್ಗೆ ವಿವರಣೆ ನೀಡಿದ್ದಾರೆ.

ಭೇಟಿ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ರೇಣುಕಾಚಾರ್ಯ, 18 ಶಾಸಕರು ಇಂದು ಸಿಎಂ ಭೇಟಿ ಮಾಡಿ ಕೋವಿಡ್ ನಿರ್ವಹಣೆ ಬಗ್ಗೆ ಚರ್ಚೆ ನಡೆಸಿದ್ದೇವೆ. ಯಡಿಯೂರಪ್ಪ ಅವರ ಬಳಿ ಕೋವಿಡ್ ನಿರ್ವಹಣೆಯ ವಿವರ ನೀಡಿದ್ದೇವೆ. ನಾವ್ಯಾರೂ ಇಲ್ಲಿಯವರೆಗೆ ಬೆಂಗಳೂರಿಗೆ ಭೇಟಿ ಮಾಡಿರಲಿಲ್ಲ. ಇಂದು ಸಿಎಂ ಭೇಟಿ ಮಾಡಿ ವರದಿ ನೀಡಿದ್ದೇವೆ ಎಂದರು. ನಾವ್ಯಾರೂ ಸಹ ಮಾಲೀಕರಲ್ಲ, ನಾವೆಲ್ಲ ಸೇವಕರು. ಇನ್ನು 60-70 ಶಾಸಕರು ಈಗಲೂ ಕೋವಿಡ್ ನಿರ್ವಹಣೆಯಲ್ಲಿ ತೊಡಗಿಸಿಕೊಂಡಿದ್ದಾರೆ. ನಾವು 18 ಶಾಸಕರು ಮಾತ್ರ ಇಂದು ಸಿಎಂ ಭೇಟಿ ಮಾಡಿದ್ದೇವೆ ಎಂದು ಹೇಳಿದ್ರು.

ದೆಹಲಿಗೆ ಹೋಗಿ ಗೇಟ್ ಮುಟ್ಟಿ ಬರ್ತಾರೆ ಅಷ್ಟೇ
ಇದೇ ವೇಳೆ, ಸಿಎಂ ಬದಲಾವಣೆ ವಿಚಾರ ಮತ್ತೆ ಮುನ್ನೆಲೆಗೆ ಬಂದ ಬಗ್ಗೆ ಪ್ರತಿಕ್ರಿಯಿಸಿದ ರೇಣುಕಾಚಾರ್ಯ, ಕೋವಿಡ್ ಸಂದರ್ಭದಲ್ಲಿ ರಾಜಕಾರಣ ಮಾತಾಡೋದು ಸರಿಯಲ್ಲ, ಈಗ ನಾವು ಜನರ ಕೆಲಸ ಮಾಡಬೇಕು. ಬಿಜೆಪಿ ಮೂರು ಪಕ್ಷಗಳ ಸರ್ಕಾರ ಅಲ್ಲ. ಯಾರೋ ಒಬ್ಬರು ಬೊಗಳ್ತಾರೆ, ಅವರು ಬೊಗಳ್ತಿರಲಿ. ಯಡಿಯೂರಪ್ಪ ನಾಯಕತ್ವ ಮುಂದುರಿಯಲಿದೆ. ಯಡಿಯೂರಪ್ಪ ಅವರೇ ಸಿಎಂ ಆಗಿ ಈ ಅವಧಿ ಪೂರ್ಣಗೊಳಿಸ್ತಾರೆ. ಕೆಲವರು ದೆಹಲಿಗೆ ಹೋಗಿ ಗೇಟ್ ಮುಟ್ಟಿ ಬರ್ತಾರೆ ಅಷ್ಟೇ. ಹೈಕಮಾಂಡ್ ನಾಯಕರು ಅವರನ್ನ ಭೇಟಿ ಮಾಡ್ತಿಲ್ಲ. ಕೋವಿಡ್ ಸಂದರ್ಭದಲ್ಲಿ ರಾಜಕಾರಣ ಮಾಡುವವರನ್ನ ಜನರು ಮುರ್ಖರು ಅಂತಾರೆ ಎಂದು ಹರಿಹಾಯ್ದರು.

The post ರೇಣುಕಾಚಾರ್ಯ ಸೇರಿ 18 ಶಾಸಕರಿಂದ ಸಿಎಂ ಭೇಟಿ appeared first on News First Kannada.

Source: newsfirstlive.com

Source link