ಬೆಂಗಳೂರು: ನಿಖಿಲ್​ ಕುಮಾರಸ್ವಾಮಿ ಅವರ ‘ರೈಡರ್​’ ಸಿನಿಮಾ ಬಳಿಕ ಅವರ ನಡೆ ಏನು ಎಂಬ ಅಭಿಮಾನಿಗಳ ಪ್ರಶ್ನೆಗೆ ಉತ್ತರ ಸಿಕ್ಕಿದೆ. ನಿಖಿಲ್ ನಟನೆಯ ಹೊಸ ಸಿನಿಮಾದ ಕುರಿತು ಭರ್ಜರಿ ಅಪ್​​ಡೇಟ್​​ ಸಿಕ್ಕಿದ್ದು, ನಿರ್ಮಾಪಕರು ಹಾಗೂ ನಿರ್ದೇಶಕರ ಮಾಹಿತಿ ಬಿದ್ದಿದೆ.

ಚಿತ್ರತಂಡ ಕೆವಿಎನ್ -3 ಹೆಸರಿನೊಂದಿಗೆ ಶೂಟಿಂಗ್ ಆರಂಭ ಮಾಡಲು ಸಿದ್ಧತೆ ನಡೆಸಿದ್ದು, ಟೈಟಲ್ ಘೋಷಣೆ ಬಾಕಿ ಇದೆ. ಭರಾಟೆ ಚಿತ್ರದ ನಿರ್ಮಾಪಕ ಸುಪ್ರೀತ್ ಅವರ ಕೆವಿಎನ್ ಬ್ಯಾನರ್ ನಲ್ಲಿ ನಿಖಿಲ್ ಹೊಸ ಚಿತ್ರ ನಿರ್ಮಾಣ ಆಗಲಿದ್ದು, ಸಿನಿಮಾಗೆ ನವ ನಿರ್ದೇಶಕ ಮನು ಅಥರ್ವ ನಿರ್ದೇಶನ ಮಾಡಲಿದ್ದಾರೆ. ಇನ್ನು ಜುಲೈ ಮೊದಲ ವಾರದಲ್ಲಿ ಚಿತ್ರದ ಟೈಟಲ್ ಘೋಷಣೆ ಮಾಡಲು ಚಿತ್ರತಂಡ ಪ್ಲಾನ್​ ಮಾಡಿಕೊಂಡಿದೆ.

ಜಾಗ್ವಾರ್​ ಸಿನಿಮಾ ಮೂಲಕ ಏಕಕಾಲದಲ್ಲಿ ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ಭರ್ಜರಿ ಎಂಟ್ರಿ ಪಡೆದಿದ್ದ ನಿಖಿಲ್​ ಅವರು, ಆ ಬಳಿಕ ಸೀತಾರಾಮ ಕಲ್ಯಾಣ, ಕುರುಕ್ಷೇತ್ರ ಸಿನಿಮಾದಲ್ಲಿ ನಟಿಸಿದ್ದರು. ಸದ್ಯ ಟಾಲಿವುಡ್ ನಿರ್ದೇಶಕ ವಿಜಯ್​ ಕುಮಾರ್ ನಿರ್ದೇಶನದ ರೈಡರ್​ ಸಿನಿಮಾದ ಶೂಟಿಂಗ್ ಬಹುತೇಕ ಪೂರ್ಣಗೊಂಡಿದ್ದು, ಸಿನಿಮಾ ಟೀಸರ್​ ಈಗಾಗಲೇ ಬಿಡುಗಡೆಯಾಗಿದೆ. ರೈಡರ್​ ಸಿನಿಮಾ ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ಮೂಡಿ ಬರುತ್ತಿದೆ.

The post ‘ರೈಡರ್’ ಚಿತ್ರದ ನಂತರ ನಿಖಿಲ್ ಕುಮಾರ್ ನಡೆ ಏನು..? ಅಭಿಮಾನಿಗಳ ಪ್ರಶ್ನೆಗೆ ಸಿಕ್ಕೇ ಬಿಡ್ತು ಉತ್ತರ appeared first on News First Kannada.

Source: newsfirstlive.com

Source link