ಬೆಳಗಾವಿ: ರೈತರೊಬ್ಬರಿಗೆ ಸಾಯಿ ಎಂದು ಹೇಳಿದ ಆಡಿಯೋ ವೈರಲ್ ವಿಚಾರವಾಗಿ ಆಹಾರ ಮತ್ತು ನಾಗರಿಕ ಪೂರೈಕ ಸಚಿವ ಉಮೇಶ್ ಕತ್ತಿ ರಾಜ್ಯದ ರೈತರು ಮತ್ತು ಜನರಿಗೆ ಕ್ಷಮೆಯಾಚಿಸಿದ್ದಾರೆ.

ನನ್ನ ಹೇಳಿಕೆಯಿಂದ ನೋವಾಗಿದ್ದರೆ ಕ್ಷಮಿಸಿ ಎಂದು ಉಮೇಶ್ ಕತ್ತಿ ಹೇಳಿಕೆ ನೀಡಿದ್ದಾರೆ. ಈ ವಿಚಾರವಾಗಿ ಸಿಎಂ ಬಿಎಸ್​ ಯಡಿಯೂರಪ್ಪ ನನ್ನ ಜೊತೆ ಮಾತನಾಡಿದ್ದಾರೆ. ಅವರು ನಮ್ಮ ಸಿಎಂ ಅವರಿಗೆ ನನ್ನ ಜೊತೆ ಮಾತನಾಡುವ ಹಕ್ಕಿದೆ ಎಂದಿದ್ದಾರೆ.
ಇನ್ನು ವಿಪಕ್ಷ ನಾಯಕರು ಕತ್ತಿ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ್ದಕ್ಕೆ ಪ್ರತಿಕ್ರಿಯೆ ನೀಡಿ.. ಡಿಕೆ ಶಿವಕುಮಾರ ನನ್ನ ರಾಜೀನಾಮೆ ಕೇಳಲು ಯಾರು? ಅವರೊಂದು ಪಕ್ಷದ ಅಧ್ಯಕ್ಷರು ಮಾತ್ರ ಎಂದು ಹೇಳಿದ್ದಾರೆ.

The post ರೈತನಿಗೆ ಸಾಯಿ ಎಂದ ಆರೋಪ.. ಕೊನೆಗೂ ರಾಜ್ಯದ ರೈತರ, ಜನರ ಕ್ಷಮೆ ಕೇಳಿದ ಉಮೇಶ್ ಕತ್ತಿ appeared first on News First Kannada.

Source: newsfirstlive.com

Source link