ತೆಲಂಗಾಣ: ಮಹತ್ವದ ಬೆಳವಣಿಗೆಯೊಂದರಲ್ಲಿ ತೆಲಂಗಾಣ ಮಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಆರೋಗ್ಯ ಇಲಾಖೆಯನ್ನ ತಮ್ಮ ಸ್ವಾಧೀನಕ್ಕೆ ತೆಗೆದುಕೊಂಡಿದ್ದಾರೆ. ಈ ಹಿಂದೆ ಆರೋಗ್ಯ ಸಚಿವರಾಗಿದ್ದ ಈಟಲಾ ರಾಜೇಂದ್ರ ಅವರ ವಿರುದ್ಧ ರೈತರ ಭೂಮಿ ಕಿತ್ತುಕೊಂಡ ಆರೋಪ ಕೇಳಿಬಂದ ಹಿನ್ನೆಲೆ ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡಲಾಗಿದ್ದು ಆರೋಗ್ಯ ಇಲಾಖೆಯನ್ನ ಸಿಎಂ ತಮ್ಮ ವ್ಯಾಪ್ತಿಗೆ ತೆಗೆದುಕೊಂಡಿದ್ದಾರೆ. ಇದಕ್ಕೆ ಅಲ್ಲಿನ ರಾಜ್ಯಪಾಲರಿಂದಲೂ ಅನುಮತಿ ಸಿಕ್ಕಿದೆ.

ಮೇದಕ್ ಜಿಲ್ಲೆಯಲ್ಲಿ ಭೂ ಸ್ವಾಧೀನ ಮಾಡಿಕೊಂಡಿರುವ ಆರೋಪ ಕೇಳಿಬಂದ ಹಿನ್ನೆಲೆ ಈಟಲಾ ರಾಜೇಂದ್ರ ಮೇಲೆ ಅಲ್ಲಿನ ಜಿಲ್ಲಾಧಿಕಾರಿಯಿಂದ ತನಿಖೆ ನಡೆಸುವಂತೆ ಸಿಎಂ ಚಂದ್ರಶೇಖರ್ ರಾವ್ ತೆಲಂಗಾಣ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ನಿರ್ದೇಶನ ನೀಡಿದ್ದಾರೆ.

ಈಟಲಾ ರಾಜೇಂದ್ರ ತಮ್ಮ ಕೋಳಿ ಫಾರ್ಮ್ ‘ಜಮುನಾ ಹ್ಯಾಚರೀಸ್’ ಸುತ್ತಮುತ್ತ ಸುಮಾರು 100 ಎಕರೆಯಷ್ಟು ನಿಯೋಜಿತ ಭೂಮಿಯನ್ನ ರೈತರಿಂದ ಕಸಿದುಕೊಂಡಿದ್ದಾರೆ ಎಂದು ಕೆಲವು ರೈತರು ಸಿಎಂ ಕೆಸಿಆರ್​ಗೆ ದೂರು ನೀಡಿದ ಹಿನ್ನೆಲೆ ಈ ಕ್ರಮ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.

The post ರೈತರಿಂದ ಭೂಮಿ ಕಿತ್ತುಕೊಂಡ ಆರೋಪ.. ತೆಲಂಗಾಣ ಆರೋಗ್ಯ ಸಚಿವನ ಸ್ಥಾನವನ್ನೇ ಕಸಿದ​​ ಕೆಸಿಆರ್​ appeared first on News First Kannada.

Source: newsfirstlive.com

Source link