ಹಾವೇರಿ: ಕೊರೊನಾ ಸಂಕಷ್ಟಕ್ಕೆ ಒಳಗಾಗಿರುವ ರೈತರ ಮತ್ತು ಕೂಲಿ ಕಾರ್ಮಿಕರ ಯೋಗ ಕ್ಷೇಮ ವಿಚಾರಿಸುತ್ತಿರುವ ಡಿ.ಕೆ.ಶಿವಕುಮಾರ್, ಇಂದು ಹಾವೇರಿ ಜಿಲ್ಲೆಯ ರಾಣೇಬೆನ್ನೂರಿಗೆ ಆಗಮಿಸಿದ್ದರು.

ರಾಣೇಬೆನ್ನೂರಿನಲ್ಲಿ ಕೊರೊನಾ ಸಂಕಷ್ಟದ ವಾಸ್ತವದ ಸ್ಥಿತಿಯನ್ನ ತಿಳಿದುಕೊಂಡರು. ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಡಿ.ಕೆ.ಶಿವಕುಮಾರ್​.. ಆಸ್ಪತ್ರೆಗೆ ಭೇಟಿ ನೀಡಿದ್ದೆ, ಅಲ್ಲಿನ ರೋಗಿಗಳ ವಿಚಾರ ನಡೆಸಿದ್ದೇನೆ. ಎಲ್ಲಾ ಕಡೆ ನಮ್ಮ ಕಾರ್ಯಕರ್ತರು ಕೋವಿಡ್ ಸೊಂಕಿತರಿಗೆ ಸಹಾಯ ಮಾಡಲು ಹುರುಪಿನಿಂದ ಕೆಲಸ ಮಾಡುತ್ತಿದ್ದಾರೆ. ರಾಜ್ಯದ ಪ್ರತಿ ಜಿಲ್ಲೆ, ತಾಲೂಕುಗಳಲ್ಲೂ, ಕೆಪಿಸಿಸಿಯಿಂದ ಆ್ಯಂಬುಲೆನ್ಸ್ ನೀಡಲಾಗಿದೆ ಎಂದರು.

ಇದೆ ವೇಳೆ ರೈತರನ್ನೂ ನಾನು ಭೇಟಿಯಾಗಿ ಮಾತುಕತೆ ನಡೆಸಿದೆ. ಆನ್​ಲೈನ್​ನಲ್ಲಿ ವ್ಯಾಕ್ಸಿನ್ ರಿಜಿಸ್ಟರ್ ಮಾಡಲು ರೈತರಿಗೆ, ವ್ಯಾಪಾರಿಗಳಿಗೆ ಏನು ಗೊತ್ತು? ಸರ್ಕಾರ ಕಣ್ಣು ಒರೆಸುವ ಕೆಲಸ ಮಾಡ್ತಿದೆ. ಗೊಬ್ಬರದ ಬೆಲೆ ಜಾಸ್ತಿಯಾಗಿದೆ ಎಂದು ರೈತರು ಅಳಲು ತೊಂಡಿಕೊಂಡ್ರು. ಸರ್ಕಾರಕ್ಕೆ ನನ್ನ ಒತ್ತಾಯ ಒಂದೇ, ರೈತರು ಬೆಳೆದ ಬೆಳೆಯನ್ನ ಸರ್ಕಾರವೇ ತೆಗೆದುಕೊಂಡು ಬೆಂಬಲ ಬೆಲೆ ನೀಡಿಲಿ ಎಂದು ಆಗ್ರಹಿಸಿದರು.

ಈ ಸರ್ಕಾರ ಅಗತ್ಯ ವಸ್ತುಗಳ ಖರೀದಿಸಲು ಎರಡು ಗಂಟೆ ಮಾತ್ರ, ಅವಕಾಶ ನೀಡಿದೆ. ಇದರಿಂದ ಅವರಿಗೆ ಮಾರಲು ಅವಕಾಶ ಸಿಗದೇ ತರಕಾರಿಗಳನ್ನ ಬೀದಿಗೆ ಹಾಕುತ್ತಿದ್ದಾರೆ. ಕೋವಿಡ್ ಸಮಯದಲ್ಲಿ ರೈತರನ್ನ ಬದುಕಿಸುವ ಕೆಲಸ ಮಾಡಬೇಕಿತ್ತು. ಆದ್ರೆ ಅದನ್ನ ಸರ್ಕಾರ ಮಾಡಿಲ್ಲ. ವ್ಯಾಕ್ಸಿನ್ ಹಾಕಿಸಲು ನಮ್ಮ ಕಾರ್ಯಕರ್ತರು ಆನ್​ಲೈನ್​​ ರಿಜಿಸ್ಟರ್ ಮಾಡಿ ಎಂದು ಹೇಳಿದ್ದೀನಿ ಎಂದರು.

ಇನ್ನೂ, ಬಾರ್ ಅಂಗಡಿಗಳಿಗೆ 6 ರಿಂದ 10 ಗಂಟೆಗೆ ಅವಕಾಶ ನೀಡಿದ್ದಾರೆ. ಆದ್ರೆ ರೈತ ಬೆಳೆದ ಬೆಳೆಗಳನ್ನ ಮಾರಲು ಹೆಚ್ಚು ಅವಕಾಶ ನೀಡುತ್ತಿಲ್ಲ. ಆಕ್ಸಿಜನ್ ಇಲ್ಲದೇ ಸಾವಿರಾರು ಜನ ಸತ್ತಿದ್ದಾರೆ. ಇದರ ಬಗ್ಗೆ ಸರ್ಕಾರ ಗಮನಹರಿಸಬೇಕಿದೆ ಎಂದು ಆಗ್ರಹಿಸಿದರು.

The post ರೈತರಿಗೆ ಆನ್​ಲೈನ್​​ನಲ್ಲಿ ವ್ಯಾಕ್ಸಿನ್ ರಿಜಿಸ್ಟರ್ ಮಾಡಲು ಬರುತ್ತಾ? appeared first on News First Kannada.

Source: newsfirstlive.com

Source link