ರೈತರಿಗೆ ಮೋಸ ಮಾಡಿದ್ದ ಆರೋಪಿಗಳಿಂದ ಹಣ ವಸೂಲಿ; ಪೊಲೀಸರ ಕಾರ್ಯಕ್ಕೆ ಮೆಚ್ಚಿ 1 ಲಕ್ಷ ರೂ. ಬಹುಮಾನ | 1 lakh prize announced for police team who arrest accused in the case of cheating to farmers in davangere


ರೈತರಿಗೆ ಮೋಸ ಮಾಡಿದ್ದ ಆರೋಪಿಗಳಿಂದ ಹಣ ವಸೂಲಿ; ಪೊಲೀಸರ ಕಾರ್ಯಕ್ಕೆ ಮೆಚ್ಚಿ 1 ಲಕ್ಷ ರೂ. ಬಹುಮಾನ

1 ಲಕ್ಷ ರೂ. ಬಹುಮಾನ

ದಾವಣಗೆರೆ: ರೈತರಿಗೆ ಮೋಸ ಮಾಡಿದ್ದ ಆರೋಪಿಗಳಿಂದ ಹಣ ವಸೂಲಿ ಮಾಡಿದ ಹಿನ್ನೆಲೆ, ದಾವಣಗೆರೆ ಡಿಸಿಆರ್‌ಬಿ ಪೊಲೀಸ್ (Karnataka police) ತಂಡಕ್ಕೆ 1 ಲಕ್ಷ ರೂಪಾಯಿ ಬಹುಮಾನ ನೀಡಿ ಗೌರವಿಸಲಾಗಿದೆ. ಐಜಿಪಿ ಎಸ್.ರವಿ, ಎಸ್‌ಪಿ ಸಿ.ಬಿ.ರಿಷ್ಯಂತ್‌ ಬಹುಮಾನ ನೀಡಿದ್ದಾರೆ. ಜಿಎಂಸಿ ಪರ್ಟಿಲೈಜರ್ಸ್ ಮಾಲೀಕರು ಮೆಕ್ಕೆಜೋಳ ಖರೀದಿಸಿ ಹಣ ನೀಡದೆ ವಂಚಿಸಿದ್ದರು. ಅಲ್ಲದೇ ಜಗಳೂರು ಸೇರಿದಂತೆ ವಿವಿಧೆಡೆ ವಂಚನೆ ಮಾಡಿದ್ದರು. ಈ ಆರೋಪಿಗಳಿಂದ ಎರಡು ಕೋಟಿ ರೂಪಾಯಿಗೂ ಅಧಿಕ ಮೊತ್ತ ವಶಪಡಿಸಿಕೊಂಡ ಡಿವೈಎಸ್​ಪಿ ಬಸವರಾಜ್ ನೇತೃತ್ವದ ದಾವಣಗೆರೆ ಡಿಸಿಆರ್​ಬಿ ತಂಡ, ಈ ಹಣವನ್ನು ರೈತರಿಗೆ ವಿತರಿಸಲು ಶ್ರಮಿಸಿದ್ದರು. ಹೀಗಾಗಿ ಬಹುಮಾನ ನೀಡಿ ಗೌರವಿಸಲಾಗಿದೆ.

ಇನ್ನೇನು ನಾನು ಬೇವರು ಸುರಿಸಿ ದುಡಿದ ಹಣವೆಲ್ಲಾ ವಂಚಕರ ಪಾಲಾಯಿತು ಅಂದು ಕೊಂಡಿದ್ದರು ಅನ್ನದಾತರು ಆದರೆ ಅದು ಪರಿಶ್ರಮದ ದುಡ್ಡು ಎಲ್ಲೂ ಹೋಗಲ್ಲ ವಾಪಸ್ಸಾಗುತ್ತದೆ ಎಂಬ ನಂಬಿಕೆ ಮಾತ್ರ ಮನಸ್ಸಿನಲ್ಲಿ ದೃಢವಾಗಿತ್ತು. ಅಂದು ಕೊಂಡಂತೆ ಆಗಿದೆ. ಅನ್ನದಾತರ ಹೊಟ್ಟೆ ಮೇಲೆ ಹೊಡೆದು ನಾಪತ್ತೆ ಆಗಿದ್ದ ವಂಚಕರು ಸದ್ಯ ಬಂಧನಕ್ಕೆ ಒಳಗಾಗಿದ್ದಾರೆ. ಸದ್ಯಕ್ಕೆ ಇವರ ಬಳಿ ಸಿಕ್ಕಿದ್ದು ಬರೋಬರಿ ಎರಡು ಕೋಟಿ 68 ಲಕ್ಷ ರೂಪಾಯಿ ನಗದು. ಪೊಲೀಸರು ಮನಸ್ಸು ಮಾಡಿದರೆ ಬೇಕಾದನ್ನು ಮಾಡಬಹುದು ಎಂಬುದಕ್ಕೆ ಈ ಪ್ರಕರಣವೇ ಸಾಕ್ಷಿ.

ಮೆಕ್ಕೆಜೋಳಲ ಮಾರಾಟ ಮಾಡಿ ಹಣಕ್ಕಾಗಿ ಪರದಾಡುತ್ತಿದ್ದ ರೈತರ ಸಂಕಷ್ಟಕ್ಕೆ ಸ್ಪಂದಿಸಿದ್ದು, ದಾವಣಗೆರೆ ಡಿಸಿಆರ್​ಬಿ ಡಿವೈಎಸ್​ಪಿ ಬಿ.ಎಸ್ ಬಸವರಾಜ್ ನೇತ್ರತ್ವದ ತಂಡ. ಇಂತಹ ತಂಡದ ಸಾಧನೆಗೆ ಪೂರ್ವ ವಲಯ ಐಜಿಪಿ ಎಸ್. ರವಿ ಒಂದು ಲಕ್ಷ ರೂಪಾಯಿ ನಗದು ಬಹುಮಾನ ನೀಡಿದ್ದಾರೆ. ಇದರಲ್ಲಿ ಬ್ಯಾಂಕ್ ಉದ್ಯೋಗಿ ಸೇರಿ ಆ ಆರು ಜನ ವಂಚಕರ ಬಂಧನ ಜೊತೆಗೆ ರೈತರಿಗೆ ಬರಬೇಕಾದ ಹಣ ವಸೂಲಿ ಮಾಡಿದ್ದು ವಿಶೇಷ.

ಶಿವಲಿಂಗಯ್ಯ, ಚೇತನ್ , ವಾಗೀಶ್ ಚಂದ್ರು , ಮಹೇಶ್ವರಯ್ಯ ಹಾಗೂ ಕೆನರಾ ಬ್ಯಾಂಕ್ ಉದ್ಯೋಗಿ ಶಿವಕುಮಾರ ರೈತರಿಗೆ ವಂಚನೆ ಮಾಡಿದ ಆರೋಪಿಗಳು. ಇದರಲ್ಲಿ ಚಂದ್ರ ಮತ್ತು ಶಿವಕುಮಾರರ ಬಿಟ್ಟರೇ ಉಳಿದಲ್ಲವರು ಸಂಬಂಧಿಕರೇ. ಮೆಕ್ಕೆಜೋಳ ಹಂಗಾಮು ಬಂದರೆ ಸಾಕು ರೈತರ ಜಮೀನಿಗೆ ಸಾವಿರಾರು ಕ್ವಿಂಟಾಲ್ ಮೆಕ್ಕೆಜೋಳ ಖರೀದಿಸುವುದು. ಆ ಮೆಕ್ಕೆಜೋಳ ತಮಿಳುನಾಡಿಗೆ ಕಳುಹಿಸುವುದು. ಇದಕ್ಕೂ ಮೊದರಲು ರೈತರಿಗೆ ಹಣ ಕೊಟ್ಟು, ನಂತರ ಹಣವೆ ಬಂದಿಲ್ಲ ಎನ್ನುವುದು. ಹೀಗೆ ಸಾವಿರಾರು ರೈತರಿಗೆ ವಂಚನೆ ಮಾಡುವುದು ಇವರ ಕೆಲಸ. ಇದಕ್ಕಾಗಿಯೇ ಇವರೊಂದು ಜಿಎಂಸಿ ಎಂದು ಕಂಪನಿ ಮಾಡಿಕೊಂಡಿದ್ದಾರೆ.  ಸದ್ಯದ ಮಾಹಿತಿ ಪ್ರಕಾರ 96 ಜನ ರೈತರ ಹಾಗೂ 29 ಜನ ವರ್ತಕರಿಂದ ಅಂದರೆ 125 ಜನರಿಂದ ಮೆಕ್ಕೆಜೋಳ ಖರೀದಿಸಿ ಕಳೆದ ಒಂದುವರೆ ವರ್ಷದಿಂದ ಹಣ ನೀಡದೇ ವಂಚಿಸಿ ತಲೆ ಮರೆಸಿಕೊಂಡಿದ್ದರು. ಇಂತವರನ್ನ ದಾವಣಗೆರೆ ಪೊಲೀಸರು ಬಂಧಿಸಿದ್ದಾರೆ. ಅವರಿಂದ ಬರೋಬರಿ 2,68,470 ರೂಪಾಯಿ ನಗದು ವಶ ಪಡಿಸಿಕೊಂಡಿದ್ದಾರೆ.

ಕಳೆದುಕೊಂಡ ಹಣಕ್ಕಾಗಿ ರೈತರು ಹತ್ತಾರು ಸಲ ಹೋರಾಟ ಮಾಡಿದ್ದರು. ಪ್ರಮುಖ ಆರೋಪಿ ಶಿವಲಿಂಗಯ್ಯ ಅವರ ಮನೆಯ ಮುಂದೆ ಧರಣಿ ಸತ್ಯಾಗ್ರಹ ನಡೆಸಿದ್ದರು. ಕೆಲ ಸಲ ಹಲ್ಲೆಗೂ ರೈತರು ಮುಂದಾಗಿದ್ದರು. ಇದರಲ್ಲಿ ದಾವಣಗೆರೆ ಹಾಗೂ ಪಕ್ಕದ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ರೈತರೇ ಹೆಚ್ಚಾಗಿದ್ದರು. ಸದ್ಯ ಪೊಲೀಸರು ಬಿಸಿದ ಜಾಲಕ್ಕೆ ಕಿಲಾಡಿ ವಂಚಕರ ಗುಂಪು ಸಿಕ್ಕಿ ಬಿದ್ದಿದೆ. ಮೇಲಾಗಿ ದುಡ್ಡು ಸಹ ತಂದು ಒಪ್ಪಿಸಿದ್ದಾರೆ. ಇದರಿಂದ ರೈತರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

ವರದಿ: ಬಸವರಾಜ್ ದೊಡ್ಮನಿ 

ಇದನ್ನೂ ಓದಿ:

ಪುನೀತ್​ಗೆ ಪದ್ಮಶ್ರೀ, ಡಾ. ರಾಜ್​ಕುಮಾರ್‌ಗೆ​ ಭಾರತ ರತ್ನ ಗೌರವ ನೀಡಬೇಕು: ಎಂಪಿ ರೇಣುಕಾಚಾರ್ಯ ಹೇಳಿಕೆ

Samantha: ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದ ವೃಕ್ಷಮಾತೆ ತುಳಸಿ ಗೌಡ ಅವರ ಜೀವನ ಕತೆ ತಿಳಿದು ಸಮಂತಾ ಹೇಳಿದ್ದೇನು?

TV9 Kannada


Leave a Reply

Your email address will not be published.