ರೈತರೊಂದಿಗೆ ಗದ್ದೆಗೆ ಇಳಿದು ಭತ್ತದ ಪೈರು ನಾಟಿ ಮಾಡಿದ ಮಾಲೂರು ಶಾಸಕ ನಂಜೇಗೌಡ | Malur MLA Nanjegowda planted paddy the field with the farmers in kolar

ಬರಗೆಟ್ಟ ಕೋಲಾರ ಜಿಲ್ಲೆಯಲ್ಲಿ ಇತ್ತೀಚಿನ ಮುಂಗಾರು ಹಂಗಾಮಿನಲ್ಲಿ ಭರ್ಜರಿ ಮಳೆಯಾಗುತ್ತಿದೆ. ಪಾತಾಳಕ್ಕೆ ಕುಸಿದಿದ್ದ ಅಂತರ್ಜಲ ಮಟ್ಟ ಮೇಲೆ ಮೇಲಕ್ಕೆ ಉಕ್ಕಿಬರುತ್ತಿದೆ. ಇದರಿಂದ ನೀರಿಲ್ಲದೆ ಕಡುಕಷ್ಟ ಅನುಭವಿಸುವ ರೈತಾಪಿ ಜನ ಸಂತಸಗೊಂಡಿದ್ದಾರೆ. ಕೃಷಿಯನ್ನೇ ನೆಚ್ಚಿಕೊಂಡ ಜನ ಗದ್ದೆ-ತೋಟ-ಹೊಲಗಳಲ್ಲಿ ದುಡಿಯಲು ಮುಂದಾಗಿದ್ದಾರೆ. ಅದಕ್ಕೆ ಜನಪ್ರತಿನಿಧಿಗಳೂ ಸಹ ಸಾಥ್​​ ನೀಡಿರುವುದು ಸ್ವಾಗತಾರ್ಹವಾಗಿದೆ. ಅದರ ಒಂದು ಝಲಕ್ ಇಲ್ಲಿದೆ.

Aug 10, 2022 | 9:31 PM

TV9kannada Web Team

| Edited By: Ayesha Banu

Aug 10, 2022 | 9:31 PM
ಮಾಲೂರು ಶಾಸಕ ನಂಜೇಗೌಡ ಸಾಮಾನ್ಯ ರೈತನಂತೆ ರೈತರೊಂದಿಗೆ ಗದ್ದೆಗೆ ಇಳಿದು ಭತ್ತದ ಪೈರು ನಾಟಿ ಮಾಡಿ ತಮ್ಮ ಹಳೆಯ ದಿನಗಳನ್ನು ನೆನಪು ಮಾಡಿಕೊಂಡಿದ್ದಾರೆ.

ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ನೂಟುವೆ ಬಳಿ ಶಾಸಕ ನಂಜೇಗೌಡ ಭತ್ತದ ಪೈರು ನಾಟಿ ಮಾಡಿದ್ರು.

ಬಯಲುಸೀಮೆ ಕೋಲಾರ ಜಿಲ್ಲೆಯಲ್ಲಿ ಕೆಸಿ ವ್ಯಾಲಿ ನೀರಿನಿಂದ ಗದ್ದೆ ಮಾಡ್ತಿರೊ ರೈತರನ್ನ ಕಂಡು ಖುಷಿ ಪಟ್ಟ ಶಾಸಕ, ಕಾಂಗ್ರೆಸ್ ಸರ್ಕಾರ ಬಂದ್ರೆ ಜಿಲ್ಲೆಗೆ ಇನ್ನಷ್ಟು ನೀರಾವರಿ ಯೋಜನೆ ತರುವುದಾಗಿ ಭರವಸೆ ನೀಡಿದ್ರು.

ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಅಂಗವಾಗಿ ಶಾಸಕ ನಂಜೇಗೌಡ ಕಳೆದ ನಾಲ್ಕು ದಿನದಿಂದ ಮನೆಗೆ ಹೋಗದೆ ಪಾದಯಾತ್ರೆ ಮಾಡುತ್ತಿದ್ದಾರೆ. ಹಾಗೂ ಗ್ರಾಮ ವಾಸ್ತವ್ಯ ಮಾಡಿ ಜನರ ಕಷ್ಟ ಸುಖದಲ್ಲಿ ಭಾಗಿಯಾಗುತ್ತಿದ್ದಾರೆ.

ಶಾಸಕ ನಂಜೇಗೌಡರಿಗೆ ತಾಲೂಕಿನ ಕಾಂಗ್ರೆಸ್ ಮುಖಂಡರು ಸಾಥ್ ಕೊಟ್ಟಿದ್ದು ಇಂದು ಪಾದಯಾತ್ರೆ ವೇಳೆ ಶಾಸಕರು ಗದ್ದೆಗೆ ಇಳಿದು ಭತ್ತದ ಪೈರು ನಾಟಿ ಮಾಡಿದ್ದಾರೆ.

Most Read Stories

TV9 Kannada

Leave a Reply

Your email address will not be published. Required fields are marked *