ಕೆಲ ರೈತ ಸಂಘಟನೆಗಳ ಹಠಾನೋ.. ಅಮಾಯಕ ರೈತರ ಬಲಿದಾನವೋ.. ಕೃಷಿ ಕಾಯ್ದೆಯ ಮಹತ್ವ ತಿಳಿಸುವಲ್ಲಿ ವಿಫಲವಾಗುವಂತೆ ಮಾಡಿದ ಕಮ್ಯುನಿಕೇಷನ್ ಗ್ಯಾಪೋ.. ಒಟ್ಟಿನಲ್ಲಿ ರೈತರನ್ನು ಸ್ವತಂತ್ರ ಮಾಡುವಂಥ ಉದ್ದೇಶದಿಂದ ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ಮೂರೂ ಕೃಷಿ ಕಾನೂನುಗಳನ್ನು ವಾಪಸ್ ಪಡೆಯುವುದಾಗಿ ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಘೋಷಿಸಿದ್ದಾರೆ.
ದೇಶದ ರೈತರು ತಮಗೆ ಇಷ್ಟ ಬಂದೆಡೆ.. ಎಲ್ಲಿ ಬೇಕಾದರೂ ತಾವು ಬೆಳೆದ ಬೆಳೆಯನ್ನ ಮಾರಲು ಅವಕಾಶ ಕೊಡುತ್ತಿದ್ದ ಈ ಕಾಯ್ದೆ ಸದ್ಯ ರದ್ದಾಗುತ್ತಿದ್ದು ಮತ್ತೆ ಮಧ್ಯವರ್ತಿಗಳ ಹಾಗೂ ಎಪಿಎಂಸಿಗಳ ಕಪಿಮುಷ್ಠಿಯಲ್ಲಿ ರೈತರು ಸಿಲುಕವಂಥ ಸನ್ನಿವೇಷ ಮುಂದುವರೆಯಲಿದೆ. ಈ ನಡುವೆ ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ಈ ಕಾಯ್ದೆಯನ್ನು ಮರಳಿ ಪಡೆಯುವುದರ ಬಗ್ಗೆ ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಘೋಷಿಸಿದ್ದಾರೆ.
ಈ ವೇಳೆ ಅವರು ಮಾತನಾಡುತ್ತ ಪವಿತ್ರ ಗುರುಗ್ರಂಥ ಸಾಹೀಬ್ನ ಒಂದು ನುಡಿಯನ್ನು ಉಲ್ಲೇಖಿಸುತ್ತಾ.. ದೇವಿ ನನಗೆ ರೈತರಿಗಾಗಿ ಅನುಕೂಲವಾಗವಂತೆ ದುಡಿಯಲು ಮತ್ತಷ್ಟು ಶಕ್ತಿ ನೀಡು ಎಂದು ಬೇಡಿಕೊಂಡರು. ಅಲ್ಲದೇ ಇದೇ ವೇಳೆ ಅವರು ನಾನು ರೈತರ ಅನುಕೂಲಕ್ಕಾಗಿ.. ರೈತರ ಅಭಿವೃದ್ಧಿಗಾಗಿ ಕಾಯಾ-ವಾಚಾ-ಮನಸಾ ಅತ್ಯಂತ ಪವಿತ್ರ ಭಾವನೆಯಿಂದ ರೈತರಿಗಾಗಿಯೇ ಈ ಮೂರೂ ಕಾಯ್ದೆಗಳನ್ನು ಜಾರಿಗೆ ತಂದಿದ್ದೆ. ಆದ್ರೆ ಇಂದು ರೈತರಿಗಾಗಿ ಜಾರಿಗೆ ತಂದಿದ್ದ ಕಾಯ್ದೆಯನ್ನು, ದೇಶಕ್ಕಾಗಿ ಮರಳಿ ಪಡೆಯುತ್ತಿದ್ದೇನೆ.. ನನ್ನನ್ನು ಕ್ಷಮಿಸಿ ಎಂದು ಅತ್ಯಂತ ನೋವಿನಿಂದ ನುಡಿದ್ರು.
ಪ್ರಧಾನಿ ಮೋದಿ ಹೇಳಿದ್ದೇನು?
ಇದಕ್ಕೂ ಮುನ್ನ ಮಾತನಾಡುತ್ತಿದ್ದ ಪ್ರಧಾನಿ ಮೋದಿ, ನನ್ನ 50 ವರ್ಷದ ರಾಜಕೀಯ ಜೀವನದಲ್ಲಿ ರೈತರ ಸಮಸ್ಯೆಯನ್ನ ರೈತರ ನೋವನ್ನ ಅತ್ಯಂತ ಹತ್ತಿರದಿಂದ ಕಂಡಿದ್ದೇನೆ.. ಇದೇ ಕಾರಣದಿಂದಾಗಿ ನಾನು 2014ರಲ್ಲಿ ಪ್ರಧಾನಿಯಾದಾಗಿನಿಂದಲೂ ರೈತರ ಅನುಕೂಲಕ್ಕಾಗಿ ಹಾಗೂ ರೈತರ ವಿಕಾಸಕ್ಕಾಗಿ ಮಹತ್ವ ನೀಡಿದ್ದೇನೆ. ನಿಮಗೆ ತಿಳಿದಿರಲಿಲ್ಲಿ ಇಂದು ದೇಶದಲ್ಲಿ ಶೇ.80ರಷ್ಟು ರೈತರು ಚಿಕ್ಕ ರೈತರಾಗಿದ್ದಾರೆ. ಅವರ ಬಳಿ 2 ಹೆಕ್ಟೇರ್ಗಿಂತ ಕಡಿಮೆ ಜಮೀನು ಇದೆ. ಈ ಜಮೀನು ಕುಟುಂಬದಲ್ಲಿ ಪಾಲು ಆಗುತ್ತಾ ಮತ್ತಷ್ಟು ಚಿಕ್ಕದಾಗುತ್ತಿದೆ. ಇಂಥ ರೈತರ ಸಂಖ್ಯೆಯೇ 10 ಕೋಟಿಗೂ ಅಧಿಕ ಇದೆ. ಇಂಥವರ ಉಳಿವಿಗಾಗಿ ಕ್ರಮ ತೆಗೆದುಕೊಳ್ಳಬೇಕಿತ್ತು. ಇದೇ ಕಾರಣದಿಂದಾಗಿ ನಮ್ಮ ಸರ್ಕಾರ ಗುಣ ಮಟ್ಟದ ಬೀಜ ಪೂರೈಕೆ, ಬೇವು ಲೇಪಿತ ಯೂರಿಯಾ ಮಾರಾಟ ಮುಂತಾದ ಅನುಕೂಲಗಳನ್ನು ಮಾಡುತ್ತಾ ಬಂದಿದೆ. ಜೊತೆಗೆ ಸಾಯಿಲ್ ಹೆಲ್ತ್ ಕಾರ್ಡನ್ನು ಸುಮಾರು 22 ಕೋಟಿ ಸಂಖ್ಯೆಯಲ್ಲಿ ನೀಡಲಾಗಿದೆ. ಮೈಕ್ರೋ ಇರಿಗೇಷನ್ ಯೋಜನೆ ಜಾರಿಗೆ ತರಲಾಗಿದೆ. ಇದರ ಕಾರಣದಿಂದಾಗಿ ಇಂದು ಕೃಷಿ ಉತ್ಪನ್ನ ಗಣನೀಯವಾಗಿ ಏರಿಕೆಯಾಗಿದೆ. ಲಕ್ಷಾಂತರ ರೈತರಿಗೆ ನೇರವಾಗಿ ಅವರ ಅಕೌಂಟ್ಗೇ ಹಣ ಜಮಾ ಮಾಡಲಾಗ್ತಿದೆ. ಇದರೊಂದಿಗೇ ರೈತರಿಗೆ ಮತ್ತಷ್ಟು ಅನುಕೂಲವಾಗಲಿ ಅನ್ನೋ ಉದ್ದೇಶದಿಂದ ಅತ್ಯಂತ ಪವಿತ್ರ ಭಾವನೆಯಿಂದ ಕೃಷಿ ಕಾನೂನುಗಳನ್ನು ಜಾರಿಗೆ ತರಲಾಗಿತ್ತು. ಇದರ ಮಹತ್ವವನ್ನು ತಿಳಿಸಲು ನಾವೂ ಸಾಕಷ್ಟು ಪ್ರಯತ್ನ ಪಟ್ಟೆವು. ಹಲವು ಯೂನಿವರ್ಸಿಟಿಗಳು, ತಜ್ಞರು ಕೂಡ ರೈತರಿಗೆ ಮನವರಿಕೆ ಮಾಡಲು ಯತ್ನಿಸಿದರು. ಇಷ್ಟಾದರೂ ಕೆಲ ವರ್ಗದ ರೈತರಿಗೆ ಮನವರಿಕೆ ಮಾಡುವಲ್ಲಿ ನಾವು ಸೋತೆವು. ಹೀಗಾಗಿ ಇಂದು ಅನಿವಾರ್ಯವಾಗಿ ನಾವು ಈ ಮೂರೂ ಕಾಯ್ದೆಗಳನ್ನು ಹಿಂಪಡೆಯಲು ನಿರ್ಧರಿಸಿದ್ದೇವೆ. ಇನ್ನಾದ್ರೂ ಪ್ರತಿಭಟನಾ ನಿರತ ರೈತಲು ನಿಮ್ಮ ನಿಮ್ಮ ಮನೆಗೆ ಹೋಗಿ.. ನಿಮ್ಮ ನಿಮ್ಮ ಕೃಷಿ ಭೂಮಿಗೆ ಮರಳಿ.. ರೈತರ ಅಭಿವೃದ್ಧಿಗಾಗಿ ಕಾಯಾ-ವಾಚಾ-ಮನಸಾ ಅತ್ಯಂತ ಪವಿತ್ರ ಭಾವನೆಯಿಂದ ರೈತರಿಗಾಗಿಯೇ ಈ ಮೂರೂ ಕಾಯ್ದೆಗಳನ್ನು ಜಾರಿಗೆ ತಂದಿದ್ದೆ. ಆದ್ರೆ ಇಂದು ರೈತರಿಗಾಗಿ ಜಾರಿಗೆ ತಂದಿದ್ದ ಕಾಯ್ದೆಯನ್ನು, ದೇಶಕ್ಕಾಗಿ ಮರಳಿ ಪಡೆಯುತ್ತಿದ್ದೇನೆ.. ನನ್ನನ್ನು ಕ್ಷಮಿಸಿ ಎಂದು ಮೋದಿ ಘೋಷಿಸಿದ್ರು.
Addressing the nation. https://t.co/daWYidw609
— Narendra Modi (@narendramodi) November 19, 2021