ಹಾಸನ: ಕೊವಿಡ್ ನಿರ್ವಹಣೆಯಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಆರೋಪಿಸಿದ್ದಾರೆ. 

ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಡಿಕೆಎಸ್​.. ಹಾಸನದ ರೈತರು ಫೋನ್ ಮಾಡಿದ್ದರು. ನಾಲ್ಕು ದಿನ ವ್ಯಾಪಾರ ಮಾಡಲು‌ ಬಿಡ್ತಿಲ್ಲ. ಬರೀ ಮೂರು ದಿನ ಮಾತ್ರ ಅವಕಾಶ ಕೊಟ್ಟಿದ್ದಾರೆ. ಹೂವು, ತರಕಾರಿ, ಹಣ್ಣು ಬೆಳೆಗಳಿಗೆ ಸರಿಯಾದ ಬೆಲೆ ಸಿಗುತ್ತಿಲ್ಲ. ಸಾಗಣೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ರೈತರು ಫೋನ್ ಮಾಡಿ ನನಗೆ ತಿಳಿಸಿದರು.

ನೀವು ಬೆಂಬಲ ಬೆಲೆ ಕೊಡೋದು ಬೇಡ. ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿ ಇದ್ದರೆ, ಸಹಾಯ ಮಾಡುವ ಮನಸ್ಸಿದ್ದರೆ ರೈತರು ಬೆಳೆದ ಪದಾರ್ಥಗಳನ್ನು ನೀವೇ ಖರೀದಿ ಮಾಡಿ. ನೀವೇ ಅವುಗಳನ್ನು ಎಷ್ಟಕ್ಕಾದರೂ ಮಾರಾಟ ಮಾಡಿ. ಬೆಳೆದ ತರಕಾರಿಗಳಿಗೆ ಬೆಲೆ ಸಿಗದೆ ಹೊಲದಲ್ಲೇ ಗೊಬ್ಬರ ಮಾಡುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರ ಸಹಾಯ ಮಾಡಬೇಕು. ಕಷ್ಟಕ್ಕೆ ಹಣ ಕೊಡದಿದ್ದರೆ ನಿಮ್ಮ‌ ದುಡ್ಡಿಗೆ ಬೆಲೆ ಇಲ್ಲ. ಅಲ್ಲದೇ ರೈತರ ರಕ್ಷಣೆಗೆ, ಅಸಂಘಟಿತ ಕಾರ್ಮಿಕರು ರಕ್ಷಣೆಗೆ ಬರಬೇಕು ಎಂದು ಆಗ್ರಹಿಸಿದರು.

The post ರೈತರ ಕಷ್ಟಕ್ಕೆ ನೆರವಾಗದಿದ್ರೆ ನಿಮ್ಮ‌ ದುಡ್ಡಿಗೆ ಬೆಲೆ ಇಲ್ಲ -ಸರ್ಕಾರದ ವಿರುದ್ಧ ಡಿಕೆಎಸ್​ ಆಕ್ರೋಶ appeared first on News First Kannada.

Source: newsfirstlive.com

Source link