ರೈತರ ನೆರವಿಗೆ ಬಂದ ಸಿಎಂ ಬೊಮ್ಮಾಯಿ ಕೊಟ್ಟ ಭರವಸೆಯೇನು?

ಅಕಾಲಿಕ ಮಳೆಯಿಂದ ರಾಜ್ಯದ ರೈತ ವರ್ಗ ಕಂಗಾಲಾಗಿ ಹೋಗಿದೆ. ಕಟಾವಿಗೆ ಬಂದಿದ್ದ ಬೆಳೆ ನೀರು ಪಾಲಾಗಿ ಆಕಾಶ ನೋಡುವಂತಾಗಿದೆ. ಮಳೆಯಬ್ಬರಕ್ಕೆ ಸಂಕಷ್ಟಕ್ಕೀಡಾಗಿದ್ದ ಅನ್ನದಾತರ ನೆರವಿಗೆ ಸರ್ಕಾರ ಧಾವಿಸುವ ಭರವಸೆ ನೀಡಿದೆ.
ಮಳೆಗಾಲ ಮುಗಿದ್ರೂ ಮಳೆಯಬ್ಬರ ನಿಲ್ಲುತ್ತಿಲ್ಲ… ಚಳಿಗಾಲ ಆರಂಭವಾದ್ರೂ ವರುಣ ಮಾತ್ರ ಆರ್ಭಟಿಸ್ತಲೇ ಇದ್ದಾನೆ… ಅನ್ನದಾತರು ವರ್ಷಪೂರ್ತಿ ಕಷ್ಟಪಟ್ಟು ಬೆಳೆದಿದ್ದ ಫಸಲು ಇನ್ನೇನು ಕೈಗೆ ಬರ್ಬೇಕು ಅನ್ನುವಷ್ಟರಲ್ಲಿ ಮಳೆಗೆ ಸಿಲುಕಿ ಬರ್ಬಾದ್ ಆಗಿ ಹೋಗಿದೆ. ಎಡೆಬಿಡದೆ ಸುರೀತಿರೋ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಸಂಕಷ್ಟದಲ್ಲಿರೋ ಜನ್ರಿಗೆ ಸಾಂತ್ವನ ಹೇಳಲು ಸಿಎಂ ಫೀಲ್ಡಿಗಿಳಿದಿದ್ದಾರೆ.

ನಿರಂತರ ಸುರೀತಿರೋ ಮಳೆಯಿಉಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರಿ ಪ್ರಮಾಣದ ಬೆಳೆ ಹಾನಿಯಾಗಿದೆ. ಇನ್ನೇನು ಕಟಾವಿಗೆ ಬಂದಿದ್ದ ಭತ್ತ, ರಾಗಿ, ಈರುಳ್ಳಿ, ಜೋಳ, ಕಾಫಿ, ಶೇಂಗಾ ಸೇರಿದಂತೆ ಹಲವು ಪ್ರಮುಖ ಬೆಳೆಗಳು ಮಳೆಗೆ ಆಹುತಿಯಾಗಿವೆ. ಅಲ್ಪಸ್ವಲ್ಪ ಲಾಭದ ನಿರೀಕ್ಷೆಯಲ್ಲಿದ್ದ ಅನ್ನದಾತನಿಗೆ ಮಳೆರಾಯ ಬರೆ ಎಳೆದಿದ್ದಾನೆ. ಹೀಗಾಗಿ ಮಳೆಯಿಂದ ಬೆಳೆಹಾನಿಯಾಗಿರೋ ಪ್ರದೇಶಕ್ಕೆ ಸಿಎಂ ಬೊಮ್ಮಾಯಿ ಭೇಟಿ ಕೊಟ್ರು. ಕೋಲಾರದ ಹಲವು ಪ್ರದೇಶಗಳಲ್ಲಿ ಮಳೆಯಿಂದ ಹಾನಿಯಾಗಿದ್ದು, ಸಿಎಂ ಬೊಮ್ಮಾಯಿ ಪರಿಶೀಲನೆ ನಡೆಸಿದ್ರು. ಮಳೆಯಿಂದ ಹಾಳಾಗಿರೋ ರಾಗಿ, ನೆಲಗಡಲೆ, ತೊಗರಿ ಬೆಳೆಗಳನ್ನ ಸಿಎಂ ಬೊಮ್ಮಾಯಿ ವೀಕ್ಷಿಸಿದ್ರು.

ಬೆಳೆಹಾನಿ ವೀಕ್ಷಣೆಗೆ ತೆರಳೋ ಮುನ್ನ ಮಾತನಾಡಿದ ಸಿಎಂ ಬೊಮ್ಮಾಯಿ, ಬೆಳೆಹಾನಿ ಪ್ರದೇಶ ವೀಕ್ಷಣೆಗೆ ಆಯಾ ಇಲಾಖೆ ಮಂತ್ರಿಗಳಿಗೆ ಮಾತ್ರ ಚುನಾವಣಾ ಆಯೋಗ ಮಾಹಿತಿ ನೀಡಿದೆ. ಮುಖ್ಯಮಂತ್ರಿ ಭೇಟಿಗೆ ಯಾವುದೇ ನಿರ್ಬಂಧವಿಲ್ಲ ಅಂದ್ರು. ಇನ್ನು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ, ಮುಖ್ಯಮಂತ್ರಿಗಳು ಕಾಟಾಚಾರಕ್ಕೆ ಸರ್ವೆ ಮಾಡ್ತಿದ್ದಾರೆ. ನೆರೆ ಪರಿಹಾರ ನೀಡಲು ಸರ್ಕಾರ ಬೂಟಾಟಿಕೆ ಮಾಡ್ತಿದೆ ಅಂದ್ರು. ಅಲ್ಲದೆ ನೀತಿ ಸಂಹಿತೆ ನೆಪ ಬಿಟ್ಟು ನೆರೆ ಸಂತ್ರಸ್ತರಿಗೆ ನೆರವಾಗಿ ಅಂತಾ ತಾಕೀತು ಮಾಡಿದ್ರು.

ಮತ್ತೊಂದೆಡೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಮಾಜಿ ಸಿಎಂ ಸಿದ್ದರಾಮಯ್ಯ, ಮೊದಲು ನಷ್ಟಕ್ಕೊಳಗಾದ ರೈತರಿಗೆ ಪರಿಹಾರ ಘೋಷಣೆ ಮಾಡಿ, ಆಮೇಲೆ ನೀತಿ ಸಂಹಿತೆ ನೆಪ ಹೇಳಿ ಅಂತಾ ಚಾಟಿ ಬೀಸಿದ್ರು. ಅಲ್ಲದೆ ಜನಸ್ವರಾಜ್ ಯಾತ್ರೆ ಹೆಸ್ರಲ್ಲಿ ಶಂಖ ಊದೋದು ಬಿಟ್ಟು ಸಂತ್ರಸ್ತರಿಗೆ ನೆರವಾಗಿ ಅಂದ್ರು.

ಇದನ್ನೂ ಓದಿ: ಮಳೆ ನಿಂತರೂ ತಪ್ಪದ ಸಂಕಷ್ಟ; ತುಂಬಿ ಹರಿಯುತ್ತಿವೆ ಹಳ್ಳ-ಕೊಳ್ಳಗಳು; ಜೀವಭಯದಲ್ಲಿ ಜನ

ಇನ್ನು ಇಷ್ಟು ದಿನ ಬೆಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಲು ಸಚಿವ ಹಾಲಪ್ಪ ಆಚಾರ್ ಹಿಂದೇಟು ಹಾಕಿದ್ದರು. ನೀತಿ ಸಂಹಿತೆ ನೆಪ ಹೇಳಿಕೊಂಡು ಜನ್ರ ಸಂಕಷ್ಟ ಆಲಿಸೋದಕ್ಕೂ ಹಿಂದೆ ಮುಂದೆ ನೋಡ್ತಿದ್ದರು. ಆದ್ರೆ ಸಚಿವರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗ್ತಿದ್ದಂತೆ 3 ದಿನಗಳ ಬಳಿಕ ಬೆಳೆಹಾನಿ ಪ್ರದೇಶಕ್ಕೆ ಸಚಿವ ಹಾಲಪ್ಪ ಭೇಟಿ ನೀಡಿದ್ದಾರೆ. ಗಂಗಾವತಿ, ಕಾರಟಗಿ ಭಾಗಕ್ಕೆ ಭೇಟಿ ನೀಡಿ ಸಮೀಕ್ಷೆ ನಡೆಸಿದ ಸಚಿವ ಹಾಲಪ್ಪ, ರೈತರ ಸಮಸ್ಯೆ ಆಲಿಸಿ ಪರಿಹಾರದ ಭರವಸೆ ನೀಡಿದ್ರು.

ಒಟ್ನಲ್ಲಿ ಮಳೆಹಾನಿಯಾಗಿರೋ ಪ್ರದೇಶಗಳಲ್ಲಿ ಸಮೀಕ್ಷೆ ನಡೆಸಿ ಪರಿಹಾರ ಕೊಡಲು ಸರ್ಕಾರ ಮೀನಮೇಷ ಎಣಿಸ್ತಿತ್ತು. ಇದೀಗ ಮೈಕೊಡವಿ ಎದ್ದಿರೋ ಸಿಎಂ ಹಾಗೂ ಸಚಿವರು ಬೆಳೆಹಾನಿಯಾಗಿರೋ ಪ್ರದೇಶಗಳಿಗೆ ಭೇಟಿ ಮಾಡ್ತಿದ್ದಾರೆ. ವಿಪಕ್ಷಗಳು ಸರ್ಕಾರಕ್ಕೆ ಬಿಸಿ ಮುಟ್ಟಿಸ್ತಿದ್ದಂತೆ ಪರಿಹಾರ ಕೊಡೋ ಭರವಸೆ ನೀಡ್ತಿದ್ದಾರೆ.

News First Live Kannada

Leave a comment

Your email address will not be published. Required fields are marked *