ರೈತರ ಬದುಕಿಗೆ ಕೊಳ್ಳಿಯಿಟ್ಟ ಮಳೆರಾಯ; ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ | Crop is ravaged by constant rain Karnataka Farmers upset


ರೈತರ ಬದುಕಿಗೆ ಕೊಳ್ಳಿಯಿಟ್ಟ ಮಳೆರಾಯ; ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ

ಎಲೆಕೋಸು ಬೆಳೆ

ತುಮಕೂರು: ಜಿಲ್ಲೆಯಲ್ಲಿ ಸುರಿದ ನಿರಂತರ ಮಳೆಯಿಂದ ರೈತರು ಕಂಗಾಲಾಗಿದ್ದಾರೆ. ಎಲೆಕೋಸು ಸೇರಿದಂತೆ ಬೇರೆ ಬೇರೆ ಬೆಳೆಗಳು ನೀರು ಪಾಲಾಗಿದ್ದು, ಮುಂದಿನ ಜೀವನ ಹೇಗೆ ಅಂತ ಚಿಂತಿಸುತ್ತಿದ್ದಾರೆ. ತುಮಕೂರು ಹೊರವಲಯದ ಹನುಮಂತಪುರ ಬಳಿ ರೈತ ಕುಮಾರ್ ಎಂಬುವವರು ಎಲೆಕೋಸು ಬೆಳೆದಿದ್ದರು. ಆದರೆ ಅಪಾರ ಮಳೆಗೆ ಬೆಳೆ ಮಣ್ಣು ಪಾಲಾಗಿದೆ. ಸುಮಾರು ಎರಡು ಎಕರೆಯಲ್ಲಿ ಬೆಳೆದಿದ್ದ ಎಲೆಕೋಸು ಮಳೆಗೆ ಸಂಪೂರ್ಣ ಹಾನಿಯಾಗಿದೆ. ಒಂದು ಲಕ್ಷ ಅಧಿಕ ಹಣ ಖರ್ಚು ಮಾಡಿ ಬೆಳೆದ ಎಲೆಕೋಸು ಮಳೆಗೆ ಹಾನಿಯಾಗಿದ್ದರಿಂದ ರೈತನಿಗೆ ದಿಕ್ಕೇ ತೋಚದಂತಾಗಿದೆ.

ಮಳೆ ಬರುವ ಮುನ್ನ ಎಲೆಕೋಸಿನ ಬೆಲೆ ಒಂದು ಕೆಜಿಗೆ 4-5 ರೂ ಇತ್ತು. ಸದ್ಯ ಮಾರ್ಕೆಟ್ ದರ 20-22 ರೂ, ಆಗಿದೆ. 6-8 ಲಕ್ಷ ಆದಾಯ ಪಡೆಯುತ್ತಿದ್ದ ರೈತ ಕಂಗಾಲಾಗಿದ್ದಾರೆ.

ಇನ್ನು ಯಾದಗಿರಿ ಜಿಲ್ಲೆಯಾದ್ಯಂತ ನಿನ್ನೆ ಅಬ್ಬರಿಸಿದ ಮಳೆರಾಯ ರೈತರ ಬದುಕನ್ನೇ ಕಸಿದುಕೊಂಡಿದೆ. ಮಳೆ ಅಬ್ಬರಕ್ಕೆ ಅನ್ನದಾತ ಕಂಗಲಾಗಿದ್ದಾನೆ. ಕೈಗೆ ಬಂದ ಬೆಳೆ ಸಂಪೂರ್ಣ ನೆಲಕುರುಳಿದೆ. ಕಟಾವಿಗೆ ಬಂದಿದ್ದ ನೂರಾರು ಎಕರೆ ಭತ್ತದ ಬೆಳೆ ನಾಶವಾಗಿದೆ. ಸಾವಿರಾರು ರೂ. ಖರ್ಚು ಮಾಡಿ ಭತ್ತ ಬೆಳೆದಿದ್ದರು. ಆದರೆ ಬೆಳೆ ರೈತನ ಕೈ ಸೇರುವ ಮೊದಲೇ ನಾಶವಾಗಿದೆ. ಮಳೆ ನೀರು ಭತ್ತ ಪೈರಿನಲ್ಲಿ ನಿಂತಿದ್ದು, ಕೊಳೆತು ಹೋಗುವ ಆತಂಕ ಶರುವಾಗಿದೆ.

ಇನ್ನೊಂದು ಕಡೆ ಜೋಳ ಹಾಗೂ ಹತ್ತಿ ಜಮೀನುಗಳಿಗೂ ಮಳೆ ನೀರು ನುಗ್ಗಿದೆ. ಜೋಳದ ಜಮೀನುಗಳು ಸದ್ಯ ಕೆರೆಯಂತಾಗಿದೆ. ಮಳೆ ಅಭರಕ್ಕೆ ಹತ್ತಿ ಬೆಳೆ ಹಾಳಾಗಿದೆ. ಹೀಗಾಗಿ ಪರಿಹಾರ ನೀಡುವಂತೆ ಆಗ್ರಹಿಸುತ್ತಿದ್ದಾರೆ.

ಇದನ್ನೂ ಓದಿ

ಹಳ್ಳಿಗುಡಿ ಟೋಲ್‌ ನಾಕಾ ಬಳಿ ಏಕಾಏಕಿ ಹೊತ್ತಿ ಉರಿದ ಸಿಮೆಂಟ್ ಲಾರಿ

ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಬರುವ ಪ್ರಯಾಣಿಕರಿಗೆ ಹೊಸ ಕೊರೊನಾ ಮಾರ್ಗಸೂಚಿ ಬಿಡುಗಡೆ; ಇಲ್ಲಿದೆ ವಿವರ

TV9 Kannada


Leave a Reply

Your email address will not be published. Required fields are marked *