ರೈತರ ಬೆನ್ನು ಮುರಿದ ಮಳೆರಾಯ; ಶಿವಮೊಗ್ಗ ಜಿಲ್ಲೆಯಲ್ಲಿ 100 ಹೆಕ್ಟೇರ್​​ ಭತ್ತ & ಮೆಕ್ಕೆಜೋಳ ನಾಶ


ಶಿವಮೊಗ್ಗ: ರೈತರು ಕಷ್ಟಪಟ್ಟು ಬೆಳೆ ಬೆಳೆದಿದ್ರು. ಫಸಲು ಕೂಡ ಚೆನ್ನಾಗಿ ಬಂದಿತ್ತು. ಇನ್ನೂ, ಕೆಲವೇ ದಿನ ಕಳೆದಿದ್ರೆ ಬೆಳೆದ ಬೆಳೆ ಮಾರಿ ಈ ಬಾರಿಯಾದ್ರು ನೆಮ್ಮದಿಯಾಗಿರ್ತೀವಿ ಅಂದುಕೊಂಡಿದ್ರು. ಆದರೆ, ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಯಿಂದ ಅನ್ನದಾತರ ಬದುಕೇ ನೀರಿನಲ್ಲಿ ಕೊಚ್ಚಿಹೋಗಿದೆ. ಕೈಗೆ ಬಂದು ತುತ್ತು ಬಾಯಿಗೆ ಬಾರದೆ ಪರಿತಪಿಸುವಂತಾಗಿದೆ.

ಹೌದು.. ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆ ಶಿವಮೊಗ್ಗ ಜಿಲ್ಲೆಯ ರೈತರಿಗೆ ಅಕ್ಷರಶಃ ಆಘಾತ ನೀಡಿದೆ. ಬೆಳೆದ ಬೆಳೆಯಲ್ಲಾ ನೀರು ಪಾಲಾಗುತ್ತಿವೆ. ಕಟಾವು ಮಾಡಿದ ಬೆಳೆ ಹೊಲದಲ್ಲೇ ಕೊಳೆಯುತ್ತಿದೆ. ಸಾಲಸೋಲ ಮಾಡಿ ಉತ್ತಮ ಬೆಳೆಯ ನಿರೀಕ್ಷೆಯಲ್ಲಿದ್ದವರು ಕಣ್ಣೀರಿನಲ್ಲಿ ಕೈ ತೊಳೆಯುವಂತೆ ಆಗಿದೆ.

ಜಿಲ್ಲೆಯಲ್ಲಿ ಒಟ್ಟು 1 ಲಕ್ಷದ 31 ಸಾವಿರದ 357 ಹೆಕ್ಟೇರ್​ ಪ್ರದೇಶದಲ್ಲಿ ಬೆಳೆ ಬೆಳಯಲಾಗಿತ್ತು. ಈ ಪೈಕಿ 78 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಹಾಗೂ 51 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆಯಲಾಗಿದೆ. ಇದು ಈಗ ಕಟಾವಿಗು ಬಂದಿದೆ. ಬೆಳೆದ ಬೆಳೆ ಮಾರಿ ಈ ಬಾರಿಯಾದ್ರು ನೆಮ್ಮದಿಯಾಗಿರ್ತೀವಿ ಅಂತ ಅನ್ನದಾತರು ಅಂದುಕೊಂಡಿದ್ರು. ಆದ್ರೆ ಕಳೆದ ವಾರದಿಂದ ಸುರಿದ ಮಳೆ ಅನ್ನದಾತರ ಬದುಕಿಗೆ ಕೊಳ್ಳಿ ಇಟ್ಟಿದೆ.

ಒಂದೇ ವಾರದಲ್ಲಿ 100 ಹೆಕ್ಟೇರ್​ನಷ್ಟು ಭತ್ತ ಹಾಗೂ ಮೆಕ್ಕೆಜೋಳ ನೀರುಪಾಲಾಗಿದೆ ಅಂತ ಅಂದಾಜು ಮಾಡಲಾಗಿದೆ. ಆದ್ರೆ ವಾಸ್ತವದಲ್ಲಿ ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾಳಾಗಿದೆ ಎಂದು ಹೇಳಲಾಗುತ್ತಿದೆ.
ಕಳೆದೊಂದು ವಾರದಿಂದ ಸುರಿಯುತ್ತಿರುವ ನಿರಂತರ ಮಳೆಯಿಂದ ಹೆಚ್ಚಿನ ತೊಂದರೆ ಆಗುತ್ತಿದೆ ಅಂತ ಜಿಲ್ಲಾಧಿಕಾರಿಗಳಿ ಮಾಹಿತಿ ನೀಡಿದ್ದಾರೆ.

ಕೆಲವೊಂದು ಕಡೆ ಗದ್ದೆಗಳಲ್ಲಿ ನೀರು ನಿಂತಿರುವ ಕಾರಣ ಸ್ಥಳಕ್ಕೆ ಹೋಗಿ ಮಾಹಿತಿ ಪಡೆಯಲು ಆಗುತ್ತಿಲ್ಲ. ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಸ್ಪಷ್ಟ ಚಿತ್ರಣ ಸಿಗಲಿದ್ದು ನಂತರ ಹಾನಿಯ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಅಂತ ತಿಳಿಸಿದ್ದಾರೆ.

ಒಟ್ಟಿನಲ್ಲಿ ಕಳೆದ ಒಂದುವಾರದಿಂದ ಸುರಿಯುತ್ತಿರುವ ಮಳೆ ರೈತರ ಬದುಕನ್ನೇ ಕತ್ತಲೆಗೆ ದೂಡಿದೆ. ಒಂದ್ಕಡೆ ಮಳೆಯ ಹೊಡೆತಕ್ಕೆ ಸಿಲುಕಿ ಗದ್ದೆಗಳು ಕೊಚ್ಚಿಕೊಂಡು ಹೋಗಿದ್ರೆ, ಇನ್ನೊಂದೆಡೆ ಮಳೆ ಬಿರುಗಾಳಿ ಆರ್ಭಟಕ್ಕೆ ಮಲೆನಾಡಿನ ರೈತರು ಬೆಚ್ಚಿ ಬಿದ್ದಿದ್ದಾರೆ.

ಎಕರೆಗೆ ಸಾವಿರಾರು ರೂಪಾಯಿ ಖರ್ಚು ಮಾಡಿ ಕಷ್ಟಪಟ್ಟು ಬೆಳೆದ ಬೆಳೆ ನೀರಲ್ಲಿ ಕೊಚ್ಚಿಹೋಗಿದೆ. ಸರ್ಕಾರ ಎಚ್ಚೆತ್ತು ಬೆಳೆ ಕಳೆದುಕೊಂಡ ರೈತರಿಗೆ ಸೂಕ್ತ ಪರಿಹಾರ ನೀಡುವ ಮೂಲಕ ರೈತರ ಕಣ್ಣೀರು ಒರೆಸಬೇಕಿದೆ.

News First Live Kannada


Leave a Reply

Your email address will not be published. Required fields are marked *