ರೈತರ ವಿರುದ್ಧ ಎಲ್ಲ ಪ್ರಕರಣ ಹಿಂಪಡೆಯುವ ಭರವಸೆ: ಧರಣಿ ವಾಪಸ್ ಕುರಿತು ರೈತ ಸಂಘಟನೆಗಳ ಚರ್ಚೆ | Govt of India Agrees to Take back all cases Farmers Association will decide on Stir Soon


ರೈತರ ವಿರುದ್ಧ ಎಲ್ಲ ಪ್ರಕರಣ ಹಿಂಪಡೆಯುವ ಭರವಸೆ: ಧರಣಿ ವಾಪಸ್ ಕುರಿತು ರೈತ ಸಂಘಟನೆಗಳ ಚರ್ಚೆ

ರೈತರ ಪ್ರತಿಭಟನೆ

ದೆಹಲಿ: ಕೃಷಿ ಕಾಯ್ದೆ (Farm Laws) ವಿರೋಧಿಸಿ ಚಳವಳಿ ನಡೆಸುತ್ತಿದ್ದ ರೈತರ ವಿರುದ್ಧ ದಾಖಲಿಸಲಾಗಿದ್ದ ಎಲ್ಲ ಪ್ರಕರಣಗಳನ್ನು ಹಿಂಪಡೆಯುವುದಾಗಿ ಕೇಂದ್ರ ಸರ್ಕಾರವು ಭರವಸೆ ನೀಡಿರುವ ಹಿನ್ನೆಲೆಯಲ್ಲಿ ರೈತ ಸಂಘಟನೆಗಳು ಧರಣಿ ಸ್ಥಗಿತಗೊಳಿಸಲು ನಿರ್ಧರಿಸಿವೆ. ದೆಹಲಿಯಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ರೈತ ಸಂಘಟನೆಗಳ ನಾಯಕರು ಕೇಂದ್ರ ಸರ್ಕಾರದ ಪ್ರಸ್ತಾವದ ಬಗ್ಗೆ ನಾಳೆ (ಡಿ.13) ಸಭೆ ಸೇರಿ ಚರ್ಚೆ ನಡೆಸಲಾಗುವುದು. ಧರಣಿ ಹಿಂಪಡೆಯುವ ಬಗ್ಗೆ ಸಭೆಯಲ್ಲಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು. ಉಳಿದ ಬೇಡಿಕೆಗಳ ಈಡೇರಿಕೆ ಬಗ್ಗೆ ಕೇಂದ್ರ ಸರ್ಕಾರ ಲಿಖಿತ ಭರವಸೆ ನೀಡಬೇಕು. ಹುತಾತ್ಮ ರೈತರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು. ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡುವ ಸಮಿತಿಯಲ್ಲಿ ರೈತ ಸಂಘಟನೆಗಳ ನಾಯಕರೂ ಇರಬೇಕು. ವಿದ್ಯುತ್ ತಿದ್ದುಪಡಿ ಮಸೂದೆಯ ಕರಡು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

ಧರಣಿಯನ್ನು ಸಂಪೂರ್ಣ ಹಿಂಪಡೆಯಲು ರೈತ ಸಂಘಟನೆಗಳು ಸಮ್ಮತಿಸಿದ್ದು, ಅಧಿಕೃತ ಘೋಷಣೆ ಮಾಡುವುದಷ್ಟೇ ಬಾಕಿಯಿದೆ ಎಂಬ ಮಾತುಗಳು ರಾಷ್ಟ್ರ ರಾಜಧಾನಿಯಲ್ಲಿ ಪ್ರಬಲವಾಗಿ ಕೇಳಿಬರುತ್ತಿವೆ. ಕಳೆದ ಒಂದೂವರೆ ವರ್ಷಗಳಿಂದ ಪ್ರತಿಭಟನೆ ನಡೆಸುತ್ತಿರುವ ರೈತರು, ಕೇಂದ್ರ ಸರ್ಕಾರದ ಭರವಸೆಯನ್ನು ಒಪ್ಪಿಕೊಂಡಿದ್ದಾರೆ. ಈ ಕುರಿತು ಚರ್ಚಿಸಲು ನಾಳೆ (ಡಿ.13) ಮಧ್ಯಾಹ್ನ 2 ಗಂಟೆಗೆ ಸಿಂಘು ಗಡಿಯಲ್ಲಿ ಸಭೆ ನಡೆಸಲಾಗುವುದು. ಸಭೆಯಲ್ಲಿ ಪ್ರತಿಭಟನೆ ವಾಪಸ್ ನಿರ್ಧಾರ ಪ್ರಕಟವಾಗುವ ಸಾಧ್ಯತೆಯಿದೆ. ಪ್ರತಿಭಟನೆ ವೇಳೆ ಮೃತಪಟ್ಟ 700 ರೈತರಿಗೆ ಸಿಂಘು ಬಳಿ ಹುತಾತ್ಮರ ಸ್ಮಾರಕ ನಿರ್ಮಿಸಲು ಭೂಮಿ ಕೊಡಬೇಕು. ಲಖೀಂಪುರ್ ಖೇರಿಯಲ್ಲಿ ಕಾರು ಹರಿಸಿ ರೈತರ ಸಾವಿಗೆ ಕಾರಣರಾದ ಸಚಿವ ಅಜಯ್ ಮಿಶ್ರಾ ವಜಾ ಮಾಡಬೇಕು ಎಂದು ರೈತರು ಒತ್ತಾಯಿಸಿದ್ದರು.

ರೈತ ಸಂಘಗಳಿಗೆ ಬರೆದ ಪತ್ರದಲ್ಲಿ ಸರ್ಕಾರವು ಎಂಎಸ್‌ಪಿ ಕುರಿತು ಸಮಿತಿಯನ್ನು ರಚಿಸುವುದಾಗಿ ಹೇಳಿದೆ. ಬೆಳೆ ತ್ಯಾಜ್ಯ ಸುಡುವಿಕೆ ಸೇರಿದಂತೆ ಎಲ್ಲಾ ಪೊಲೀಸ್ ಪ್ರಕರಣಗಳನ್ನು ಕೈಬಿಡಲಾಗುವುದು ಎಂದು ಮೂಲಗಳು ತಿಳಿಸಿದ್ದು, ಈ ಬಗ್ಗೆ ರೈತರು ಚರ್ಚೆ ನಡೆಸುತ್ತಿದ್ದಾರೆ ಎಂದು ವರದಿಯಲ್ಲಿ ಹೇಳಿದೆ. ಅವರು ಈ ಪ್ರಸ್ತಾಪವನ್ನು ಒಪ್ಪಿಕೊಂಡರೆ, ರೈತರು ಒಂದು ವರ್ಷಕ್ಕೂ ಹೆಚ್ಚು ಕಾಲ ದೇಶದಾದ್ಯಂತ (ಮತ್ತು ಪ್ರಪಂಚದಾದ್ಯಂತ) ನಡೆಸುತ್ತಿದ್ದ ಪ್ರತಿಭಟನೆಯನ್ನು(Farmers Protest) ಹಿಂತೆಗೆದುಕೊಳ್ಳುತ್ತಾರೆ. ಕೃಷಿ ಕಾನೂನು ವಾಪಸ್ (farm laws repeal) ತೆಗೆದುಕೊಳ್ಳಲು ನಡೆಸಿದ ಹೋರಾಟದಲ್ಲಿ ಭದ್ರತಾ ಪಡೆಗಳೊಂದಿಗೆ ಹಿಂಸಾತ್ಮಕ ಘರ್ಷಣೆಗಳು, ಬಿರುಸಿನ ಚರ್ಚೆಗಳು ಮತ್ತು ಸಂಸತ್ತಿನಲ್ಲಿ ಗದ್ದಲಗಳು ಒಂದೆಡೆಯಾದರೆ ರೈತರ ಆಂದೋಲನದಲ್ಲಿ 700 ರೈತರು ಸಾವಿಗೀಡಾಗಿದ್ದಾರೆ. ರೈತರು ಸರ್ಕಾರದ ಪ್ರಸ್ತಾಪಕ್ಕೆ ಹೆಚ್ಚಾಗಿ ಒಲವು ತೋರುತ್ತಿರುವಾಗ ರೈತರಲ್ಲಿ ಕೆಲವರ ಮೇಲಿನ ಪೊಲೀಸ್ ಪ್ರಕರಣಗಳನ್ನು ಕೈಬಿಡುವ ನಿರ್ಧಾರ ಬೇಡಿಕೆಯನ್ನು ಬಿಡಬೇಕೆಂದು ಸರ್ಕಾರ ಬಯಸಿದೆ. ಅಂದಹಾಗೆ ಈ ಬಗ್ಗೆ ಎರಡನೇ ಸುತ್ತಿನ ಮಾತುಕತೆ ಸಾಧ್ಯತೆ ಇದೆ ಅಂತಿವೆ ಮೂಲಗಳು.

TV9 Kannada


Leave a Reply

Your email address will not be published. Required fields are marked *