ರೈತರ ಸತ್ಯಾಗ್ರಹ ಅಹಂಕಾರವನ್ನ ಸೋಲಿಸಿದೆ- ರಾಹುಲ್ ಗಾಂಧಿ


ಬೆಂಗಳೂರು: ರೈತರಿಂದ ಭಾರೀ ವಿರೋಧಕ್ಕೆ ಕಾರಣವಾಗಿದ್ದ ಮೂರು ಕೃಷಿ ಕಾಯ್ದೆಗಳನ್ನ ಕೇಂದ್ರ ಸರ್ಕಾರ ವಾಪಸ್ ಪಡೆದುಕೊಳ್ಳುವುದಾಗಿ ಘೋಷಿಸಿದೆ. ಗುರುನಾನಕ್​ ಜಯಂತಿ ನಿಮಿತ್ತ ದೇಶವನ್ನುದ್ದೇಶಿಸಿ ಇಂದು ಬೆಳಗ್ಗೆ ಮಾತನಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಈ ತೀರ್ಮಾನ ಪ್ರಕಟಿಸಿದ್ದಾರೆ.

ಇದನ್ನೂ ಓದಿ:BIG BREAKING ನೂತನ 3 ಕೃಷಿ ಕಾನೂನು ವಾಪಸ್​ -ಪ್ರಧಾನಿ ಮೋದಿ ಘೋಷಣೆ

ಮೋದಿ ಅವರ ಮಹತ್ವದ ನಿರ್ಧಾರ ಕುರಿತು ಟ್ವೀಟ್​ ಮಾಡಿರುವ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ.. ಕೇಂದ್ರದ ಅಹಂಕಾರವನ್ನ ರೈತರ ಸತ್ಯಾಗ್ರಹ ಮಣಿಸಿದೆ. ರೈತರು ತಮ್ಮ ಸುದೀರ್ಘ ಸತ್ಯಾಗ್ರಹದಿಂದ ಅನ್ನದಾತರಿಗೆ ಮಾರಕವಾಗಿದ್ದ ಕಾಯ್ದೆಗಳ ವಿರುದ್ಧ ಪ್ರತಿಭಟನೆಗೆ ಜಯ ಸಿಕ್ಕಿದೆ. ಜೈ ಹಿಂದ್​, ಜೈ ಕಿಸಾನ್​ ಎಂದು ರಾಹುಲ್​ ಟ್ವೀಟ್​ ಮಾಡಿದ್ದಾರೆ.

ಇದನ್ನೂ ಓದಿ:ಅನ್ನದಾತರ ಹೋರಾಟಕ್ಕೆ ಮಣಿದ ಮೋದಿ ಸರ್ಕಾರ; ವಾಪಸ್ ಪಡೆದ 3 ಕೃಷಿ ಕಾಯ್ದೆಗಳು ಯಾವುದು..?

News First Live Kannada


Leave a Reply

Your email address will not be published. Required fields are marked *