ರೈತಸಂಘವನ್ನು ಅದರ ಗತವೈಭವಕ್ಕೆ ಕೊಂಡೊಯ್ಯುವ ಪ್ರಯತ್ನ ಮಾಡುತ್ತೇವೆ: ಹೆಚ್ ಆರ್ ಬಸವರಾಜಪ್ಪ, ರೈತಸಂಘದ ನೂತನ ಅಧ್ಯಕ್ಷ | Will try to take Raitha Sangha to its past glory says HR Basavarajappa, new president of organisation ARBಶಿವಮೊಗ್ಗನಲ್ಲಿ ನಡೆದ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಪದಾಧಿಕಾರಿಗಳ ಸಭೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದ ಹೆಚ್ ಅರ್ ಬಸವರಾಜಪ್ಪನವರು ಸುದ್ದಿಗೋಷ್ಟಿಯೊಂದನ್ನು ನಡೆಸಿ ಚಂದ್ರಶೇಖರ್ ಅವರನ್ನು ಸ್ಥಾನದಿಂದ ಸರಿಸಿರುವ ಘೋಷಣೆ ಮಾಡಿದರು.

TV9kannada Web Team


| Edited By: Arun Belly

May 31, 2022 | 6:20 PM
Shivamogga: ಮೊನ್ನೆಯಷ್ಟೇ ರಾಜ್ಯದ ಬೇರೆ ಬೇರೆ ಜಿಲ್ಲೆಗಳ ಲಕ್ಷಾಂತರ ಸೈನಿಕರನ್ನು ಒಂದುಗೂಡಿಸಿ ಅರವಿಂದ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಾರ್ಟಿಗೆ (AAP) ರೈತ ಸಂಘದ ಬೆಂಬಲ ಇದೆಯೆಂದು ಘೋಷಿಸಿ ಮಾಧ್ಯಮಗಳಲ್ಲಿ ಮಿಂಚುತ್ತಿದ್ದ ರೈತ ನಾಯಕ ಕೋಡಿಹಳ್ಳಿ ಚಂದ್ರಶೇಖರ (Kodihalli Chandrashekar) ಅವರಿಗೆ ರಾಹುಕಾಲ ಶುರುವಾದಂತಿದೆ. ಎರಡು ದಿನಗಳ ಹಿಂದೆ ಅವರ ವಿರುದ್ಧ ಲಂಚದ ಅರೋಪ ಮಾಡಲಾಗಿತ್ತು ಮತ್ತು ಖುದ್ದು ಅವರೇ ನೈತಿಕ ಹೊಣೆ ಹೊತ್ತು ರಾಜೀನಾಮೆ ಸಲ್ಲಿಸಬೇಕೆಂದು ರೈತಸಂಘ (Raitha Sangah) ಮತ್ತು ಹಸಿರು ಸೇನೆ (Hasiru Sene) ಸಂಘಟನೆಗಳು ಆಗ್ರಹಿಸಿದ್ದವು. ಆದರೆ ಅವರು ಹಾಗೆ ಮಾಡದೆ ಹೋದ ಕಾರಣ ಮಂಗಳವಾರ ಅವರನ್ನು ರೈತಸಂಘದ ಅಧ್ಯಕ್ಷನ ಸ್ಥಾನದಿಂದ ಕಿತ್ತು ಹಾಕಲಾಯಿತು.

ಶಿವಮೊಗ್ಗನಲ್ಲಿ ನಡೆದ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಪದಾಧಿಕಾರಿಗಳ ಸಭೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದ ಹೆಚ್ ಅರ್ ಬಸವರಾಜಪ್ಪನವರು ಸುದ್ದಿಗೋಷ್ಟಿಯೊಂದನ್ನು ನಡೆಸಿ ಚಂದ್ರಶೇಖರ್ ಅವರನ್ನು ಸ್ಥಾನದಿಂದ ವಜಾ ಮಾಡಿರುವ ಘೋಷಣೆ ಮಾಡಿದರು.

ರೈತಸಂಘವು ತ್ಯಾಗ ಮತ್ತು ಬಲಿದಾನಗಳ ಸಂಕೇತವಾಗಿದೆ. ಸರ್ಕಾರಗಳ ವಿರುದ್ಧ ಹೋರಾಟ ಮಾಡುವಾಗ ರೈತ ನಾಯಕರು ಗುಂಡಿಗೆ ಎದೆಯೊಡ್ಡಿದ್ದಾರೆ ಮತ್ತು ಪೊಲೀಸರ ಲಾಠಿ ಮತ್ತು ಬೂಟುಗಳಿಂದ ಏಟು ತಿಂದಿದ್ದಾರೆ. ಅದರೆ ಇಂಥ ಒಂದು ಸಂಘಟನೆಯನ್ನು ರೈತರು ಮತ್ತು ಜನ ಅನುಮಾನದಿಂದ ನೋಡುವ ಪರಿಸ್ಥಿತಿಯ ಕೋಡಿಹಳ್ಳಿ ಅವರಿಂದ ಉಂಟಾಗಿದೆ. ನಮ್ಮ ಸಂಘಟನೆಯ 18 ಜಿಲ್ಲೆಗಳ ಪದಾಧಿಕಾರಿಗಳ ಜೊತೆ ನಡೆಸಿದ ಇಂದಿನ ಸಭೆಯಲ್ಲಿ ಮತ್ತು ಉಳಿದ ಜಿಲ್ಲೆಗಳ ಪದಾಧಿಕಾರಿಗಳು ಫೋನಿನ ಮೂಲಕ ಸೂಚಿಸಿದ ಸಮ್ಮತಿಯ ಮೇರೆಗೆ ಕೋಡಿಹಳ್ಳಿ ಅವರನ್ನು ಅಧ್ಯಕ್ಷ ಸ್ಥಾನದಿಂದ ತೆಗೆದುಹಾಕಿ ತಮ್ಮನ್ನು ಆ ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆ ಅಂತ ಬಸವರಾಜಪ್ಪ ಹೇಳಿದರು.

ಮಿಕ್ಕಿದ ಪದಾಧಿಕಾರಿಗಳನ್ನು ಮುಂದುವರಿಸಲಾಗಿದೆ. ಕೋಡಿಹಳ್ಳಿ ವಿರುದ್ಧ ಮಾಡಿರುವ ಆರೋಪಗಳ ತನಿಖೆ ನಡೆಸಲು ಒಂದು ಸತ್ಯ ಶೋಧನಾ ಸಮಿತಿಯನ್ನು ರಚಿಸಲಾಗಿದೆ. ಸಮತಿಯ ಸದಸ್ಯರು ರಾಜ್ಯಾದಾದ್ಯಂತ ಪ್ರವಾಸ ಮಾಡಿ ಒಂದು ವರದಿಯನ್ನು ಸಲ್ಲಿಸಲಿದ್ದಾರೆ. ಎಮ್ ಡಿ ನಂಜುಂಡಪ್ಪ, ಎಮ್ ಎಸ್ ರುದ್ರಪ್ಪ, ಸುಂದರೇಶ್ ಮೊದಲಾದವರು ಕಟ್ಟಿ ಬೆಳೆಸಿರುವ ಸಂಘಟನೆಯನ್ನು ಅದರ ಗತವೈಭವಕ್ಕೆ ತೆಗೆದುಕೊಂಡು ಹೋಗುವ ಪ್ರಯತ್ನ ನಾವು ಮಾಡಲಿದ್ದೇವೆ. ನಮ್ಮ ಸಂಘದ ಬ್ಯಾನರ್ ಗಳ ಮೇಲೆ ಈ ಮಹಾನುಭಾವರ ಚಿತ್ರ ಮಾತ್ರ ಇರಲಿದೆ ಎಂದು ಬಸವರಾಜಪ್ಪ ಹೇಳಿದರು.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

TV9 Kannada


Leave a Reply

Your email address will not be published. Required fields are marked *