ರೈಲು ಪ್ರಯಾಣಕ್ಕೆ ಟಾಯ್ಲೆಟ್ ಬದಿಯ ಸೀಟ್ ಸಿಗದಂತೆ ಖಾತ್ರಿಪಡಿಸಿಕೊಳ್ಳಲು ಇಲ್ಲಿವೆ ಕೆಲ ಉಪಾಯಗಳು | Here are tips to avoid booking seats near toilets for your train travel


ನಿಮ್ಮ ಟಿಕೆಟ್ ಗಳನ್ನು ಸಾಧ್ಯವಾಗುವಷ್ಟು ಬೇಗ ಬುಕ್ ಮಾಡಿಕೊಳ್ಳಲು ಪ್ರಯತ್ನಿಸಿ. ಸೀಟ್ ಬುಕಿಂಗ್ ಪ್ರಕ್ರಿಯೆಯಲ್ಲಿ ಐ ಆರ್ ಸಿಟಿಸಿ ಮೊದಲು ಬರುವವರಿಗೆ ಆದ್ಯತೆ ನೀಡುತ್ತಾ ಕೋಚ್ ಮಧ್ಯಭಾಗದಿಂದ ಸೀಟ್ ಅಲಾಟ್ ಮಾಡುವುದನ್ನು ಆರಂಭಿಸುತ್ತದೆ.

ರೈಲು ಪ್ರಯಾಣಕ್ಕೆ ಟಾಯ್ಲೆಟ್ ಬದಿಯ ಸೀಟ್ ಸಿಗದಂತೆ ಖಾತ್ರಿಪಡಿಸಿಕೊಳ್ಳಲು ಇಲ್ಲಿವೆ ಕೆಲ ಉಪಾಯಗಳು

ಪ್ರಥಮ ದರ್ಜೆ ಎಸಿ ಕೋಚ್

ರೈಲು ಪ್ರಯಾಣ (train travel) ಯಾವತ್ತಿಗೂ ಖುಷಿದಾಯಕವೇ ಅದರಲ್ಲೂ ದೂರದ ಪ್ರಯಾಣವಾಗಿದ್ದರೆ ಇನ್ನೂ ಖುಷಿ. ಆದರೆ ಟ್ರೇನಲ್ಲಿ ಟಾಯ್ಲೆಟ್ ಗೆ (toilet) ಹತ್ತಿರದ ಸೀಟ್/ಬರ್ಥ್ (berth) ದೊರೆತಿದ್ದರೆ ಪ್ರಯಾಣ ನಿಸ್ಸಂದೇಹವಾಗಿ ಅಹಿತಕರ ಮತ್ತು ಕಿರಿಕಿರಿಯುಂಟು ಮಾಡುವುದಾಗಿರುತ್ತದೆ. ಬೇರೆ ಬೇರೆ ಹಿನ್ನೆಲೆಯ ಜನ ಟಾಯ್ಲೆಟ್ ಉಪಯೋಗಿಸುತ್ತಾರೆ ಮತ್ತು ಅದರ ಬಾಗಿಲು ತೆರೆದಾಗ ಮತ್ತು ಮುಚ್ಚುವಾಗ ಮೂಗಿಗೆ ಅಡರುವ ವಾಸನೆ ಅಸಹನೀಯವಾಗಿರುತ್ತದೆ ಮತ್ತು ನಿಮ್ಮ ಮೂಡನ್ನು ಹಾಳುಮಾಡುತ್ತದೆ.

ಐಆರ್ ಸಿಟಿಸಿ ರೈಲುಗಳಲ್ಲಿ ಸೀಟಿಂಗ್ ವಿಧಾನ

ಭಾರತೀಯ ರೈಲ್ವೆ ಅಡಿಯಲ್ಲಿ ಬರುವ ಎಲ್ಲ ಟ್ರೇನ್ ಗಳು ವಿಭಿನ್ನ ಬಗೆಯ ಕೋಚ್ ಗಳನ್ನು ಹೊಂದಿದ್ದು, ನಿರ್ದಿಷ್ಟ ವಿನ್ಯಾಸ ಮತ್ತು ಆಕಾರದಲ್ಲಿ ರಚಿಸಲಾಗಿರುತ್ತವೆ. ಅವುಗಳ ವೆಚ್ಚ, ಬರ್ತ್‌, ಸೌಕರ್ಯ ಮತ್ತು ಸೌಲಭ್ಯಗಳು ಒಂದೇ ತೆರನಾಗಿರುವುದಿಲ್ಲ. ಆದರೆ ಎಲ್ಲ ಕೋಚ್‌ ಗಳು ಪ್ರತಿ ತುದಿಯಲ್ಲಿ ಎರಡು ಗೇಟ್‌ಗಳು ಮತ್ತು ಎರಡೆರಡು ಶೌಚಾಲಯಗಳನ್ನು ಹೊಂದಿರುತ್ತವೆ. ದೂರ-ಪ್ರಯಾಣದ ರೈಲುಗಳಲ್ಲಿನ ವಿವಿಧ ಕೋಚ್‌ಗಳ ಆಕಾರ ಮತ್ತು ಕುಳಿತುಕೊಳ್ಳುವ ವ್ಯವಸ್ಥೆಯ ಕಡೆ ಗಮನ ಹರಿಸುವ ಪ್ರಯತ್ನ ಮಾಡುವ.

ಪ್ರಥಮ ದರ್ಜೆ ಎಸಿ (1A)

ಪ್ರಥಮ ದರ್ಜೆ ಎಸಿ (1A) ಕೋಚ್ ಗೆ ನೀಡಲಾಗಿರುವ ಕೋಡ್ ಹೆಚ್ ಆಗಿದೆ. ಕೋಚ್‌ನ ಪ್ರತಿ ಕೂಪ್‌ನಲ್ಲಿ 24 ಬರ್ತ್‌ಗಳಿವೆ- ಒಂದು ಮೇಲ್ಭಾಗ ಮತ್ತು ಕೆಳಭಾಗದಲ್ಲಿ ಒಂದು. ಅಗತ್ಯವಿದ್ದರೆ ಕೂಪ್‌ಗಳನ್ನು ಮುಚ್ಚಬಹುದು ಮತ್ತು ಲಾಕ್ ಮಾಡಬಹುದು. ಸೈಡ್ ಬರ್ತ್‌ಗಳ ಬದಲಿಗೆ, ನಡೆದಾಡಲು ಮತ್ತು ಮುಖ್ಯ ಬಾಗಿಲಿಗೆ ಸಂಪರ್ಕಿಸುವ ಉದ್ದನೆಯ ಕೂಪ್ ಗಳು ಕೋಚ್ ನಲ್ಲಿರುತ್ತವೆ

2 ಟಿಯರ್ ಎಸಿ ಸ್ಲೀಪರ್ (2A)

2 ಟಿಯರ್ ಎಸಿ ಸ್ಲೀಪರ್ (2A) ಕೋಚ್ ಗೆ ನೀಡಲಾಗುರುವ ಕೋಡ್ ಎ ಆಗಿದೆ. ಕೋಚ್ ನ ಗಾತ್ರವನ್ನು ಆಧರಿಸಿ 46 ಇಲ್ಲವೇ 54 ಬರ್ಥ್ಗಳಿರುತ್ತವೆ. ಇದರಲ್ಲೂ ಮೇಲೊಂದು ಮತ್ತು ಕೆಳಗೊಂದು ಬರ್ಥ್ ವ್ಯವಸ್ಥೆ ಇರುತ್ತದೆ. ಕೂಪ್ ಗಳು ಓಪನ್ ಸ್ವರೂಪದವಗಿದ್ದರೂ ಹೆಚ್ಚಿನ ಏಕಾಂತಕ್ಕಾಗಿ ಪರದೆಗಳನ್ನು ಒದಗಿಸಲಾಗಿರುತ್ತದೆ.

3 ಟಿಯರ್ ಎಸಿ ಸ್ಲೀಪರ್ (3A)

ಈ ಕೋಚ್ ಗೆ ನೀಡಲಾಗಿರುವ ಕೋಡ್ ಬಿ ಆಗಿದ್ದು ಇದರಲ್ಲಿ 64 ಬರ್ಥ್ ಗಳಿವೆ. ಸೈಡ್ ಬರ್ಥ್ ಗಳ ಸ್ಥಳದಲ್ಲಿ 2-ಟಿಯರ್ ನಂಥ ವ್ಯವಸ್ಥೆಯಿದ್ದರೂ ಮತ್ತೊಂದು ಭಾಗಕ್ಕೆ ಅಪ್ಪರ್, ಮಿಡ್ಲ್ ಮತ್ತು ಲೋಯರ್ ಬರ್ಥ್ ಗಳಿವೆ.

ಸ್ಲೀಪರ್ ಕ್ಲಾಸ್ (ಎಸ್ ಎಲ್)

ಇದು ವಾತಾನುಕೂಲಿತವಲ್ಲದ ಕೋಚ್ ಅಗಿದ್ದು ಇದರ ಕೋಡ್ ಎಸ್ ಆಗಿದೆ. ಕೋಚ್ ಗಳಲ್ಲಿ 72 ಜನಕ್ಕೆ ಸೀಟಿಂಗ್ ಮತ್ತು 72 ಬರ್ಥ್ ವ್ಯವಸ್ಥೆ ಇರುತ್ತದೆ. ವಾತಾನುಕೂಲಿತ ಅಂಶವೊಂದನ್ನು ಬಿಟ್ಟರೆ ಈ ಕೋಚ್ ಎಸಿ ಸ್ಲೀಪರ್ ಕೋಚನ್ನು ಹೋಲುತ್ತದೆ. ಗಾಳಿಯಾಡಲು ಕೋಚ್ ಕಿಟಕಿಗಳನ್ನು ತೆರೆದಿಡಬಹುದಾಗಿದೆ.

ಸ್ಲೀಪರ್ ಕ್ಲಾಸ್ನಲ್ಲಿ ಟಾಯ್ಲೆಟ್ ಪಕ್ಕ ಸೀಟ್ ಸಿಕ್ಕರೆ ಅದಕ್ಕಿಂತ ದೊಡ್ಡ ಹಿಂಸೆ ಮತ್ತೊಂದಿಲ್ಲ ಮಾರಾಯ್ರೇ. ಟಾಯ್ಲೆಟ್ ನಿಂದ ಬರುವ ಕೆಟ್ಟ ವಾಸನೆ ನಿಮ್ಮ ಪ್ರಯಾಣದ ಖುಷಿಯನ್ನು ಹಾಳುಮಾಡುತ್ತದೆ.

ಸೆಕೆಂಡ್ ಸೀಟಿಂಗ್ (2 ಎಸ್)

ಇದು ಕೂಡ ವಾತಾನುಕೂಲಿತವಲ್ಲದ (ನಾನ್-ಎಸಿ) ಕೋಚ್ ಆಗಿದೆ ಮತ್ತು ಇದರಲ್ಲಿ ಕೇವಲ ಕೂರಲು ಮಾತ್ರ ಆಸನಗಳ ವ್ಯವಸ್ಥೆ ಇರುತ್ತದೆ, ಬರ್ಥ್ ಗಳು ಇರೋದಿಲ್ಲ.

ಎಸಿ ಚೇರ್ ಕಾರ್

ಇದು ಎಸಿ ಕೋಚ್ ಮತ್ತು ಕೋಡ್ ಗಳು ಸಿ ಮತ್ತು ಡಿ ಆಗಿರುತ್ತವೆ. ಕೋಚ್ ಸಾರ್ಮಥ್ಯದನುಸಾರ 67 ಇಲ್ಲವೇ 75 ಜನ ಕೂರಬಹುದಾಗಿದೆ. ಮಧ್ಯ ದಾರಿಯ ಎರಎಡೂ ಪಕ್ಕ ಸೀಟುಗಳ 23 ಸಾಲುಗಳಿವೆ.

ಗರೀಬ್ ರಥ್ (3A)

ಗರೀಬ್ ರಥ್ ಟ್ರೇನಿನ ಎಲ್ಲ ಕೋಚ್ ಗಳು ಎಸಿಯಾಗಿದ್ದು ಇವುಗಳಿಗೆ ನೀಡಿರುವ ಕೋಡ್ ಜಿ ಆಗಿದೆ. ಇದರ ಪ್ರತಿ ಕೋಚ್ ನಲ್ಲಿ 81 ಬರ್ಥ್ ಗಳಿವೆ ಮತ್ತು ಸೈಡ್ ಬರ್ಥ್ ಗಳ ಜೊತೆಗೆ ಕೇವಲ 3-ಟಿಯರ್ ಕೋಚ್ ಸೌಲಭ್ಯ ಮಾತ್ರ ಸಿಗುತ್ತದೆ.

ಸೀಟ್ ಗಳನ್ನು ಒದಗಿಸುವ ವಿಧಾನ

ಟಾಯ್ಲೆಟ್ ಪಕ್ಕದ ಆಸನಗಳು ಯಾರಿಗೂ ಇಷ್ಟವಾಗುವುದಿಲ್ಲ. ಹಾಗೆ ನೋಡಿದರೆ ನಾವು ಅಪೇಕ್ಷಿಸುವಂಥ ಸಮಸ್ಯೆರಹಿತ ಸೀಟ್ ಪಡೆಯುವ ಸಾಧ್ಯತೆ ಕಮ್ಮಿಯಾದರೂ ನೀವು ಪ್ರಯತ್ನಿಸಿದಲ್ಲಿ ನಿಮಗಿಷ್ಟದ ಸೀಟ್ ಗಿಟ್ಟಿಸುವುದು ಸಾಧ್ಯವಿದೆ. ನಿರ್ದಿಷ್ಟ ನಂಬರಿನ ಸೀಟ್ ಬೇಕೆಂದು ಕೇಳುವ ಅವಕಾಶವಿಲ್ಲವಾದರೂ, ಐ ಆರ್ ಸಿಟಿಸಿ ಪ್ರಯಾಣಿಕರಿಗೆ ಸೀಟ್ ಅಲಾಟ್ ಮಾಡಲು ಒಂದು ನಿರ್ದಿಷ್ಟವಾದ ವಿಧಾನ ಅನುಸರಿಸುತ್ತದೆ.

ಐ ಆರ್ ಸಿಟಿಸಿ ಸೀಟ್ ಅಲಾಟ್ ಮಾಡುವ ವಿಧಾನ

ವಿಧಾನದ ಪ್ರಕಾರ ಮೊದಲಿಗೆ ಕೋಚ್ ಮಧ್ಯಭಾಗದಿಂದ ಸೀಟ್ ಗಳನ್ನು ಅಲಾಟ್ ಮಾಡುವ ಪ್ರಕ್ರಿಯೆ ಆರಂಭವಾಗುತ್ತದೆ. ಹೀಗೆ ಮಾಡುವುದರಿಂದ ಕೋಚ್ ಗಳಲ್ಲಿನ ಲೋಡ್ ಸಮಾನವಾಗಿ ಹಂಚಿಕೆಯಾಗುತ್ತದೆ ಮತ್ತು ಟ್ರೇನಲ್ಲಿ ಬ್ಯಾಲೆನ್ಸ್ ಸಮರ್ಪಕವಾಗಿ ನಿರ್ವಹಣೆಯಾಗುತ್ತದೆ. ಮಧ್ಯಬಾಗದ ಸೀಟುಗಳನ್ನು ಅಲಾಟ್ ಮಾಡಿದ ಬಳಿಕ ಕೋಚ್ ಕೊನೆಭಾಗದಲ್ಲಿರುವ ಸೀಟುಗಳನ್ನು ಅಲಾಟ್ ಮಾಡಲಾಗುತ್ತದೆ.

ಟಾಯ್ಲೆಟ್ ಪಕ್ಕದ ಸೀಟು ಆಲಾಟ್ ಆಗುವುದನ್ನು ತಪ್ಪಿಸಿಕೊಳ್ಳಲು ಕೆಲ ಉಪಾಯಗಳು

ನಿಮ್ಮ ಟಿಕೆಟ್ ಗಳನ್ನು ಸಾಧ್ಯವಾಗುವಷ್ಟು ಬೇಗ ಬುಕ್ ಮಾಡಿಕೊಳ್ಳಲು ಪ್ರಯತ್ನಿಸಿ. ಸೀಟ್ ಬುಕಿಂಗ್ ಪ್ರಕ್ರಿಯೆಯಲ್ಲಿ ಐ ಆರ್ ಸಿಟಿಸಿ ಮೊದಲು ಬರುವವರಿಗೆ ಆದ್ಯತೆ ನೀಡುತ್ತಾ ಕೋಚ್ ಮಧ್ಯಭಾಗದಿಂದ ಸೀಟ್ ಅಲಾಟ್ ಮಾಡುವುದನ್ನು ಆರಂಭಿಸುತ್ತದೆ. ಹಾಗಾಗಿ ನೀವು ಬೇಗ ಟಿಕೆಟ್ ಮಾಡಿಸಿಕೊಂಡರೆ ಟಾಯ್ಲೆಟ್ ಗಳಿಗೆ ದೂರದ ಮತ್ತು ಕೋಚ್ ಮಧ್ಯಭಾಗದ ಸೀಟ್ ಸಿಗುವ ಸಾಧ್ಯತೆ ಜಾಸ್ತಿಯಿರುತ್ತದೆ.

ಬುಕಿಂಗ್ ಕೌಂಟರ್ ಆಥವಾ ಐ ಆರ್ ಸಿಟಿಸಿ ಸೈಟ್ ನಲ್ಲಿ ಕೂತಿರುವ ಅಧಿಕಾರಿ ಸೀಟ್ ಒದಗಿಸುವಾಗ ನಿಮ್ಮ ಆದ್ಯತೆಗಳನ್ನು ಆಯ್ಕೆ ಮಾಡಿಕೊಳ್ಳುವಂತೆ ಸೂಚಿಸುತ್ತಾನೆ. ನಿಮಗೆ ಟಾಯ್ಲೆಟ್ ಗೆ ದೂರದ ಸೀಟು ಬೇಕು ಅನ್ನುವುದಾದರೆ ಆದ್ಯತೆ ಕಾಲಂನಲ್ಲಿ ಏನನ್ನೂ ನಮೂದಿಸದಿರುವುದೇ ಉತ್ತಮ. ನಮೂದಿಸಿದರೆ ನಿಮಗೆ ಕೋಚ್ ನ ಕೊನೆ ಭಾಗದಲ್ಲಿ ಸೀಟು ಸಿಗುವ ಸಾಧ್ಯತೆಯೇ ಹೆಚ್ಚಿರುತ್ತದೆ.

ನೀವು ಅದೃಷ್ಟಶಾಲಿಗಳಾಗಿದ್ದರೆ, ತಡವಾಗಿ ಟಿಕೆಟ್ ಬುಕ್ ಮಾಡಿದರೂ ಕೋಚ್ ಮಧ್ಯಭಾಗದ ಸೀಟು ಸಿಗಬಹುದು. ಬುಕ್ ಮಾಡುವಾಗ ಕನ್ಫರ್ಮ್ ಟಿಕೆಟ್ ಗಳನ್ನು ಪಡೆದವರು ತಮ್ಮ ಯೋಜಿತ ಪ್ರಯಾಣವನ್ನು ರದ್ದು ಮಾಡಿದರೆ ನಿಮಗೆ ಅವರಿಗೆ ಮೀಸಲಾಗಿದ್ದ ಸೀಟುಗಳು ಸಿಗುವ ಚಾನ್ಸ್ ಇರುತ್ತದೆ. ಅದು ಅಪರೂಪಕ್ಕೆ ಒದಗಿಬರುವ ಸಾಧ್ಯತೆ.

ತಾಜಾ ಸುದ್ದಿ

TV9 Kannada


Leave a Reply

Your email address will not be published.