ವಿನಯ್ ರಾಜ್‌ಕುಮಾರ್ ಅಭಿನಯದ "ಪೆಪೆ" ಸಿನಿಮಾಗೆ ರಘು ದೀಕ್ಷಿತ್ ಸಂಗೀತ ನೀಡಲಿದ್ದಾರೆ. ಚೊಚ್ಚಲ ನಿರ್ದೇಶಕ ಶ್ರೀಲೇಶ್ ಎಸ್ ನಾಯರ್ ನಿರ್ದೇಶನದ ಆಕ್ಷನ್ ಡ್ರಾಮಾದಲ್ಲಿ ಯಾವ ಹಾಡುಗಳಿಲ್ಲ.ಸಂಗೀತ ನಿರ್ದೇಶಕರು ಚಿತ್ರದ ಹಿನ್ನೆಲೆ ಸ್ಕೋರ್ ನೀಡುವ ಕೆಲಸವನ್ನಷ್ಟೇ ಮಾಡಲಿದ್ದಾರೆ.

ರಘು ದೀಕ್ಷಿತ್ ಈ ಹಿಂದೆ ಕೃಷ್ಣ ಅವರ "ಲವ್ ಮೋಕ್‌ಟೇಲ್" ಚಿತ್ರದ ಮೂಲಕ ಹಿಟ್ ನೀಡಿದ್ದರು. ಇನ್ನು ರಘು ದೀಕ್ಷಿತ್ "ನಿನ್ನ ಸನಿಹಕೆ", "ಆರ್ಕೆಸ್ಟ್ರಾ" ಚಿತ್ರಗಳ ಹಿನ್ನೆಲೆ ಸಂಗೀತದ ಜವಾಬ್ದಾರಿಯನ್ನೂ ತೆಗೆದುಕೊಂಡಿದ್ದಾರೆ.

ಇತ್ತೀಚೆಗೆ "ಪೆಪೆ" ಶೆಡ್ಯೂಲ್ ನಲ್ಲಿ "ಮಾಯಾ ಕನ್ನಡಿ" ನಾಯಕಿ ಕಾಜಲ್ ಕುಂದರ್ ನಾಯಕಿಯಾಗಿರುವ ಭಾಗ ಕೊಡಗಿನಲ್ಲಿ ಚಿತ್ರೀಕರಣವಾಗಿತ್ತು.

ವಿನಯ್ ರಾಜ್‌ಕುಮಾರ್ ಅವರ ಫಸ್ಟ್ ಲುಕ್ ಯುಗಾದಿಯಂದು ಹೊರಬಂದಿದ್ದು ಉದಯ್ ಶಂಕರ್ ಎಸ್ ಮತ್ತು ನಿಜಗುಣ ಗುರುಸ್ವಾಮಿ ಅವರು ಚಿತ್ರಕ್ಕೆ ಬಂಡವಾಳ ತೊಡಗಿಸಿದ್ದಾರೆ. ಚಿತ್ರಕ್ಕೆ ಸಮರ್ಥ್ ಉಪಾಧ್ಯಾಯ ಸ್ಛಾಯಾಗ್ರಹಣವಿದೆ. ಇದೆಲ್ಲದರ ನಡುವೆ ಈ ಮಧ್ಯೆ, ಶೀಘ್ರದಲ್ಲೇ ಅನಾವರಣಗೊಳ್ಳಲಿರುವ ಟೀಸರ್ ಕೆಲಸ ಭರದಿಂದ ಸಾಗಿದೆ.

Source: Kannadaprabha – ಸಿನಿಮಾ ಸುದ್ದಿ – https://www.kannadaprabha.com/cinema/news/
Read More