ಮುಂಬೈ: ಬಾಲಿವುಡ್ ನಟ ಅಮೀರ್ ಖಾನ್ ಪುತ್ರಿ ಇರಾ ಖಾನ್ ಬಾಯ್ ಫ್ರೆಂಡ್ ಜೊತೆಗಿನ ರೊಮ್ಯಾಂಟಿಕ್ ಫೋಟೋವನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಇರಾ ಖಾನ್ ತನ್ನ ಬಾಯ್ ಫ್ರೆಂಡ್ ನೂಪುರ್ ಶಿಖಾರೆ ಜೊತೆಗಿನ ರೊಮ್ಯಾಂಟಿಕ್ ಆಗಿ ಕಾಲಕಳೆದಿರುವ ಸಮಯದಲ್ಲಿ ಕ್ಲಿಕ್ಕಿಸಿಕೊಂಡಿರುವ ಫೋಟೋವನ್ನು ಶೇರ್ ಮಾಡುವ ಮೂಲಕವಾಗಿ ಎಲ್ಲರ ಗಮನ ಸೆಳೆದಿದ್ದಾರೆ. ನೂಪುರ್ ಜೊತೆಗೆ ಆಪ್ತವಾಗಿರುವ ಇರಾ ತನ್ನ ಕೈಯಿಂದ ನೂಪುರ್ ಕತ್ತನ್ನು ಹಿಡಿದಿರುವ ಫೊಟೋ ಸೇರಿದಂತೆ ಇಬ್ಬರು ನಗುತ್ತಾ, ಸಂತೋಷವಾಗಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಆತ ತುಂಬಾನೇ ನಾಟಕವಾಡುತ್ತಾನೆ ಎಂದು ಪ್ರೀತಿಯಿಂದ ದೂರಿದ್ದಾರೆ. ಇದಕ್ಕೆ ನೂಪುರ್ ಕಮೆಂಟ್ ಮಾಡಿದ್ದಾರೆ. ನಾನು ನಾಟಕವಾಡ್ತೀನಾ? ನಾನಾ? ಇಲ್ಲ, ಇಲ್ಲ. ಅದು ಆಗಿದ್ದರೂ ಆಗಬಹುದು. ಆದರೆ, ನಾನು ನಿನ್ನನ್ನು ಪ್ರೀತಿಸುತ್ತೀನಲ್ಲ ಎಂದು ನೂಪುರ್ ಕಮೆಂಟ್ ಮಾಡಿದ್ದಾರೆ.

 

View this post on Instagram

 

A post shared by Ira Khan (@khan.ira)

ಇಬ್ಬರ ಈ ಫೋಟೋಗೆ ನೆಟ್ಟಿಗರಿಂದ ಸಿಕ್ಕಾಪಟ್ಟೆ ಮೆಚ್ಚಗೆ ವ್ಯಕ್ತವಾಗಿದೆ. ಇರಾಖಾನ್ ಹುಡುಗನ ಜೊತೆಗೆ ಫೋಟೋಗಳನ್ನು ಹಂಚಿಕೊಳ್ಳುತ್ತಿರುವುದು ಇದೆ ಮೊದಲೆನಲ್ಲ. ಈ ಮೊದಲು ಸಾಕಷ್ಟು ಫೋಟೋಗಳನ್ನು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿದ್ದಾರೆ.

 

View this post on Instagram

 

A post shared by Ira Khan (@khan.ira)

1986ರಲ್ಲಿ ನಟಿ ರೀನಾ ದತ್ತ ಜೊತೆ ಆಮಿರ್ ಖಾನ್ ಮೊದಲ ಮದುವೆ ಆಗಿದ್ದರು. ಈ ದಂಪತಿಗೆ ಇಬ್ಬರು ಮಕ್ಕಳು (ಪುತ್ರ ಜುನೈದ್, ಪುತ್ರಿ ಇರಾ) ಜನಿಸಿದರು. 2002ರಲ್ಲಿ ಆಮಿರ್ ಮತ್ತು ರೀನಾ ಡಿವೋರ್ಸ್ ಪಡೆದುಕೊಂಡರು. ಇಬ್ಬರ ಮಕ್ಕಳ ಜವಾಬ್ದಾರಿಯನ್ನು ರೀನಾ ಹೊತ್ತುಕೊಂಡರು. ಮೊದಲ ಪತ್ನಿಯ ಮಕ್ಕಳ ಜೊತೆ ಆಮಿರ್ ಖಾನ್ ಇಂದಿಗೂ ಚೆನ್ನಾಗಿಯೇ ಇದ್ದಾರೆ. ರೀನಾ ದತ್ತಾ ಜತೆ ವಿಚ್ಛೇದನ ಪಡೆದ ನಂತರದಲ್ಲಿ ಆಮಿರ್ ಖಾನ್ ಕಿರಣ್ ರಾವ್ ಅವರನ್ನು ಮದುವೆ ಆಗಿದ್ದರು. ಇತ್ತೀಚೆಗೆ ಇಬ್ಬರೂ ಬೇರೆ ಆಗುತ್ತಿರುವ ಬಗ್ಗೆ ಘೋಷಣೆ ಮಾಡಿದ್ದರು.

 

View this post on Instagram

 

A post shared by Ira Khan (@khan.ira)

The post ರೊಮ್ಯಾಂಟಿಕ್ ಫೋಟೋ ಹಂಚಿಕೊಂಡ ಖ್ಯಾತ ನಟನ ಪುತ್ರಿ appeared first on Public TV.

Source: publictv.in

Source link