ರೋಗಿಗಳ ಸಂಬಂಧಿಕರಿಂದ ಹಲ್ಲೆ.. ತರಬೇತಿ ವೈದ್ಯರಿಂದ ಪ್ರತಿಭಟನೆ

ರೋಗಿಗಳ ಸಂಬಂಧಿಕರಿಂದ ಹಲ್ಲೆ.. ತರಬೇತಿ ವೈದ್ಯರಿಂದ ಪ್ರತಿಭಟನೆ

ರಾಯಚೂರು: ರೋಗಿ ಸಂಬಂಧಿಕರಿಂದ ತರಬೇತಿ ವೈದ್ಯರ ಮೇಲೆ ಹಲ್ಲೆ ನಡೆದ ಘಟನೆ ಜಿಲ್ಲೆಯ ರಿಮ್ಸ್​ ಆಸ್ಪತ್ರೆಯಲ್ಲಿ ನಡೆದಿದೆ. ಹೀಗಾಗಿ, ಹಲ್ಲೆ ಖಂಡಿಸಿ ರಿಮ್ಸ್​ ಆಸ್ಪತ್ರೆ ಎದುರು ತರಬೇತಿ ವ್ಯದ್ಯರಿಂದ ಪ್ರತಿಭಟನೆ ನಡೆಸಿದ್ದಾರೆ.

ನಿನ್ನೆ ತಡರಾತ್ರಿ ತರಬೇತಿ ವೈದ್ಯರ ಮೇಲೆ ರೋಗಿ ಸಂಬಂಧಿಕರು ಹಲ್ಲೆ‌ ನಡೆಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಹಲ್ಲೆ ಖಂಡಿಸಿ ರಿಮ್ಸ್ ಆಸ್ಪತ್ರೆ ಮುಂದೆ ಕೈಗಳಿಗೆ ಕಪ್ಪು ಬಟ್ಟೆ ಕಟ್ಟಿಕೊಂಡು ವೈದ್ಯರು ಪ್ರತಿಭಟನೆ ನಡೆಸಿದ್ದಾರೆ. ಅಷ್ಟೇ ಅಲ್ಲದೇ ಹಲ್ಲೆ‌ ಮಾಡಿದವರ ವಿರುದ್ಧ ಶಿಸ್ತು ಕ್ರಮಕ್ಕೆ ಆಗ್ರಹಿಸಿದ್ದಾರೆ.

ಇನ್ನು ಪ್ರತಿಭಟನೆ ಸ್ಥಳಕ್ಕೆ ರಿಮ್ಸ್ ಆಸ್ಪತ್ರೆ ನಿರ್ದೇಶಕ ಬಸವರಾಜ ಪೀರಾಪುರ, ಡಿವೈಎಸ್ಪಿ ಶಿವನಗೌಡ ಭೇಟಿ ನೀಡಿದ್ರು. ಈ ವೇಳೆ,
ರಿಮ್ಸ್ ಆಸ್ಪತ್ರೆ ಡೀನ್ ಹಾಗೂ ಪೊಲೀಸರ ಜೊತೆಗೆ ವೈದ್ಯರು ವಾಗ್ವಾದಕ್ಕೆ ಇಳಿದಿದ್ದಾರೆ. ಅಲ್ಲದೇ, ಆಸ್ಪತ್ರೆಯಲ್ಲಿ ವೈದ್ಯರಿಗೆ ರಕ್ಷಣೆ ಇಲ್ಲದಂತೆ ಆಗಿದೆ. ರೋಗಿಗೆ ಚಿಕಿತ್ಸೆ ನೀಡುವಾಗಲೇ ಹಲ್ಲೆ ಮಾಡಿದ್ದಾರೆ, ಹಲ್ಲೆ ಮಾಡಿದವರ ವಿರುದ್ಧ ಎಫ್ ಐಆರ್ ದಾಖಲು ಮಾಡಲು ವೈದ್ಯರು ಆಗ್ರಹಿಸಿದ್ದಾರೆ.

The post ರೋಗಿಗಳ ಸಂಬಂಧಿಕರಿಂದ ಹಲ್ಲೆ.. ತರಬೇತಿ ವೈದ್ಯರಿಂದ ಪ್ರತಿಭಟನೆ appeared first on News First Kannada.

Source: newsfirstlive.com

Source link