ದಾವಣಗೆರೆ: ಓರ್ವ ಸೋಂಕಿತನಿಗೆ ಅಳವಡಿಸಲಾಗದ್ದ ಆಕ್ಸಿಜನ್ ಸಂಪರ್ಕವನ್ನು ತೆಗೆದು ಮತ್ತೊಬ್ಬ ಸೋಂಕಿತನಿಗೆ ಜೋಡಿಸಿದ್ದರಿಂದ ಆಕ್ಸಿಜನ್ ಕೊರತೆಯಾಗಿ ಸೋಂಕಿತ ಸಾವನ್ನಪ್ಪಿದ್ದಾರೆಂದು ಮೃತ ಸೋಂಕಿತನ ಸಹೋದರ ವೈದ್ಯರ ಮೇಲೆ ಆರೋಪ ಹೊರಿಸಿರುವ ಘಟನೆ ದಾವಣಗೆರೆಯ ಸಿಜಿ ಆಸ್ಪತ್ರೆಯ MICU ಘಟಕದಲ್ಲಿ ನಡೆದಿದೆ. ಮಾಲತೇಶ ಬಡಿಗೇರ(42) ಮೃತಪಟ್ಟ ಸೋಂಕಿತ.

ದಾವಣಗೆರೆ ಜಿಲ್ಲೆ ಹೊನ್ನಾಳಿ‌ ತಾಲೂಕಿನ ಹಿರೇಬಾಸೂರು ನಿವಾಸಿ ಮಾಲತೇಶ ಬಡಿಗೇರ ಕೊರೊನಾ ಸೋಂಕಿನಿಂದಾಗಿ ತೀವ್ರ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದರು.. ಜಿಲ್ಲಾಸ್ಪತ್ರೆಯ MICU ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎನ್ನಲಾಗಿದೆ, ಅಲ್ಲದೇ ಆಕ್ಸಿಜನ್ ಅನಿವಾರ್ಯವಿದ್ದ ಕಾರಣ ಅವರಿಗೆ ಆಕ್ಸಿಜನ್ ನೀಡಲಾಗುತ್ತಿತ್ತು ಎನ್ನಲಾಗಿದೆ.

ಮಾಲತೇಶ್ ಬಡಿಗೇರ ಅವರ ಪಕ್ಕದ ಬೆಡ್​ಗೆ ಇಂದು ಮತ್ತೊಬ್ಬ ರೋಗಿ ದಾಖಲಾಗಿದ್ದು ಅಲ್ಲಿದ್ದ ವೈದ್ಯರು ಮಾಲತೇಶ ಅವರಿಗೆ ನೀಡಲಾಗಿದ್ದ ಆಕ್ಸಿಜನ್ ಸಂಪರ್ಕವನ್ನ ತೆಗೆದು ಹೊಸರೋಗಿಗೆ ಹಾಕಿದ್ರು ಎನ್ನಲಾಗಿದ್ದು ಆಕ್ಸಿಜನ್ ಕೊರತೆಯಿಂದ ಒದ್ದಾಡಿ ಮಾಲತೇಶ ಸಾವನ್ನಪ್ಪಿದ್ದಾರೆ ಎಂದು ಮೃತನ ಸಹೋದರ ಪ್ರವೀಣ ಡಾ. ಬಸವರಾಜ್ ಎನ್ನುವವರ ಮೇಲೆ ಆರೋಪ ಹೊರಿಸಿದ್ದಾರೆ.

The post ರೋಗಿಗೆ ನೀಡಿದ್ದ ಆಕ್ಸಿಜನ್ ತೆಗೆದು ಮತ್ತೊಬ್ಬ ರೋಗಿಗೆ ಅಳವಡಿಸಿದ ಆರೋಪ; ಸೋಂಕಿತ ಸಾವು appeared first on News First Kannada.

Source: newsfirstlive.com

Source link