ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವ ಮೂಲಕ  ಆರೋಗ್ಯವನ್ನು ಹಾಳು ಮಾಡುವ ಹಲವಾರು ರೋಗಗಳಿಂದ ದೇಹವನ್ನು ರಕ್ಷಿಸಿಕೊಳ್ಳಬಹುದಾಗಿದೆ. ಈ ಸಲುವಾಗಿ ದಿನನಿತ್ಯದ  ಕೆಲವು ಆರೋಗ್ಯ ಕ್ರಮಗಳ ಮೂಲಕ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಅಧಿಕಗೊಳಿಸಿಕೊಳ್ಳಬಹುದಾಗಿದೆ.

ಹಲವಾರು ನೈಸರ್ಗಿಕ ವಸ್ತುಗಳನ್ನು ಬಳಸಿ ಕಷಾಯವನ್ನು ತಯಾರಿಸಿ ದಿನ ನಿತ್ಯ ಸೇವಿಸುವುದರಿಂದ ನಮ್ಮ  ಆರೋಗ್ಯವನ್ನು ಸಮತೋಲನದಲ್ಲಿಟ್ಟುಕೊಳ್ಳಬಹುದಾಗಿದೆ. ಅಂತಹ ಒಂದು ಕಷಾಯದ ಕುರಿತಾದ ಮಾಹಿತಿ ಇಲ್ಲಿದೆ.

ಕಷಾಯ ಮಾಡಲು ಬೇಕಾಗುವ ಸಾಮಾಗ್ರಿಗಳು

ಹಿತ್ತಲ ತುಳಸಿ, ಅರಶಿನ, ಶುಂಠಿ , ಜೀರಿಗೆ, ಬೆಲ್ಲ, ಲಿಂಬೆ ರಸ

ಇದನ್ನೂ ಓದಿ:“ಯಾವ ದುರುದ್ದೇಶ ನನ್ನಲ್ಲಿರಲಿಲ್ಲ” : ಪೊಲೀಸರ ಪ್ರಶ್ನೆಗೆ ನಟ ದೀಪ್ ಸಿಧು ಪ್ರತಿಕ್ರಿಯೆ

ಕಷಾಯ ತಯಾರಿಸುವ ವಿಧಾನ

ಹಿತ್ತಲ ತುಳಸಿ ಮತ್ತು ಒಂದು ಚಮಚದಷ್ಟು ಅರಶಿನ , ಒಂದು ಚಮಚ ಜೀರಿಗೆ, ಒಂದು ಸಣ್ಣ ತುಂಡು ಶುಂಠಿ, ಒಂದು ಚಮಚ ಬೆಲ್ಲ (ಮಧುಮೇಹಿಗಳು ಬೆಲ್ಲವನ್ನು ಸೇರಿಸದೆ ಬಳಸಬಹುದು) ಮತ್ತು ಸ್ಪಲ್ಪ ಲಿಂಬೆ ರಸವನ್ನು ಸೇರಿಸಿ ಪುಡಿ ಮಾಡಿ ಇಟ್ಟುಕೊಳ್ಳಿ. ನಂತರ ಪ್ರತಿ ನಿತ್ಯ ರಾತ್ರಿ ಮಲಗುವಾಗ ಮತ್ತು ಬೆಳಿಗ್ಗೆ ಟೀ ಅಥವಾ ಕಾಫಿಯ ಬದಲಿಗೆ ಈ ಪುಡಿಯನ್ನು ಒಂದು ಲೋಟ ನೀರಿಗೆ ಬೆರಸಿ ಕುದಿಸಿ ಕುಡಿಯಿರಿ. ಒಂದು ವೇಳೆ ಹಸುವಿನ ಹಾಲು ಲಭ್ಯವಿದ್ದರೆ ಅದನ್ನೂ ಸೇರಿಸಿದರೆ ಒಳ್ಳೆಯದು.  ಅಮೃತ ಬಳ್ಳಿ ಲಭ್ಯವಿದ್ದರೆ ಅದನ್ನೂ ಸೇರಿಸಿದರೆ ಇನ್ನೂ ಒಳ್ಳೆಯದು.

ಈ ಕಷಾಯವನ್ನು ದಿನ ನಿತ್ಯ ಸೇವನೆ ಮಾಡುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿತ್ತದೆ ಮತ್ತು ಅಸಿಡಿಟಿ, ಹೊಟ್ಟೆಯುಬ್ಬರದಂತಹ ಸಮಸ್ಯೆಗಳಿಗೆ ಇದು ರಾಮಬಾಣವಾಗಿ ಕಾರ್ಯನಿರ್ವಹಿಸುತ್ತದೆ.

ಆರೋಗ್ಯ – Udayavani – ಉದಯವಾಣಿ
Read More