ರೋಚಕ ಹಣಾಹಣಿ ಪಂದ್ಯದ ಕೊನೆ ಕ್ಷಣದಲ್ಲಿ ಸೋತ ಬೆಂಗಳೂರು ಬುಲ್ಸ್


ಪ್ರೊ ಕಬಡ್ಡಿ ಲೀಗ್‌ 8ನೇ ಆವೃತ್ತಿಯ 93ನೇ ಪಂದ್ಯದಲ್ಲಿ ದಬಾಂಗ್‌ ದಿಲ್ಲಿ ತಂಡದ ವಿರುದ್ಧ ಬೆಂಗಳೂರು ಬುಲ್ಸ್ ಡ್ರಾ ಮಾಡಿಕೊಂಡಿದೆ.

ವೈಟ್‌ಫೀಲ್ಡ್‌ನ ಶೆರಟಾನ್‌ ಗ್ರ್ಯಾಂಡ್‌ ಹೋಟೆಲ್‌ನ ಸಭಾಂಗಣದಲ್ಲಿ ನಡೆದ ಪಂದ್ಯದಲ್ಲಿ ಉಭಯ ತಂಡಗಳು 36-36 ಅಂಕಗಳಿಂದ ಸಮಬಲದ ಹೋರಾಟ ನಡೆಸಿದವು. ಆದ್ರೆ ಪಂದ್ಯ ಮುಕ್ತಾಯಕ್ಕೆ ಎರಡು ನಿಮಿಷ ಬಾಕಿ ಇರುವಾಗ ಮುನ್ನಡೆಯಲ್ಲಿದ್ದ ಬೆಂಗಳೂರು ತಂಡ ಕೊನೆಯಲ್ಲಿ ಸತತವಾಗಿ ಅಂಕ ಬಿಟ್ಟು ಕೊಟ್ಟು 10ನೇ ಗೆಲುವಿನ ಅವಕಾಶವನ್ನು ಕೈಚೆಲ್ಲಿತು.

ಆಡಿದ 18 ಪಂದ್ಯಗಳಿಂದ 54 ಅಂಕಗಳೊಂದಿಗೆ ಬುಲ್ಸ್‌ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ದಬಾಂಗ್‌ ದಿಲ್ಲಿ 57 ಅಂಕಗಳೊಂದಿಗೆ ಮೊದಲ ಸ್ಥಾನ ಪಡೆದಿದೆ.

News First Live Kannada


Leave a Reply

Your email address will not be published.