
Image Credit source: Rakesh Roshan/ Twitter
Hrithik Roshan | Hrehaan | Hridhaan: ಇತ್ತೀಚೆಗೆ ಹೃತಿಕ್ ತಂದೆ ಖ್ಯಾತ ನಿರ್ಮಾಪಕ ರಾಕೇಶ್ ರೋಷನ್ ಹೊಸ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ಬಹಳ ಆಪ್ತವಾದ ಕೌಟುಂಬಿಕ ಫೋಟೋದಲ್ಲಿ ಸಬಾ ಕೂಡ ಕಾಣಿಸಿಕೊಂಡಿದ್ದು, ನಗುತ್ತಾ ಸಂತಸದಿಂದ ಪೋಸ್ ನೀಡಿದ್ದಾರೆ. ಚಿತ್ರದಲ್ಲಿ ಹೃತಿಕ್ ಮಕ್ಕಳೂ ಕೂಡ ಕಾಣಿಸಿಕೊಂಡಿದ್ದಾರೆ.
ಬಾಲಿವುಡ್ನಲ್ಲಿ ಸದ್ಯಕ್ಕೆ ಸಖತ್ ಸುದ್ದಿಯಲ್ಲಿರುವ ಜೋಡಿಗಳಾದ ಹೃತಿಕ್ ರೋಷನ್ (Hrithik Roshan) ಹಾಗೂ ಸಬಾ ಆಜಾದ್ (Saba Azad) ಇದುವರೆಗೆ ತಮ್ಮ ಸಂಬಂಧದ ಬಗ್ಗೆ ಎಲ್ಲೂ ಬಹಿರಂಗವಾಗಿ ಮಾತನಾಡಿಲ್ಲ. ಆದರೆ ಈರ್ವರ ಪ್ರವಾಸ, ಸುತ್ತಾಟಗಳು, ಫೋಟೋಗಳು ಇಬ್ಬರ ನಡುವಿನ ಆಪ್ತತೆಯನ್ನು ಬಹಿರಂಗಪಡಿಸಿದೆ. ಇದರೊಂದಿಗೆ ಸಬಾ ಹೆಚ್ಚಾಗಿ ಹೃತಿಕ್ ಕುಟುಂಬದ ಕಾರ್ಯಕ್ರಮಗಳಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಹೃತಿಕ್ ತಂದೆ ಖ್ಯಾತ ನಿರ್ಮಾಪಕ ರಾಕೇಶ್ ರೋಷನ್ (Rakesh Roshan) ಹೊಸ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ಬಹಳ ಆಪ್ತವಾದ ಕೌಟುಂಬಿಕ ಫೋಟೋದಲ್ಲಿ ಸಬಾ ಕೂಡ ಕಾಣಿಸಿಕೊಂಡಿದ್ದು, ನಗುತ್ತಾ ಸಂತಸದಿಂದ ಪೋಸ್ ನೀಡಿದ್ದಾರೆ. ರಾಕೇಶ್ ರೋಷನ್ ಸೋದರ ರಾಜೇಶ್ ರೋಷನ್ ಅವರ ಪುತ್ರ ಈಶಾನ್ ರೋಷನ್ ಹುಟ್ಟುಹಬ್ಬದ ಕಾರಣ ಕುಟುಂಬ ಔತಣಕೂಟದಲ್ಲಿ ಏರ್ಪಡಿಸಿತ್ತು. ಇದರಲ್ಲಿ ಹೃತಿಕ್ ತಮ್ಮ ಮೊದಲ ಪತ್ನಿಯ ಮಕ್ಕಳಾದ ರೆಹಾನ್ ಹಾಗೂ ಹೃದಾನ್ ಜತೆ ಭಾಗಿಯಾಗಿದ್ದರು. ಇವರೊಂದಿಗೆ ತಮ್ಮ ಗೆಳತಿ ಸಬಾರನ್ನೂ ಹೃತಿಕ್ ಕರೆದೊಯ್ದಿದ್ದರು. ನಂತರ ಎಲ್ಲರೂ ಸಂತಸದಿಂದ ಫೋಟೋಗೆ ಪೋಸ್ ನೀಡಿದ್ದಾರೆ. ಈ ಚಿತ್ರ ಸದ್ಯ ವೈರಲ್ ಆಗಿದೆ.
ಹೃತಿಕ್ ತಂದೆಯೇ ಫೋಟೋ ಹಂಚಿಕೊಂಡಿರುವುದರಿಂದ ಸಬಾ ಹಾಗೂ ಹೃತಿಕ್ ಆಪ್ತತೆಯ ಬಗ್ಗೆ ಅಭಿಮಾನಿಗಳು ಮತ್ತಷ್ಟು ಕುತೂಹಲಗೊಂಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಜೋರಾಗಿದ್ದು, ಈ ತಾರಾ ಜೋಡಿ ತಮ್ಮ ಸಂಬಂಧವನ್ನು ಯಾವಾಗ ಅಧಿಕೃತವಾಗಿ ಘೋಷಿಸಬಹುದು ಎಂಬುದರ ಬಗ್ಗೆ ಅಭಿಮಾನಿಗಳು ಕಾತರರಾಗಿದ್ದಾರೆ.
ರಾಕೇಶ್ ರೋಶನ್ ಹಂಚಿಕೊಂಡ ಟ್ವೀಟ್ ಇಲ್ಲಿದೆ:
Eshu birthday greetings with a warm family celebration ❤️ pic.twitter.com/0lte9UkDmO
— Rakesh Roshan (@RakeshRoshan_N) May 18, 2022