ಮೈಸೂರು: ರೋಹಿಣಿ ಸಿಂಧೂರಿದು ಹಸಿದ ವ್ಯಾಘ್ರನ ಮುಖವಾಡ ಅಂತ ಸಾ.ರಾ.ಮಹೇಶ್​ ಮಹಿಳಾ ಅಧಿಕಾರಿ ವಿರುದ್ಧ ತೀಕ್ಷ್ಣ ವಾಗ್ದಾಳಿ ನಡೆಸಿದ್ದಾರೆ.

ಭೂ ಮಾಫಿಯಾ ನನ್ನ ವರ್ಗಾವಣೆಗೆ ಕಾರಣ ಎಂಬ ಸಿಂಧೂರಿ ಹೇಳಿಕೆ‌ಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನಿಡಿರುವ ಸಾ.ರಾ ಮಹೇಶ್, ತೀವ್ರವಾಗಿ ಹರಿಹಾಯ್ದಿದ್ಆರೆ. ಜೊತೆಗೆ ವೈಯಕ್ತಿಕವಾಗಿಯೂ ಟೀಕೆ ಮಾಡಿರೋ ಸಾ.ರಾ ಮಹೇಶ್,  ರೋಹಿಣಿ ಸಿಂಧೂರಿಗೆ ತಾಯಿ ಹೃದಯ ಇಲ್ಲ. ಹಸುವಿನಂತಿರೋ ವ್ಯಾಘ್ರನ ಮುಖವಾಡ ಅವರದ್ದು ಅಂತ ನಾಲಿಗೆ ಹರಿ ಬಿಟ್ಟಿದ್ದಾರೆ.

ಅಲ್ಲದೇ, ಭೂ ಮಾಫಿಯಾ ನಡೆಯುತ್ತಿದೆ ಅಂದ್ರೆ ಕಳೆದ ಎಂಟು ತಿಂಗಳಿನಿಂದ ಏನ್ ಮಾಡ್ತಾ ಇದ್ರಿ? ಒತ್ತುವರಿ ಬಿಡಿಸಬೇಕಿತ್ತು, ಈಗಲೂ ಯಾಱರು ಒತ್ತುವರಿ ಮಾಡಿಕೊಂಡಿದ್ದಾರೆ ಅಂತಾ ಗೌರ್ನರ್‌ಗೆ ರಿಪೋರ್ಟ್ ಕೊಡಿ ಎಂದು ವಾಗ್ದಾಳಿ ನಡೆಸಿದ್ದಾರೆ. ಅಷ್ಟೇ ಅಲ್ಲ ಇದು ಇಲ್ಲಿಗೇ ನಿಲ್ಲಲ್ಲ.. ಈಗ ಶುರುವಾಗಿದೆ ಅಂತ ಕೂಡ ರೋಹಿಣಿ ಸಿಂಧೂರಿಗೆ ಸಾ.ರಾ. ಮಹೇಶ್ ಎಚ್ಚರಿಕೆ ನೀಡಿದ್ದಾರೆ.

 

 

The post ರೋಹಿಣಿಗೆ ತಾಯಿ ಹೃದಯ ಇಲ್ಲ.. ಹಸುವಿನಂತಿರೋ ವ್ಯಾಘ್ರನ ಮುಖವಾಡ -ಸಾ.ರಾ ಮಹೇಶ್ appeared first on News First Kannada.

Source: newsfirstlive.com

Source link